ಈ ಗ್ರಾಮದಲ್ಲಿ ಕೇಳಿಸುವುದು ಬರೀ ಕಿರುಚಾಟ, ಹೋಗಿ ನೋಡಿದರೆ ಕಾಣಿಸೋದು ಮನುಷ್ಯರಲ್ಲ, ದೆವ್ವಗಳೇ!

Published : May 15, 2026, 12:05 PM IST

Worlds Most Haunted Village Pluckley ಯುಕೆಯ ಪ್ಲಕ್ಲಿ ಗ್ರಾಮ ದೆವ್ವ ಹಿಡಿದ ಹಳ್ಳಿಯೆಂದು ಕರೆಯಲಾಗುತ್ತಿದ್ದು, ಇಲ್ಲಿ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳ ಆತ್ಮಗಳೂ ರಾತ್ರಿ ವೇಳೆ ಅಲೆದಾಡುತ್ತವೆ ಎಂಬ ಭಯಾನಕ ನಂಬಿಕೆ ಇದೆ. 

PREV
14
Most Haunted Village

ಲಂಡನ್‌ನಿಂದ ಕೇವಲ ಒಂದು ಗಂಟೆ ದೂರದಲ್ಲಿರುವ ಪ್ಲಕ್ಲಿ ಗ್ರಾಮವನ್ನು ವಿಶ್ವದ ಅತ್ಯಂತ ದೆವ್ವ ಹಿಡಿದ ಹಳ್ಳಿ ಎಂದು ಕರೆಯಲಾಗುತ್ತದೆ. ಹೊರಗೆ ನೋಡಲು ಸಾಮಾನ್ಯ ಹಳ್ಳಿಯಂತೆ ಕಾಣುವ ಈ ಸ್ಥಳ ರಾತ್ರಿ ಬಿದ್ದರೆ ಭಯಾನಕ ರೂಪ ತಾಳುತ್ತದೆ ಎನ್ನಲಾಗುತ್ತದೆ. ರಾತ್ರಿಯ ವೇಳೆ ಇಲ್ಲಿ ಮಾನವರಷ್ಟೇ ಅಲ್ಲ, ಪ್ರಾಣಿಗಳ ಆತ್ಮಗಳೂ ಅಲೆದಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. 1989ರಲ್ಲಿ ಈ ಗ್ರಾಮ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲೂ “Most Haunted Village” ಎಂದು ದಾಖಲಾಗಿತ್ತು ಎಂಬ ವರದಿಗಳಿವೆ.

24
ಭಯಾನಕ ಸ್ಥಳ

ಈ ಹಳ್ಳಿಯಲ್ಲಿ ದೆವ್ವಗಳು ಕಾಣಿಸಿಕೊಳ್ಳುತ್ತವೆ ಎನ್ನಲಾದ ಒಟ್ಟು 12 ಭಯಾನಕ ಸ್ಥಳಗಳಿವೆ. ಹಳ್ಳಿಯ ರಸ್ತೆಗಳಲ್ಲಿ ನಡೆಯುವಾಗ ಯಾರೋ ಹಿಂದಿನಿಂದ ಕರೆಯುವ ಅನುಭವ ಆಗುತ್ತದೆ ಎಂದು ಪ್ರವಾಸಿಗರು ಹೇಳಿಕೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಅದು ಮನುಷ್ಯರ ಧ್ವನಿಯೇ ಆಗಿರಬೇಕೆಂದಿಲ್ಲ, ಆತ್ಮಗಳ ಕರೆಯೂ ಆಗಿರಬಹುದು.

34
ವಿಭಿನ್ನ ಕಥೆ

ಪ್ಲಕ್ಲಿಯ ಪ್ರತಿಯೊಂದು ದೆವ್ವಕ್ಕೂ ವಿಭಿನ್ನ ಕಥೆಗಳಿವೆ. “ಸ್ಕ್ರೀಮಿಂಗ್ ಮ್ಯಾನ್” ಎಂಬ ಆತ್ಮ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಬಿದ್ದು ಮೃತಪಟ್ಟವನದು ಎಂದು ನಂಬಲಾಗಿದೆ. “ಹೈವೇಮ್ಯಾನ್” ಎಂಬ ದೆವ್ವವನ್ನು ಕತ್ತಿಯಿಂದ ಕೊಂದು ಮರಕ್ಕೆ ನೇಣು ಹಾಕಲಾಗಿತ್ತು ಎನ್ನಲಾಗುತ್ತದೆ. ಇನ್ನೊಬ್ಬ ವೃದ್ಧೆಯ ಆತ್ಮ ತನ್ನ ಮನೆಯಲ್ಲಿ ಬೆಂಕಿಗೆ ಆಹುತಿಯಾದ ಬಳಿಕ ಇಲ್ಲೇ ತಿರುಗಾಡುತ್ತಿದೆ ಎಂಬ ಕಥೆಯೂ ಪ್ರಸಿದ್ಧ.

44
ಜನಪ್ರಿಯ ಪ್ರವಾಸಿ ತಾಣ

ಭಯಾನಕ ಕಥೆಗಳಿದ್ದರೂ ಪ್ಲಕ್ಲಿ ಇಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಚರ್ಚ್, ಶಾಲೆ, ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿರುವ ಈ ಹಳ್ಳಿಗೆ ಸಾಹಸ ಪ್ರಿಯರು ಹಾಗೂ ಪ್ಯಾರಾನಾರ್ಮಲ್ ಅನುಭವ ಹುಡುಕುವವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories