Washing machine care tips Kannada: ವಾಷಿಂಗ್ ಮಷಿನ್‌ಗೆ ಅತಿ ಹೆಚ್ಚು ಬಟ್ಟೆಗಳನ್ನು ಒಟ್ಟಿಗೆ ಹಾಕುವುದು ಅಥವಾ ಜೇಬುಗಳನ್ನು ಪರೀಕ್ಷಿಸದೆ ಬಟ್ಟೆ ಒಗೆಯುವುದು ನಿಮ್ಮ ಮಷಿನ್ ಅನ್ನು ಕಸದ ಬುಟ್ಟಿಗೆ ಸೇರಿಸಬಹುದು! ಮಷಿನ್ ದೀರ್ಘಕಾಲ ಹೊಸದರಂತೆ ಇರಲು ಇಲ್ಲಿವೆ ಸಿಂಪಲ್ ಟಿಪ್ಸ್..
ಇಂದಿನ ಧಾವಂತದ ಜೀವನದಲ್ಲಿ ವಾಷಿಂಗ್ ಮಷಿನ್ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಬಟ್ಟೆಗಳನ್ನು ಮಷಿನ್ ಒಳಗೆ ಹಾಕಿ ಬಟನ್ ಒತ್ತಿದರೆ ಕೆಲಸ ಮುಗಿಯಿತು ಎಂದು ನಾವು ಭಾವಿಸುತ್ತೇವೆ. ಆದರೆ ನಾವು ಮಾಡುವ ಸಣ್ಣ ತಪ್ಪುಗಳು ಮಷಿನ್ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ?, ಮಷಿನ್ ಪದೇ ಪದೇ ರಿಪೇರಿಗೆ ಬರುತ್ತಿದೆ ಎಂದರೆ ಅದಕ್ಕೆ ಕಾರಣ ಕಂಪನಿಯ ಲೋಪವಲ್ಲ, ನಾವು ಬಳಸುವ ತಪ್ಪಾದ ವಿಧಾನ ಎಂದು ತಜ್ಞರು ಎಚ್ಚರಿಸುತ್ತಾರೆ.
26
ಓವರ್‌ಲೋಡಿಂಗ್
ಕಡಿಮೆ ಸಮಯದಲ್ಲಿ ಹೆಚ್ಚು ಬಟ್ಟೆ ಒಗೆಯುವ ಆತುರದಲ್ಲಿ ಮಷಿನ್ ಸಾಮರ್ಥ್ಯಕ್ಕಿಂತ ಹೆಚ್ಚು ಲೋಡ್ ಮಾಡುವುದು ನಾವು ಮಾಡುವ ದೊಡ್ಡ ತಪ್ಪು. ಸಾಮರ್ಥ್ಯ ಮೀರಿ ಬಟ್ಟೆ ಹಾಕುವುದರಿಂದ ಮೋಟಾರ್ ಮೇಲೆ ಒತ್ತಡ ಬಿದ್ದು ಅದು ಸುಟ್ಟು ಹೋಗುವ ಅಪಾಯವಿರುತ್ತದೆ. ಅಲ್ಲದೆ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗುವುದಿಲ್ಲ.
36
ಸೆಟ್ಟಿಂಗ್‌ಗಳ ಬಗ್ಗೆ ನಿರ್ಲಕ್ಷ್ಯ
ಪ್ರತಿಯೊಂದು ಬಟ್ಟೆಗೂ ಅದರದ್ದೇ ಆದ 'ವಾಷಿಂಗ್ ಮೋಡ್' ಇರುತ್ತದೆ. ಸರಿಯಾದ ಸೆಟ್ಟಿಂಗ್ ಆರಿಸದಿದ್ದರೆ ಬಟ್ಟೆಯ ಬಣ್ಣ ಮಸುಕಾಗುವುದು ಅಥವಾ ಬಟ್ಟೆ ಹರಿದುಹೋಗುವ ಸಾಧ್ಯತೆ ಇರುತ್ತದೆ. ಮಷಿನ್ ಜೊತೆಗೆ ಸಿಗುವ 'ಯೂಸರ್ ಮ್ಯಾನುಯಲ್' ಓದುವುದು ಉತ್ತಮ.
ಬಟ್ಟೆಗಳನ್ನು ಮಷಿನ್ ಒಳಗೆ ಹಾಕುವ ಮೊದಲು ಜೇಬುಗಳನ್ನು ಪರೀಕ್ಷಿಸುವುದು ಬಹಳ ಮುಖ್ಯ. ಜೇಬುಗಳಲ್ಲಿ ಮರೆತ ನಾಣ್ಯಗಳು, ಕೀಲಿ ಕೈಗಳು ಅಥವಾ ಪಿನ್‌ಗಳು ವಾಷಿಂಗ್ ಡ್ರಮ್ ಅಥವಾ ಪೈಪ್‌ಗಳಲ್ಲಿ ಸಿಕ್ಕಿಹಾಕಿಕೊಂಡು ಮಷಿನ್‌ಗೆ ಭಾರಿ ಹಾನಿ ಉಂಟುಮಾಡಬಹುದು.
56
ಹೆಚ್ಚು ಡಿಟರ್ಜೆಂಟ್.. ಹೆಚ್ಚು ನಷ್ಟ
ಬಟ್ಟೆ ಹೆಚ್ಚು ಕೊಳೆಯಾಗಿದೆ ಎಂದು ಜಾಸ್ತಿ ಸರ್ಫ್ ಅಥವಾ ಲಿಕ್ವಿಡ್ ಬಳಸುವುದು ತಪ್ಪು. ಅವಶ್ಯಕತೆಗಿಂತ ಹೆಚ್ಚು ಡಿಟರ್ಜೆಂಟ್ ಬಳಸಿದರೆ ಅದು ನೀರಿನಲ್ಲಿ ಸರಿಯಾಗಿ ಕರಗದೆ ಪೈಪ್‌ಗಳಲ್ಲಿ ಶೇಖರಣೆಯಾಗುತ್ತದೆ. ಇದರಿಂದ ಮಷಿನ್ ಒಳಗಿನಿಂದ ದುರ್ವಾಸನೆ ಬರಲು ಶುರುವಾಗುತ್ತದೆ.
66
ಮಷಿನ್ ಕ್ಲೀನಿಂಗ್ ಮರೆಯಬೇಡಿ
ಬಟ್ಟೆ ಸ್ವಚ್ಛ ಮಾಡುವ ಮಷಿನ್ ಅನ್ನು ಕೂಡ ನಾವು ಸ್ವಚ್ಛ ಮಾಡಬೇಕು! ಬಟ್ಟೆಯಿಂದ ಬಂದ ಕೊಳೆ ಮತ್ತು ನೂಲುಗಳು ಮಷಿನ್ ಒಳಗೆ ಉಳಿದುಕೊಳ್ಳುತ್ತವೆ. ತಿಂಗಳಿಗೊಮ್ಮೆ 'ಟಬ್ ಕ್ಲೀನ್' ಆಪ್ಷನ್ ಬಳಸಿ ಮಷಿನ್ ಸ್ವಚ್ಛಗೊಳಿಸದಿದ್ದರೆ ಅದು ಬ್ಯಾಕ್ಟೀರಿಯಾಗಳ ತಾಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.