ಕಮೋಡ್‌ನಲ್ಲಿ ಊಟ, ಯೂರಿನಲ್‌ನಲ್ಲಿ ಜ್ಯೂಸ್: ತೈವಾನ್‌ನ ಈ ವಿಚಿತ್ರ ಹೋಟೆಲ್ ವಿಡಿಯೋ ವೈರಲ್

Published : Oct 24, 2026, 08:51 PM IST

ಕಮೋಡ್‌ನಲ್ಲಿ ಊಟ, ಯೂರಿನಲ್‌ನಲ್ಲಿ ಜ್ಯೂಸ್! ತೈವಾನ್‌ನಲ್ಲಿರುವ 'ಮಾಡರ್ನ್ ಟಾಯ್ಲೆಟ್' ಎಂಬ ವಿಚಿತ್ರ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಭಾರತೀಯ ವ್ಲಾಗರ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

PREV
14
ಕಮೋಡ್ ಬಟ್ಟಲಿನಲ್ಲಿ ಊಟ... ಯೂರಿನಲ್ ಗ್ಲಾಸ್‌ನಲ್ಲಿ ಜ್ಯೂಸ್!

ಥೀಮ್ ರೆಸ್ಟೋರೆಂಟ್‌ಗಳ ಕಾನ್ಸೆಪ್ಟ್ ಅನ್ನೇ ಬದಲಾಯಿಸಿ, ನೋಡುವವರೇ ಶಾಕ್ ಆಗುವಂತಹ ಪ್ರಯತ್ನವನ್ನು ತೈವಾನ್‌ನ ಈ ಹೋಟೆಲ್ ಮಾಡಿದೆ. ಇಲ್ಲಿ ಸಾಮಾನ್ಯ ಪ್ಲೇಟ್‌ಗಳ ಬದಲು ಕಮೋಡ್ ಆಕಾರದ ಬಟ್ಟಲಿನಲ್ಲಿ ಊಟ, ಯೂರಿನಲ್ ಆಕಾರದ ಗ್ಲಾಸ್‌ನಲ್ಲಿ ಜ್ಯೂಸ್ ಕೊಡುತ್ತಾರೆ. ಭಾರತದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಕಾಂಕ್ಷಾ ಮೊಂಗಾ ಈ ವಿಚಿತ್ರ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಊಟದ ರುಚಿಗೆ 10ಕ್ಕೆ 5 ಮಾರ್ಕ್ಸ್ ಕೊಟ್ಟಿರುವ ಅವರು, ಹೋಟೆಲ್‌ನ ಈ ಹೊಸ ಅನುಭವಕ್ಕೆ ಮಾತ್ರ 10ಕ್ಕೆ 10 ಅಂಕ ಕೊಟ್ಟಿದ್ದಾರೆ.

24
ತೈವಾನ್‌ನ ವಿಚಿತ್ರ ರೆಸ್ಟೋರೆಂಟ್: ಇಂಟರ್‌ನೆಟ್‌ನಲ್ಲಿ ವಿಡಿಯೋ ವೈರಲ್!

ತೈವಾನ್‌ನ 'ಮಾಡರ್ನ್ ಟಾಯ್ಲೆಟ್' (Modern Toilet) ರೆಸ್ಟೋರೆಂಟ್ ಪ್ರತಿದಿನ ಬಳಸುವ ಶೌಚಾಲಯವನ್ನೇ ತನ್ನ ಥೀಮ್ ಆಗಿ ಇಟ್ಟುಕೊಂಡಿದೆ. ಇಲ್ಲಿ ಸಾಮಾನ್ಯ ಕುರ್ಚಿಗಳ ಬದಲು ಟಾಯ್ಲೆಟ್ ಸೀಟ್‌ಗಳಿವೆ. ಊಟ ಬಡಿಸಲು ಮಿನಿಯೇಚರ್ ಕಮೋಡ್ ಆಕಾರದ ಪಿಂಗಾಣಿ ಬಟ್ಟಲುಗಳನ್ನು ಬಳಸುತ್ತಾರೆ. ಅಷ್ಟೇ ಅಲ್ಲ, ಕುಡಿಯುವ ಜ್ಯೂಸ್‌ಗಳನ್ನು ಪುರುಷರ ಮೂತ್ರಾಲಯದ (Urinal) ಆಕಾರದ ಗ್ಲಾಸ್‌ಗಳಲ್ಲಿ ಕೊಡುತ್ತಾರೆ. ಗ್ರಾಹಕರು ಕೂರುವ ಜಾಗದಿಂದ ಹಿಡಿದು ತಿನ್ನುವ ಊಟದವರೆಗೂ ಎಲ್ಲೆಲ್ಲೂ ಟಾಯ್ಲೆಟ್ ಫೀಲ್ ಇರುತ್ತದೆ. ಊಟ ಮಾಡಲು ಸ್ಪೂನ್ ಎತ್ತುವ ಮುನ್ನ ಯಾರಾದರೂ ಒಂದು ಕ್ಷಣ ಯೋಚಿಸುವಂತೆ ಈ ಜಾಗವನ್ನು ಡಿಸೈನ್ ಮಾಡಿದ್ದಾರೆ. ಸಾಮಾನ್ಯ ಊಟವನ್ನೂ ಒಂದು ವಿಚಿತ್ರ ಹಾಗೂ ತಮಾಷೆಯ ಅನುಭವವಾಗಿ ಬದಲಾಯಿಸುವುದೇ ಈ ಹೋಟೆಲ್‌ನ ಉದ್ದೇಶ.

ಆಕಾಂಕ್ಷಾ ಮೊಂಗಾ ಎಂಬ ವ್ಲಾಗರ್ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಸಂಪೂರ್ಣ ಅನುಭವವನ್ನು ವಿಡಿಯೋ ಮಾಡಿದ್ದಾರೆ. ಕಮೋಡ್ ಆಕಾರದ ಬಟ್ಟಲುಗಳಿಂದ ಹಿಡಿದು ಯೂರಿನಲ್ ಗ್ಲಾಸ್‌ಗಳವರೆಗೆ ಈ ಹೋಟೆಲ್ ತನ್ನ ಕಾನ್ಸೆಪ್ಟ್ ಅನ್ನು ಹೇಗೆ ಚಾಚೂತಪ್ಪದೆ ಪಾಲಿಸುತ್ತಿದೆ ಎಂಬುದನ್ನು ಅವರ ವಿಡಿಯೋ ತೋರಿಸಿದೆ.

34
ಡಾರ್ಕ್ ಚಾಕಲೇಟ್ ತಿಂದ್ರೆ ಇದೇ ನೆನಪಾಗುತ್ತೆ!

ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿ ಕೊಟ್ಟ ಒಂದು ಚಾಕಲೇಟ್ ಡೆಸರ್ಟ್ ಎಲ್ಲರ ಗಮನ ಸೆಳೆದಿದೆ. ಮನುಷ್ಯನ ಮಲದ ಆಕಾರದಲ್ಲೇ ವಿನ್ಯಾಸ ಮಾಡಿದ್ದ ಆ ಡಾರ್ಕ್ ಚಾಕಲೇಟ್ ಐಸ್‌ಕ್ರೀಮ್ ನೋಡಿ ಆಕಾಂಕ್ಷಾ ಶಾಕ್ ಆಗಿದ್ದಾರೆ. "ಇನ್ಮುಂದೆ ನನ್ನ ಲೈಫ್‌ನಲ್ಲಿ ಡಾರ್ಕ್ ಚಾಕಲೇಟ್ ಐಸ್‌ಕ್ರೀಮ್ ಅನ್ನು ಸಾಮಾನ್ಯವಾಗಿ ನೋಡಲು ಸಾಧ್ಯವೇ ಇಲ್ಲ" ಎಂದು ಅವರು ನಗುತ್ತಾ ಹೇಳಿದ್ದಾರೆ. ಈ ವಿಡಿಯೋಗೆ ಇಂಟರ್‌ನೆಟ್‌ನಲ್ಲಿ ಬಗೆಬಗೆಯ ಕಮೆಂಟ್‌ಗಳು ಬರುತ್ತಿವೆ.

ಕೆಲವರು ಈ ಐಡಿಯಾ ಸಖತ್ ಕ್ರಿಯೇಟಿವ್ ಆಗಿದೆ ಎಂದರೆ, ಇನ್ನು ಕೆಲವರು ಟಾಯ್ಲೆಟ್ ಆಕಾರದ ಪ್ಲೇಟ್‌ನಲ್ಲಿ ಊಟ ಮಾಡುವ ಈ ವಿಚಿತ್ರ ಆಸೆಯನ್ನು ಟೀಕಿಸಿದ್ದಾರೆ. ಜನರು ಊಟಕ್ಕೆ ಬರುತ್ತಾರೋ ಇಲ್ಲವೋ, ಆದರೆ ಬಂದ ಪ್ರತಿಯೊಬ್ಬರೂ ಇದರ ಬಗ್ಗೆ ಮಾತನಾಡುವಂತೆ ಮಾಡುವಲ್ಲಿ ಈ 'ಮಾಡರ್ನ್ ಟಾಯ್ಲೆಟ್' ಹೋಟೆಲ್ ಗೆದ್ದಿದೆ.

44
ತೈವಾನ್‌ನ ಈ ವಿಚಿತ್ರ ರೆಸ್ಟೋರೆಂಟ್‌ನಲ್ಲಿ ನೀವೂ ಟ್ರೈ ಮಾಡ್ತೀರಾ?

ತೈವಾನ್‌ನಲ್ಲಿರುವ 'ಮಾಡರ್ನ್ ಟಾಯ್ಲೆಟ್' ಎಂಬ ಜನಪ್ರಿಯ ರೆಸ್ಟೋರೆಂಟ್, ಶೌಚಾಲಯವನ್ನೇ ತನ್ನ ಸಂಪೂರ್ಣ ಥೀಮ್ ಆಗಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಇಲ್ಲಿ ಸಾಮಾನ್ಯ ಪ್ಲೇಟ್‌ಗಳ ಬದಲು ಕಮೋಡ್ ಆಕಾರದ ಬಟ್ಟಲುಗಳಲ್ಲಿ ಊಟ ಹಾಗೂ ಯೂರಿನಲ್ ಆಕಾರದ ಗ್ಲಾಸ್‌ಗಳಲ್ಲಿ ಜ್ಯೂಸ್ ಬಡಿಸಲಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories