ನೊರೆ ಹೆಚ್ಚಾದ್ರೆ ಬಟ್ಟೆ ಕ್ಲೀನ್ ಆಗುತ್ತೆ ಅನ್ಕೋಬೇಡಿ! ಶೇ. 90ರಷ್ಟು ಜನರು ಮಾಡೋ ದೊಡ್ಡ ತಪ್ಪು ಇದೇ

Published : Feb 15, 2026, 12:37 PM IST

Proper detergent measurement: ಬಟ್ಟೆ ಒಗೆಯುವಾಗ ಹೆಚ್ಚು ನೊರೆ ಬಂದರೆ ಬಟ್ಟೆ ಚೆನ್ನಾಗಿ ಸ್ವಚ್ಛವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ವಾಷಿಂಗ್ ಮಷಿನ್ ಆಗಿರಲಿ ಅಥವಾ ಕೈಯಿಂದ ಒಗೆಯುವಾಗ ಆಗಿರಲಿ, ಅಗತ್ಯಕ್ಕಿಂತ ಹೆಚ್ಚು ಡಿಟರ್ಜೆಂಟ್ ಬಳಸುವುದು ಬಟ್ಟೆಗಳನ್ನು ಸ್ವಚ್ಛಗೊಳಿಸುವ ಬದಲು… 

PREV
16
ಬಟ್ಟೆ, ಆರೋಗ್ಯ ಎರಡಕ್ಕೂ ಹಾನಿಕಾರಕ

ಇಂದಿನ ಆಧುನಿಕ ಜೀವನಶೈಲಿಯಲ್ಲಿ ವಾಷಿಂಗ್ ಮೆಷಿನ್ ಪ್ರತಿಯೊಬ್ಬರ ಮನೆಯ ಅವಿಭಾಜ್ಯ ಅಂಗವಾಗಿದೆ. ಬಟ್ಟೆಗಳ ವಿಧಕ್ಕೆ ಅನುಗುಣವಾಗಿ ವಿವಿಧ 'ಮೋಡ್'ಗಳು ಲಭ್ಯವಿರುವುದರಿಂದ ಬಟ್ಟೆ ಒಗೆಯುವುದು ಈಗ ಸುಲಭವಾಗಿದೆ. ಆದರೆ, ಬಟ್ಟೆ ಒಗೆಯುವಾಗ ನಾವು ಮಾಡುವ ಒಂದು ಸಾಮಾನ್ಯ ತಪ್ಪು ಎಂದರೆ ಅತಿಯಾದ ಡಿಟರ್ಜೆಂಟ್ ಬಳಕೆ. ಹೆಚ್ಚಿನ ನೊರೆ ಬಂದರೆ ಬಟ್ಟೆ ಹೆಚ್ಚು ಸ್ವಚ್ಛವಾಗುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ವಾಸ್ತವದಲ್ಲಿ, ಅಗತ್ಯಕ್ಕಿಂತ ಹೆಚ್ಚು ಡಿಟರ್ಜೆಂಟ್ ಬಳಸುವುದು ಬಟ್ಟೆ ಮತ್ತು ಆರೋಗ್ಯ ಎರಡಕ್ಕೂ ಹಾನಿಕಾರಕ.

26
ಹೆಚ್ಚು ಡಿಟರ್ಜೆಂಟ್ ಬಳಸಿದ್ರೆ ಏನಾಗುತ್ತೆ?

ಅತಿಯಾದ ಡಿಟರ್ಜೆಂಟ್ ಬಳಸಿದಾಗ ಅದು ಬಟ್ಟೆಗಳಿಂದ ಪೂರ್ತಿಯಾಗಿ ಹೊರಹೋಗದೆ ಎಳೆಗಳ ನಡುವೆ ಅಂಟಿಕೊಳ್ಳುತ್ತದೆ. ಇದು ಹೊರಗಿನ ಧೂಳು ಮತ್ತು ಮಣ್ಣನ್ನು ತನ್ನತ್ತ ಆಕರ್ಷಿಸುತ್ತದೆ. ಇದರಿಂದ ಬಟ್ಟೆಗಳು ಬೇಗನೆ ಕೊಳೆಯಾಗುತ್ತವೆ. ಅಷ್ಟೇ ಅಲ್ಲದೆ, ಬಟ್ಟೆಗಳು ಒರಟು ಮತ್ತು ಕಠಿಣವಾಗುತ್ತವೆ. ಮುಖ್ಯವಾಗಿ ಬಟ್ಟೆಯಲ್ಲಿ ಉಳಿಯುವ ಈ ರಾಸಾಯನಿಕಗಳು ಚರ್ಮದ ಮೇಲೆ ತುರಿಕೆ ಮತ್ತು ಅಲರ್ಜಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

36
ವಾಷಿಂಗ್ ಮಷಿನ್‌ನಲ್ಲಿ ಎಷ್ಟು ಡಿಟರ್ಜೆಂಟ್ ಬಳಸಬೇಕು?

ಡಿಟರ್ಜೆಂಟ್ ಪ್ರಮಾಣವು ಬಟ್ಟೆಯ ತೂಕ, ನೀರಿನ ಗಡಸುತನ ಮತ್ತು ಕೊಳೆಯ ಮಟ್ಟವನ್ನು ಅವಲಂಬಿಸಿರುತ್ತದೆ.
ಲೋಡ್ ಆಧಾರಿತ ಬಳಕೆ: ಸಾಧಾರಣ ಕೊಳೆ ಇರುವ ಸುಮಾರು 3 ಕಿಲೋ ಬಟ್ಟೆಗೆ (ಮೀಡಿಯಂ ಲೋಡ್) 2 ಟೇಬಲ್ ಚಮಚ ಪುಡಿ ಅಥವಾ 30 ಮಿಲಿ ಲಿಕ್ವಿಡ್ ಸಾಕಾಗುತ್ತದೆ. 5 ಕಿಲೋ ವರೆಗಿನ ಹೆವಿ ಲೋಡ್‌ಗೆ 3-4 ಟೇಬಲ್ ಚಮಚ ಪುಡಿ ಬಳಸಬಹುದು.
ಟಾಪ್ ಲೋಡ್ ಮಷಿನ್: ಇದರಲ್ಲಿ ನೀರು ಹೆಚ್ಚಿರುವುದರಿಂದ ಮೀಡಿಯಂ ಲೋಡ್‌ಗೆ 60 ಮಿಲಿ ಮತ್ತು ದೊಡ್ಡ ಲೋಡ್‌ಗೆ 90 ಮಿಲಿ ವರೆಗೆ ಲಿಕ್ವಿಡ್ ಡಿಟರ್ಜೆಂಟ್ ಬಳಸಲು ಸಲಹೆ ನೀಡಲಾಗುತ್ತದೆ.
ಒಂದು ಮುಖ್ಯ ಟಿಪ್ಸ್: ಬಟ್ಟೆ ತೊಳೆದ ನಂತರವೂ ನೊರೆ ಉಳಿದಿದ್ದರೆ ಅಥವಾ ಬಟ್ಟೆ ಜಿಗುಟಾಗಿದ್ದರೆ ಮುಂದಿನ ಬಾರಿ ಡಿಟರ್ಜೆಂಟ್ ಪ್ರಮಾಣವನ್ನು ಶೇ. 20-25 ರಷ್ಟು ಕಡಿಮೆ ಮಾಡಿ. 

46
ಬಟ್ಟೆಯ ವಿಧಕ್ಕೆ ಅನುಗುಣವಾಗಿ ಬಳಕೆ

ಹಗುರವಾದ ಬಟ್ಟೆಗಳು: ದಿನನಿತ್ಯದ ಶರ್ಟ್ ಅಥವಾ ಟಿ-ಶರ್ಟ್‌ಗಳಂತಹ 6-7 ಬಟ್ಟೆಗಳಿಗೆ 1 ರಿಂದ 1.5 ಚಮಚ ಪುಡಿ ಸಾಕು.
ಭಾರವಾದ ಬಟ್ಟೆಗಳು: ಜೀನ್ಸ್, ಟವಲ್ ಅಥವಾ ಬೆಡ್‌ಶೀಟ್‌ಗಳು ಹೆಚ್ಚು ನೀರನ್ನು ಹೀರುವುದರಿಂದ 2 ಚಮಚದವರೆಗೆ ಡಿಟರ್ಜೆಂಟ್ ಬಳಸಬಹುದು.
ನಾಜೂಕಾದ ಬಟ್ಟೆಗಳು: ಸಿಲ್ಕ್ ಅಥವಾ ಉಣ್ಣೆಯ ಬಟ್ಟೆಗಳಿಗೆ ಅರ್ಧದಿಂದ ಒಂದು ಚಮಚದಷ್ಟು ಮೈಲ್ಡ್ ಲಿಕ್ವಿಡ್ ಡಿಟರ್ಜೆಂಟ್ ಮಾತ್ರ ಬಳಸಿ.
ಮಕ್ಕಳ ಬಟ್ಟೆಗಳು: ಇವುಗಳಿಗೆ ಕಡಿಮೆ ಕೆಮಿಕಲ್ ಇರುವ ಲೈಟ್ ಡಿಟರ್ಜೆಂಟ್ ಬಳಸುವುದು ಮತ್ತು ಚೆನ್ನಾಗಿ ನೀರಿನಲ್ಲಿ ತೊಳೆಯುವುದು (Rinse) ಬಹಳ ಮುಖ್ಯ. 

56
ಕೈಯಿಂದ ಒಗೆಯುವಾಗ ಪಾಲಿಸಬೇಕಾದ ನಿಯಮಗಳು

ಕೈಯಿಂದ ಬಟ್ಟೆ ಒಗೆಯುವಾಗ ಅಂದಾಜಿನ ಮೇಲೆ ಡಿಟರ್ಜೆಂಟ್ ಹಾಕುವುದರಿಂದ ತಪ್ಪುಗಳು ಹೆಚ್ಚಾಗುತ್ತವೆ
4-8 ಲೀಟರ್ ನೀರಿಗೆ 1 ಟೀಸ್ಪೂನ್ ಡಿಟರ್ಜೆಂಟ್ ಬಳಸಿ.
10-15 ಲೀಟರ್ ನೀರಿಗೆ ಸುಮಾರು 2 ಟೀಸ್ಪೂನ್ ಬಳಸಿ.

66
ನೆನಪಿರಲಿ

ಡಿಟರ್ಜೆಂಟ್ ಪುಡಿಯನ್ನು ಯಾವಾಗಲೂ ಮೊದಲು ನೀರಿನಲ್ಲಿ ಕರಗಿಸಿ ನಂತರ ಬಟ್ಟೆಗಳನ್ನು ಹಾಕಿ. ನೇರವಾಗಿ ಬಟ್ಟೆಯ ಮೇಲೆ ಪುಡಿ ಹಾಕುವುದರಿಂದ ಕಲೆಗಳು ಮೂಡುವ ಅಪಾಯವಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories