ವರ್ಷಗಟ್ಟಲೇ ಉಪ್ಪಿನಕಾಯಿ ಫ್ರಿಡ್ಜ್‌ನಲ್ಲಿಟ್ರೆ ಏನಾಗುತ್ತೆ? ಈ ಹಿಂದೆ ಅಜ್ಜಿಯಂದಿರು ಏನು ಮಾಡ್ತಿದ್ರು?

Published : Apr 18, 2026, 05:49 PM IST

ಅಮ್ಮ ಮತ್ತು ಉಪ್ಪಿನಕಾಯಿ ಎಂದಿಗೂ ಬೋರ್ ಹೊಡೆಯಲ್ಲ. ಆದರೆ ನಾವೇ ಅದರ ಅಸಲಿ ಸ್ವಾದವನ್ನು ಹಾಳು ಮಾಡುತ್ತಿದ್ದೇವೆ. ಉಪ್ಪಿನಕಾಯಿ ತಯಾರಿಸುವ ಹಳೆಯ ಸಂಪ್ರದಾಯಗಳನ್ನು ಬದಿಗಿಟ್ಟು, ಫ್ರಿಡ್ಜ್‌ನಲ್ಲಿ ಇಟ್ಟು ಅದರ ರುಚಿಯನ್ನು ನಾಶ ಮಾಡುತ್ತಿದ್ದೇವೆ.

PREV
15
ಅಮ್ಮ ಮತ್ತು ಆವಕಾಯ ಎಂದಿಗೂ ಬೋರ್ ಆಗಲ್ಲ

ಬೇಸಿಗೆ ಬಂತೆಂದರೆ ಸಾಕು, ಮಾವಿನಕಾಯಿಯಿಂದ ಬಗೆಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತದೆ. ಉಪ್ಪಿನಕಾಯಿಗಳನ್ನು ಜಾಡಿಗಳಲ್ಲಿ ಹಾಕಿಟ್ಟು ವರ್ಷವಿಡೀ ತಿನ್ನುತ್ತಾರೆ. ಮನೆಯಲ್ಲಿ ಮಾವಿನ ಉಪ್ಪಿನಕಾಯಿ ಹಾಕಿದರೆ ಅದೊಂದು ಹಬ್ಬದಂತಿರುತ್ತದೆ. ಅದಕ್ಕೆ ಚೆನ್ನಾಗಿ ಬಿಸಿಲು ತಾಗಿಸಿ, ಫರ್ಮೆಂಟ್ ಆದ ನಂತರ ಅದರಲ್ಲಿರುವ ಎಣ್ಣೆ, ಖಾರ, ಉಪ್ಪು, ಸಾಸಿವೆ ಪುಡಿಯಲ್ಲಿ ಹೋಳುಗಳು ಊರಿದ ಮೇಲೆ ತಿಂದರೆ... ಎಂಥಾ ರುಚಿ! ಎಷ್ಟು ಹೆಚ್ಚು ದಿನ ಇಟ್ಟರೆ, ಅಷ್ಟು ರುಚಿ ಜಾಸ್ತಿ.

25
ಉಪ್ಪಿನಕಾಯಿ ತಯಾರಿಕೆ ವಿಧಾನದಲ್ಲಿ ಬದಲಾವಣೆ

ಉಪ್ಪಿನಕಾಯಿ ಮಾಡುವುದೇ ಫರ್ಮೆಂಟ್ ಆಗಿ ಒಳ್ಳೆಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗಲು. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಉಪ್ಪಿನಕಾಯಿ ತಯಾರಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಅಡುಗೆಮನೆಯ ಗೂಡಿನಲ್ಲಿದ್ದ ಜಾಡಿಗಳು ಮಾಯವಾಗಿವೆ. ಈಗ ತಯಾರಿಸಿದ ಉಪ್ಪಿನಕಾಯಿ ಡಬ್ಬಗಳಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡುತ್ತಿದ್ದಾರೆ. ಫ್ರಿಡ್ಜ್‌ನಲ್ಲಿ ಉಪ್ಪಿನಕಾಯಿ ಇಟ್ಟರೆ ಅವು ತಮ್ಮ ರುಚಿಯನ್ನು ಕಳೆದುಕೊಳ್ಳುತ್ತವೆ. ಫ್ರಿಡ್ಜ್‌ನಲ್ಲಿ ಇಟ್ಟು ನಾವೇ ಅದರ ಅಸಲಿ ರುಚಿಯನ್ನು ಕೊಲ್ಲುತ್ತಿದ್ದೇವೆ.

35
ದಿನ ಕಳೆದಂತೆ ಹೆಚ್ಚುವ ಉಪ್ಪಿನಕಾಯಿ ರುಚಿ

ನಮ್ಮ ಹಿರಿಯರು ಉಪ್ಪಿನಕಾಯಿ ಹಾಕುವಾಗ ಫ್ರಿಡ್ಜ್‌ ಇರಲಿಲ್ಲ. ಆದರೂ ಅವು ವರ್ಷವಿಡೀ ಕೆಡುತ್ತಿರಲಿಲ್ಲ. ಇದರ ಹಿಂದೆ ಒಂದು ಅದ್ಭುತ ವಿಜ್ಞಾನವಿದೆ. ಉಪ್ಪಿನಕಾಯಿಯಲ್ಲಿ ನಾವು ಬಳಸುವ ಉಪ್ಪು, ಸಾಸಿವೆ ಪುಡಿ, ಎಣ್ಣೆ ಕೇವಲ ರುಚಿಗಾಗಿ ಅಲ್ಲ, ಅವು ನೈಸರ್ಗಿಕ 'ಪ್ರಿಸರ್ವೇಟಿವ್ಸ್'. 

ಎಣ್ಣೆಯು ಒಂದು ಪದರವಾಗಿ ರೂಪುಗೊಂಡು ಗಾಳಿ ತಾಗದಂತೆ ನೋಡಿಕೊಳ್ಳುತ್ತದೆ. ಉಪ್ಪು ಬ್ಯಾಕ್ಟೀರಿಯಾ ಸೇರದಂತೆ ಕಾಪಾಡುತ್ತದೆ. ಕೋಣೆಯ ಉಷ್ಣಾಂಶದಲ್ಲಿ ಉಪ್ಪಿನಕಾಯಿ 'ಫರ್ಮೆಂಟೇಶನ್' ಆಗುತ್ತದೆ. ಈ ಪ್ರಕ್ರಿಯೆಯಿಂದಲೇ ದಿನ ಕಳೆದಂತೆ ಉಪ್ಪಿನಕಾಯಿಗೆ ಆ ಖಾರವಾದ ಬಣ್ಣ ಮತ್ತು ರುಚಿ ಬರುತ್ತದೆ.

45
ಫ್ರಿಜ್‌ನಲ್ಲಿ ಇಟ್ಟರೆ ಏನಾಗುತ್ತದೆ?

ಬಹಳಷ್ಟು ಜನರು ಬಣ್ಣ ಬದಲಾಗುತ್ತದೆ ಅಥವಾ ಬೂಸ್ಟ್ ಹಿಡಿಯುತ್ತದೆ ಎಂದು ಹೆದರಿ ಉಪ್ಪಿನಕಾಯಿಯನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಆದರೆ, ಫ್ರಿಡ್ಜ್‌ನಲ್ಲಿ ಇಡುವುದರಿಂದ ಮಾವಿನ ಹೋಳು ಎಣ್ಣೆಯನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಪರಿಣಾಮವಾಗಿ, ಮಸಾಲೆಗಳೆಲ್ಲಾ ಹೋಳಿಗೆ ಹಿಡಿಯದೆ ಪ್ರತ್ಯೇಕವಾಗಿ ಉಳಿಯುತ್ತವೆ. 

ಅಷ್ಟೇ ಅಲ್ಲ, ಫ್ರಿಡ್ಜ್‌ನಲ್ಲಿನ ತೇವಾಂಶದಿಂದಾಗಿ ಹೊರತೆಗೆದಾಗ ಉಪ್ಪಿನಕಾಯಿ ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ. ನಿಜ ಹೇಳಬೇಕೆಂದರೆ, ಹೊರಗೆ ಇಟ್ಟ ಉಪ್ಪಿನಕಾಯಿಯಲ್ಲಿರುವ 'ಪ್ರೋಬಯಾಟಿಕ್' ಗುಣಗಳು ಫ್ರಿಡ್ಜ್‌ನಲ್ಲಿಟ್ಟ ಉಪ್ಪಿನಕಾಯಿಗಿಂತ ಉತ್ತಮವಾಗಿರುತ್ತವೆ.

ಇದನ್ನೂ ಓದಿ: ಅಯ್ಯೋ ಗಂಜಿ ಅನ್ನಬೇಡಿ, ಅಚ್ಚುಕಟ್ಟಾಗಿ ಕಿಚಡಿ ಮಾಡ್ಕೊಂಡು ಸವಿಯಿರಿ

55
ನೀರು ತಾಗಬಾರದು

ಉಪ್ಪಿನಕಾಯಿ ತೆಗೆಯುವಾಗ ಬಳಸುವ ಚಮಚ ಖಂಡಿತವಾಗಿಯೂ ಒಣಗಿರಬೇಕು. ಒಂದು ಹನಿ ನೀರು ಬಿದ್ದರೂ ಉಪ್ಪಿನಕಾಯಿ ಹಾಳಾಗುತ್ತದೆ. ಜಾಡಿಯಲ್ಲಿ ಉಪ್ಪಿನಕಾಯಿಯ ಮೇಲೆ ಕನಿಷ್ಠ ಒಂದು ಇಂಚಿನಷ್ಟು ಎಣ್ಣೆ ತೇಲುತ್ತಿರಬೇಕು. ಇದು ಗಾಳಿ ಒಳಗೆ ಹೋಗದಂತೆ ತಡೆಯುತ್ತದೆ. ದೊಡ್ಡ ಜಾಡಿಯನ್ನು ಪದೇ ಪದೇ ತೆರೆಯುವ ಬದಲು, ತಿಂಗಳಿಗೆ ಬೇಕಾಗುವಷ್ಟು ಉಪ್ಪಿನಕಾಯಿಯನ್ನು ಚಿಕ್ಕ ಗಾಜಿನ ಸೀಸೆಗೆ ತೆಗೆದುಕೊಂಡು ಬಳಸುವುದು ಉತ್ತಮ.

ಇದನ್ನೂ ಓದಿ: ದಿನದಲ್ಲಿಯೇ ಹಾಳಾಗೋ ತರಕಾರಿ ವಾರಗಟ್ಟಲೆ ಹಾಳಾಗಬಾರದು ಅಂದ್ರೆ ಇಲ್ಲಿವೆ ಟಿಪ್ಸ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories