ಒನ್‌ಪ್ಲಸ್ ದೀಪಾವಳಿ ಆಫರ್, ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ 12,250 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಒನ್‌ಪ್ಲಸ್ 13, 13 ಆರ್, ನಾರ್ಡ್ ಸೇರಿದಂತೆ ಹಲವು ಒನ್‌ಪ್ಲಸ್ ಫೋನ್ ಮೇಲೆ ಬಾರಿ ಡಿಸ್ಕೌಂಟ್ ನೀಡಲಾಗಿದೆ.
ದೀಪಾವಳಿ ಸಂಭ್ರಮ ಶುರುವಾಗಿದೆ. ಎಲ್ಲೆಡೆ ಆಫರ್ ಭರಾಟೆ ಜೋರಾಗಿದೆ. ಗ್ರಾಹಕರಿಗೆ ದೀಪಾವಳಿ ಸಂಭ್ರಮ ಇಮ್ಮಡಿಗೊಳಿಸಲು ಹಾಗೂ ಮಾರಾಟದಲ್ಲಿ ದಾಖಲೆ ಬರೆಯಲು ಹಲವು ಕಂಪನಿಗಳು ಡಿಸ್ಕೌಂಟ್ ಆಫರ್ ನೀಡುತ್ತಿದೆ. ಇದೀಗ ಒನ್‌ಪ್ಲಸ್ ದೀಪಾವಳಿ ಆಫರ್ ಘೋಷಿಸಿದೆ. ಹಲವು ಮೊಬೈಲ್ ಮೇಲೆ ಬರೋಬ್ಬರ 12,250 ರೂಪಾಯಿ ಡಿಸ್ಕೌಂಟ್ ನೀಡಿದೆ.
25
ಒನ್‌ಪ್ಲಸ್ ಸೇರಿ ಇಕಾಮರ್ಸ್‌ನಲ್ಲೂ ಆಫರ್
ಒನ್‌ಪ್ಲಸ್ ಸೇರಿ ಇಕಾಮರ್ಸ್‌ನಲ್ಲೂ ಆಫರ್
ಒನ್‌ಪ್ಲಸ್ ಭಾರತದಲ್ಲಿ ದೀಪಾವಳಿ ಆಫರ್ ಘೋಷಿಸಿದ. ಈ ಆಫರ್ ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್, ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ ಇಕಾಮರ್ಸ್‌ನಲ್ಲೂ ಲಭ್ಯವಿದೆ. ಇಷ್ಟೇ ಅಲ್ಲ ಒನ್‌ಪ್ಲಸ್ ಅಧಿಕೃತ ಶೋ ರೂಂಗಳಲ್ಲೂ ಲಭ್ಯವಿದೆ. ಅಕ್ಟೋಬರ್ 17 ರಿಂದ ಡಿಸ್ಕೌಂಟ್ ಆಫರ್ ಲಭ್ಯವಿದೆ.
35
ಒನ್‌ಪ್ಲಸ್ 13 ಸೀರಿಸ್ ಮೇಲೆ ಬಾರಿ ಡಿಸ್ಕೌಂಟ್
ಒನ್‌ಪ್ಲಸ್ 13 ಸೀರಿಸ್ ಮೇಲೆ ಬಾರಿ ಡಿಸ್ಕೌಂಟ್
ಒನ್‌ಪ್ಲಸ್ 13 ಸೀರಿಸ್ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗುತ್ತಿದೆ. 12,250 ರೂಪಾಯಿ ದೀಪಾವಳಿ ಡಿಸ್ಕೌಂಟ್ ಲಭ್ಯವಿದ್ದರೆ, ಆಯ್ಕೆ ಕಾರ್ಡ್‌ಗಳ ಮೇಲೆ ಬ್ಯಾಂಕ್ ಇನ್‌ಸ್ಟಾಂಟ್ ಡಿಸ್ಕೌಂಟ್ 4,250 ರೂಪಾಯಿ ನೀಡಲಾಗುತ್ತಿದೆ. ಹೀಗಾಗಿ 69,999 ರೂಪಾಯಿ ಒನ್‍ಪ್ಲಸ್ 13 ಮೊಬೈಲ್ 57,749 ರೂಪಾಯಿಗೆ ಲಭ್ಯವಿದೆ. 13 ಆರ್ ಬೆಲೆ 35,749 ರೂಪಾಯಿಗೆ ಇಳಿಕೆಯಾಗಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಒನ್‌ಪ್ಲಸ್ ಇತ್ತೀಚೆಗೆ ಲಾಂಚ್ ಮಾಡಿದ ಬಡ್ಸ್ 4 ಮೇಲೂ ಡಿಸ್ಕೌಂಟ್ ನೀಡಲಾಗಿದೆ. 5,999 ರೂಪಾಯಿಯಿಂದ ಡಿಸ್ಕೌಂಟ್ ಬಳಿಕ 4,799 ರೂಪಾಯಿಗೆ ಲಭ್ಯವಿದೆ. ಇನ್ನು 11,999 ರೂಪಾಯಿ ಬಡ್ಸ್ 3 ಪ್ರೋ ಇದೀಗ 7,999 ರೂಪಾಯಿಗೆ ಲಭ್ಯವಿದೆ.
55
ಡಿಸ್ಕೌಂಟ್ ಆಫರ್ ವೆಬ್‌ಸೈಟ್‌ನಲ್ಲಿ ಪ್ರಕಟ
ಡಿಸ್ಕೌಂಟ್ ಆಫರ್ ವೆಬ್‌ಸೈಟ್‌ನಲ್ಲಿ ಪ್ರಕಟ
ಒನ್‌ಪ್ಲಸ್ ದೀಪಾವಳಿ ಆಫರ್ ಕುರಿತು ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಹೀಗಾಗಿ ಗ್ರಾಹಕರು ಆಫರ್ ಪರಿಶೀಲಿಸಿ ಖರೀದಿಸಲು ಅವಕಾಶ ನೀಡಲಾಗಿದೆ. ಈ ಬಾರಿ ದೀಪಾವಳಿಗೆ ಒನ್‌ಪ್ಲಸ್ ಮಾರಾಟದಲ್ಲಿ ದಾಖಲೆ ಬರೆಯಲು ಮುಂದಾಗಿದೆ.