ವಿನೆಗರ್, ಬೇಕಿಂಗ್ ಸೋಡಾ ಮರೆತುಬಿಡಿ, ಟ್ಯಾಪ್‌ ಮತ್ತು ಟಾಯ್ಲೆಟ್‌ನ ಕಲೆ ತೆಗೆಯಲು ಈ ಒಂದು ವಸ್ತು ಸಾಕು

Published : Aug 12, 2026, 01:15 PM IST

ಬಾತ್‌ರೂಮ್ ಸ್ವಚ್ಛಗೊಳಿಸುವಾಗ ಟಾಯ್ಲೆಟ್‌, ಟ್ಯಾಪ್‌ಗಳು, ಶವರ್‌ ಸ್ಕ್ರೀನ್‌ಗಳಲ್ಲಿ ಕಾಣಿಸಿಕೊಳ್ಳುವ ಬಿಳಿ ಬಣ್ಣದ ಗಟ್ಟಿ ಪದರ ಅಥವಾ ಲೈಮ್‌ಸ್ಕೇಲ್ ದೊಡ್ಡ ತಲೆನೋವಾಗಿರುತ್ತದೆ. ಈ ಒಂದು ವಸ್ತು ಸಾಕು ಕಲೆ ತೆಗೆಯಲು.

PREV
15
ಟ್ಯಾಪ್‌ ಮತ್ತು ಟಾಯ್ಲೆಟ್‌ನ ಕಲೆ ತೆಗೆಯುವುದು

ಬಾತ್‌ರೂಮ್ ಸ್ವಚ್ಛಗೊಳಿಸುವಾಗ ಟಾಯ್ಲೆಟ್‌, ಟ್ಯಾಪ್‌ಗಳು, ಶವರ್‌ ಸ್ಕ್ರೀನ್‌ಗಳಲ್ಲಿ ಕಾಣಿಸಿಕೊಳ್ಳುವ ಬಿಳಿ ಬಣ್ಣದ ಗಟ್ಟಿ ಪದರ ಅಥವಾ ಲೈಮ್‌ಸ್ಕೇಲ್ ದೊಡ್ಡ ತಲೆನೋವಾಗಿರುತ್ತದೆ. ಸಾಮಾನ್ಯವಾಗಿ ಇದನ್ನು ತೆಗೆಯಲು ವಿನೆಗರ್ ಅಥವಾ ಬೇಕಿಂಗ್ ಸೋಡಾವನ್ನು ಬಳಸುತ್ತಾರೆ. ಆದರೆ ತುಂಬಾ ಗಟ್ಟಿಯಾಗಿರುವ ಲೈಮ್‌ಸ್ಕೇಲ್‌ಗೆ ಇವು ಪ್ರತಿಬಾರಿಯೂ ಹೋಗುವುದಿಲ್ಲ. ಇದಕ್ಕೆ ಬದಲಾಗಿ ಸಿಟ್ರಿಕ್ ಆಸಿಡ್ ಪೌಡರ್ ಬಳಸುವ ವಿಧಾನ ಪರಿಣಾಮಕಾರಿ ಎಂದು ವರದಿ ತಿಳಿಸಿದೆ.

25
ಟಾಯ್ಲೆಟ್ ಸ್ವಚ್ಛಗೊಳಿಸಲು ಸಿಟ್ರಿಕ್ ಆಸಿಡ್ ಹೇಗೆ ಬಳಸಬೇಕು?

ಲೈಮ್‌ಸ್ಕೇಲ್ ಜಮೆಯಾಗಿರುವ ಟಾಯ್ಲೆಟ್‌ಗೆ ಸಿಟ್ರಿಕ್ ಆಸಿಡ್ ಬಳಸುವ ವಿಧಾನ ಸರಳವಾಗಿದೆ. ಮೊದಲು ಬಿಸಿ ನೀರಿಗೆ 2–3 ಟೇಬಲ್‌ಸ್ಪೂನ್ ಸಿಟ್ರಿಕ್ ಆಸಿಡ್ ಪೌಡರ್ ಹಾಕಿ ಕರಗಿಸಿ. ಈ ಮಿಶ್ರಣವನ್ನು ಟಾಯ್ಲೆಟ್ ಬೌಲ್‌ಗೆ ಸುರಿಯಿರಿ. ಪರಿಣಾಮಕಾರಿಯಾಗಿ ಕೆಲಸ ಮಾಡಲು ರಾತ್ರಿಯಿಡೀ ಹಾಗೆಯೇ ಬಿಡಿ. ಮರುದಿನ ಬೆಳಗ್ಗೆ ಬ್ರಷ್‌ನಿಂದ ಚೆನ್ನಾಗಿ ಉಜ್ಜಿ. ಕೊನೆಯಲ್ಲಿ ನೀರು ಹಾಕಿ ಫ್ಲಶ್ ಮಾಡಿ. ಈ ವಿಧಾನವನ್ನು ಲೈಮ್‌ಸ್ಕೇಲ್‌ನ ಪ್ರಮಾಣಕ್ಕೆ ಅನುಗುಣವಾಗಿ ಬಳಸಬಹುದು ಎಂದು ವರದಿ ಹೇಳುತ್ತದೆ.

35
ಟ್ಯಾಪ್‌, ಶವರ್‌ಗಳಿಗೆ ಮತ್ತೊಂದು ಸುಲಭ ವಿಧಾನ

ಟಾಯ್ಲೆಟ್ ಮಾತ್ರವಲ್ಲದೆ ಟ್ಯಾಪ್‌, ಶವರ್ ಮತ್ತು ಶವರ್ ಸ್ಕ್ರೀನ್‌ಗಳಲ್ಲೂ ಲೈಮ್‌ಸ್ಕೇಲ್ ಜಮೆಯಾಗುತ್ತದೆ. ಇಂತಹ ಮೇಲ್ಮೈಗಳಿಗೆ ತಾಜಾ ನಿಂಬೆಹಣ್ಣು ಬಳಸುವ ವಿಧಾನವನ್ನು ವರದಿ ಉಲ್ಲೇಖಿಸಿದೆ. ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಲೈಮ್‌ಸ್ಕೇಲ್ ಇರುವ ಜಾಗಕ್ಕೆ ನೇರವಾಗಿ ಉಜ್ಜಬೇಕು. ನಂತರ ಸುಮಾರು 10ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ಬಿಸಿ ನೀರಿನಿಂದ ತೊಳೆಯಬೇಕು.

ಹಾಗಾದರೆ ವಿನೆಗರ್ ಮತ್ತು ಬೇಕಿಂಗ್ ಸೋಡಾ ಕೆಲಸ ಮಾಡುವುದಿಲ್ಲವೇ?

ಹಾಗೇನಿಲ್ಲ. ವಿನೆಗರ್ ಸೇರಿದಂತೆ ಹಲವು ಮನೆಮದ್ದುಗಳು ಲೈಮ್‌ಸ್ಕೇಲ್ ತೆಗೆಯಲು ಸಹಾಯ ಮಾಡುತ್ತವೆ. ಆದರೆ ಗಟ್ಟಿ ಪ್ರಮಾಣದಲ್ಲಿ ಜಮೆಯಾಗಿರುವ ಲೈಮ್‌ಸ್ಕೇಲ್‌ಗೆ ಅವುಗಳ ಪರಿಣಾಮಕಾರಿತ್ವ ಬದಲಾಗಬಹುದು.

45
ಬಳಸಬಹುದಾದ ಕೆಲವು ಸಾಮಾನ್ಯ ವಿಧಾನಗಳು

ಬಿಳಿ ವಿನೆಗರ್ + ನೀರು

ನಿಂಬೆ ರಸ + ದಪ್ಪ ಉಪ್ಪು

ಬಿಸಿ ನೀರು + ಬೇಕಿಂಗ್ ಸೋಡಾ

ಬಿಳಿ ವಿನೆಗರ್ + ಬೇಕಿಂಗ್ ಸೋಡಾ ಆದರೆ ಯಾವುದೇ ಕ್ಲೀನಿಂಗ್ ಮಿಶ್ರಣವನ್ನು ಬಳಸುವ ಮೊದಲು ಮೇಲ್ಮೈಗೆ ಅದು ಸುರಕ್ಷಿತವೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.

ಮತ್ತೆ ಲೈಮ್‌ಸ್ಕೇಲ್ ಬರದಂತೆ ಏನು ಮಾಡಬೇಕು?

ಒಮ್ಮೆ ಸ್ವಚ್ಛಗೊಳಿಸಿದರೆ ಸಾಕಾಗುವುದಿಲ್ಲ. ಲೈಮ್‌ಸ್ಕೇಲ್ ಮತ್ತೆ ಜಮೆಯಾಗದಂತೆ ನಿಯಮಿತ ಸ್ವಚ್ಛತೆ ಅಗತ್ಯ.

55
ತಜ್ಞರ ಸಲಹೆಯಂತೆ:

ವಾರಕ್ಕೆ ಕನಿಷ್ಠ ಒಂದು ಬಾರಿ ಬಾತ್‌ರೂಮ್ ಅನ್ನು ಆಳವಾಗಿ ಸ್ವಚ್ಛಗೊಳಿಸಿ.

ನೀರು ಸೋರಿಕೆಯಾಗುತ್ತಿದ್ದರೆ ತಕ್ಷಣ ಸರಿಪಡಿಸಿ.

ಬಾತ್‌ರೂಮ್‌ನಲ್ಲಿ ಉತ್ತಮ ಗಾಳಿಯಾಡುವ ವ್ಯವಸ್ಥೆ ಇರಲಿ.

ಮೇಲ್ಮೈಗಳಲ್ಲಿ ನೀರು ಹೆಚ್ಚು ಕಾಲ ಉಳಿಯದಂತೆ ನೋಡಿಕೊಳ್ಳಿ.

ಟಾಯ್ಲೆಟ್ ಬೌಲ್ ಅನ್ನು ನಿಯಮಿತವಾಗಿ ಬ್ರಷ್ ಮಾಡಿ.

ಅಗತ್ಯವಿದ್ದಾಗ ವಿನೆಗರ್‌ನಂತಹ ಸಾಮಾನ್ಯ ಕ್ಲೀನಿಂಗ್ ವಿಧಾನಗಳನ್ನು ಬಳಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories