ನಿಮ್ಮ ಹತ್ರ ಪಲಾವ್ ಎಲೆ ಇದ್ರೆ ಸಾಕು... ಸೊಳ್ಳೆ ಕಾಟವೂ ಮಾಯ, ಕೆಟ್ಟ ಶಕ್ತಿಯೂ ದೂರ

Published : Oct 22, 2026, 08:30 PM IST

Bay leaf for mosquitoes: ಸಂಜೆಯಾಗುತ್ತಿದ್ದಂತೆ ಮನೆಗೆ ನುಗ್ಗುವ ಸೊಳ್ಳೆಗಳು ಹಾಗೂ ಸಣ್ಣ ನೊಣಗಳನ್ನು ಓಡಿಸಲು ದುಬಾರಿ ಕಾಯಿಲ್, ಲಿಕ್ವಿಡ್‌ಗಳ ಮೊರೆ ಹೋಗುವ ಬದಲು, ಅಡುಗೆ ಮನೆಯಲ್ಲಿರುವ ಈ ಎರಡು ವಸ್ತುಗಳನ್ನು ಬಳಸಿದರೆ ಸಾಕು.

PREV
13
ಇಂತಹ ಸಮಸ್ಯೆಗೆ ಸುಲಭ ಪರಿಹಾರ

ಇಂತಹ ಸಮಸ್ಯೆಗೆ ಸುಲಭ ಪರಿಹಾರ
ಪ್ರತಿದಿನ ಸಂಜೆಯಾಗುತ್ತಿದ್ದಂತೆ ಮನೆಗಳಲ್ಲಿ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಸೊಳ್ಳೆ ಬತ್ತಿ, ರಾಸಾಯನಿಕ ಲಿಕ್ವಿಡ್‌ಗಳನ್ನು ಬಳಸಿದರೂ ಸೊಳ್ಳೆಗಳು ಹೋಗುತ್ತಿಲ್ಲ, ಜೊತೆಗೆ ಆ ಹೊಗೆಯಿಂದ ಆರೋಗ್ಯಕ್ಕೂ ಹಾನಿ ಎಂದು ಬೇಸರಗೊಂಡಿದ್ದೀರಾ? ಹಾಗಾದರೆ, ನಿಮ್ಮ ಅಡುಗೆಮನೆಯಲ್ಲಿರುವ 'ಪಲಾವ್ ಎಲೆ' (Bay leaf) ಹಾಗೂ 'ಅರಿಶಿನ' ಬಳಸಿ ಈ ಸಮಸ್ಯೆಗೆ ಸುಲಭವಾಗಿ ಹಾಗೂ ನೈಸರ್ಗಿಕವಾಗಿ ಮುಕ್ತಿ ಹೇಳಬಹುದು. ವಿಶೇಷವೆಂದರೆ, ಇದು ಕೇವಲ ಸೊಳ್ಳೆಗಳನ್ನು ಮಾತ್ರವಲ್ಲ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನೂ (Negative Energy) ದೂರ ಮಾಡುತ್ತದೆ!

23
ಮಾಡುವ ವಿಧಾನ ಹೇಗೆ?

ಮಾಡುವ ವಿಧಾನ ಹೇಗೆ?
ಇದನ್ನು ಮಾಡುವುದು ಅತ್ಯಂತ ಸರಳ. ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಅರಿಶಿನ ಪುಡಿಯನ್ನು ತೆಗೆದುಕೊಂಡು, ಅದಕ್ಕೆ ಕೇವಲ ಒಂದೆರಡು ಹನಿ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ನೆನಪಿರಲಿ, ಪೇಸ್ಟ್ ತೆಳುವಾಗಿರಬಾರದು, ಗಟ್ಟಿಯಾಗಿರಬೇಕು. ನಂತರ ಈ ಅರಿಶಿನದ ಪೇಸ್ಟ್ ಅನ್ನು ಪಲಾವ್ ಎಲೆಗೆ (Bay leaf) ಸಂಪೂರ್ಣವಾಗಿ ಲೇಪಿಸಿ (ಹಚ್ಚಿ). ಬಳಿಕ, ಅರಿಶಿನ ಹಚ್ಚಿದ ಈ ಎಲೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಲು ಬಿಡಬೇಕು. ಎಲೆ ಪೂರ್ತಿಯಾಗಿ ಡ್ರೈ ಆದ ಮೇಲೆ, ಸಂಜೆಯ ಸಮಯದಲ್ಲಿ ಅದನ್ನು ಮನೆಯಲ್ಲಿ ಸುಡಬೇಕು.

33
ಇದರ ಪ್ರಯೋಜನಗಳೇನು?

ಇದರ ಪ್ರಯೋಜನಗಳೇನು?
ಪಲಾವ್ ಎಲೆ ಮತ್ತು ಅರಿಶಿನ ಸುಟ್ಟಾಗ ಬರುವ ಹೊಗೆಯನ್ನು ಮನೆಯ ಮೂಲೆ ಮೂಲೆಗೂ ಹರಡುವಂತೆ ಮಾಡಬೇಕು. ಈ ನೈಸರ್ಗಿಕ ಹೊಗೆಯ ವಾಸನೆಗೆ ಮನೆಯಲ್ಲಿರುವ ಸಣ್ಣ ಸಣ್ಣ ನೊಣಗಳು ಹಾಗೂ ಸೊಳ್ಳೆಗಳು ತಕ್ಷಣವೇ ಕಾಲ್ಕೀಳುತ್ತವೆ.

ಅಷ್ಟೇ ಅಲ್ಲದೆ, ಪುರಾತನ ಕಾಲದಿಂದಲೂ ಅರಿಶಿನವನ್ನು ಶುದ್ಧತೆಯ ಸಂಕೇತವೆಂದು ನಂಬಲಾಗಿದೆ. ಪಲಾವ್ ಎಲೆಯ ಸುಗಂಧ ಹಾಗೂ ಅರಿಶಿನದ ಹೊಗೆಯು ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ, ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಹೊಡೆದೋಡಿಸಿ, ಮನಸ್ಸಿಗೆ ನೆಮ್ಮದಿ ನೀಡುವ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ.

ಯಾವುದೇ ಖರ್ಚಿಲ್ಲದ, ರಾಸಾಯನಿಕ ಮುಕ್ತವಾದ ಈ ಸರಳ ಮನೆಮದ್ದನ್ನು ಇಂದೇ ಟ್ರೈ ಮಾಡಿ ನೋಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories