ಮನೆ ಮುಂದಿಟ್ಟ ದೀಪಾವಳಿ ದೀಪ ಗಾಳಿಗೆ ಆರದಿರಲು ಸರಳ ಉಪಾಯ: ದೀರ್ಘಕಾಲ ಬೆಳಗುವ ಸಲಹೆ

Published : Oct 30, 2026, 06:51 PM IST

ದೀಪಾವಳಿ ಹಬ್ಬದಲ್ಲಿ ಮನೆಮುಂದೆ ಹಚ್ಚುವ ದೀಪಗಳು ಗಾಳಿಗೆ ಆರಿಹೋಗುವುದು ಅಪಶಕುನ ಎಂಬ ಭಯ ಅನೇಕರಲ್ಲಿರುತ್ತದೆ. ದೀಪವು ಕಡಿಮೆ ಎಣ್ಣೆಯನ್ನು ಹೀರಿಕೊಂಡು ಗಾಳಿಯಲ್ಲೂ ದೀರ್ಘಕಾಲ ಉರಿಯಲು ಏನು ಮಾಡಬೇಕು ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ.

PREV
15
ದೀಪಗಳ ಹಬ್ಬ ದೀಪಾವಳಿ

ದೀಪಾವಳಿ ಹಬ್ಬಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಜನರು ಸಹ ಹಂತ ಹಂತವಾಗಿ ಸಿದ್ಧತೆ ಮಾಡಿಕೊಳ್ಳಲಾರಂಭಿಸುತ್ತಾರೆ. ಮನೆಯ ಅಟ್ಟ ಅಥವಾ ಹಳೆ ಪೆಟ್ಟಿಗೆಯಲ್ಲಿಟ್ಟಿರೋ ಆಕಾಶದೀಪ, ಮಣ್ಣಿನ ಹಣತೆಗಳನ್ನು ಹೊರಗೆ ತೆಗೆದು ಸ್ವಚ್ಚಗೊಳಿಸುತ್ತಿರುತ್ತಾರೆ.

25
ದೀಪ ಶಾಂತವಾಗೋದು ಅಪಶಕುನ

ದೀಪಾವಳಿ ಅಂದ್ರೆ ದೀಪಗಳ ಹಬ್ಬ. ಮನೆಯ ಮುಂದೆ ಕೆಲವರು 5 ಅಥವಾ 11 ದಿನ ಅಂತ ದೀಪಗಳನ್ನು ಬೆಳಗುತ್ತಾರೆ. ಆದರೆ ಮನೆ ಮುಂದೆ ಬೆಳಗುವ ದೀಪಗಳು ಗಾಳಿಗೆ ಪದೇ ಪದೇ ಆರುತ್ತಿರುತ್ತವೆ. ಕೆಲವೊಮ್ಮೆ ದೀಪ ಶಾಂತವಾಗೋದನ್ನು ಅಪಶಕುನ ಎಂದು ಸಹ ಪರಿಗಣಿಸಲಾಗುತ್ತದೆ. ನಿಮಗೂ ಈ ರೀತಿ ಭಯವಿದ್ರೆ, ನಾವು ಹೇಳುವ ರೀತಿಯಲ್ಲಿ ದೀಪ ಬೆಳಗಿ. ಇದರಿಂದ ದೀಪಗಳು ಗಾಳಿಯಲ್ಲಿಯೂ ಚೆನ್ನಾಗಿ ಉರಿಯುತ್ತವೆ.

35
ದೀಪ ಬೆಳಗುವ ಟಿಪ್ಸ್

ದೀಪ ಬೆಳಗಲು ಹತ್ತಿ ಬೇಕಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ನಿಮಗೆ ರೆಡಿಮೇಡ್ ದೀಪದ ಬತ್ತಿ ಸಿಗುತ್ತವೆ. ಈ ದೀಪದ ಬತ್ತಿಗಳು ಹಣತೆಯಲ್ಲಿ ಹಾಕುವ ಮುಂಚೆ ಒಂದು ಚಿಕ್ಕದಾದ ಕೆಲಸ ಮಾಡಿಕೊಳ್ಳಿ. ಈ ಒಂದು ಟಿಪ್ಸ್ ದೀಪ ಚೆನ್ನಾಗಿ ಮತ್ತು ದೀರ್ಘಕಾಲದವರೆಗೆ ಉರಿಯಲು ಸಹಾಯ ಮಾಡುತ್ತದೆ.

45
ನೇಲ್ ಪಾಲಿಶ್

ಬತ್ತಿಯನ್ನು ಮೊದಲು ಅಂಗೈಯಲ್ಲಿ ಹಾಕಿಕೊಂಡು ಹೊಸೆದುಕೊಳ್ಳಿ ಅಥವಾ ತೀಡಿಕೊಳ್ಳಿ. ಈಗ ಬತ್ತಿಯ ಮುಂಭಾಗ ಮನೆಯಲ್ಲಿರುವ ನೇಲ್‌ಪಾಲಿಶ್‌ನ್ನು ತೆಳುವಾಗಿ ಸವರಿ, ಒಣಗಿಸಿಕೊಳ್ಳಿ. ನೇಲ್‌ಪಾಲಿಶ್ ಒಣಗಿದ ಬಳಿಕ ಬತ್ತಿಯನ್ನು ಹಣತೆಯಲ್ಲಿಟ್ಟುಕೊಂಡು ದೀಪದೆಣ್ಣೆಯನ್ನು ಹಣತೆಗೆ ಹಾಕಿಕೊಳ್ಳಿ.

55
ದೀಪಗಳು ಶಾಂತವಾಗಲ್ಲ

ನೇಲ್‌ಪಾಲಿಶ್‌ ಹಾಕಲಾಗಿರುವ ಬತ್ತಿ ಮುಂಭಾಗದಲ್ಲಿರುವಂತೆ ನೋಡಿಕೊಳ್ಳಬೇಕು. ಈಗ ಬತ್ತಿಗೆ ಬೆಂಕಿ ತಾಗಿಸಿ ದೀಪವನ್ನು ಬೆಳಗಿ. ಹೀಗೆ ಮಾಡೋದರಿಂದ ದೀಪವೂ ಕಡಿಮೆ ಎಣ್ಣೆಯನ್ನು ಹೀರುತ್ತಾ ದೀರ್ಘಕಾಲ ಬೆಳಗುತ್ತದೆ. ಹಾಗೆಯೇ ಸಣ್ಣ ಗಾಳಿಯಲ್ಲೆಲ್ಲಾ ನಿಮ್ಮ ದೀಪಗಳು ಶಾಂತವಾಗಲ್ಲ.

(Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories