ಬಾರ್ಬೆಲ್ ಸ್ಕ್ವಾಟ್ಗಳು, ಬೆಂಚ್ ಪ್ರೆಸ್ ಮತ್ತು ಓವರ್ಹೆಡ್ ಪ್ರೆಸ್ನಂತಹ ಸಂಯುಕ್ತ ವ್ಯಾಯಾಮಗಳು ಮಸಲ್ ಬಿಲ್ಡಿಂಗ್ ಗೆ ಅಗತ್ಯವಾಗಿದೆ. ಈ ವ್ಯಾಯಾಮಗಳು ಒಂದೇ ಸಮಯದಲ್ಲಿ ಅನೇಕ ಸ್ನಾಯು ಗುಂಪುಗಳ ಮೇಲೆ ಕೆಲಸ ಮಾಡುತ್ತವೆ. ಆದರೆ ಸರಿಯಾದ ಪೌಷ್ಠಿಕಾಂಶದ ಬೆಂಬಲವಿಲ್ಲದೆ, ನಿಮ್ಮ ಪ್ರಗತಿಯು ನಿರುಪಯೋಗವಾಗುತ್ತದೆ.
ಸ್ನಾಯುಗಳನ್ನು ಪಡೆಯಲು ಪ್ರೋಟೀನ್ ಬಹಳ ಮುಖ್ಯವಾದರೆ, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬುಗಳು ಶಕ್ತಿಯನ್ನು ಒದಗಿಸುತ್ತವೆ. ಕೆಲವು ಆಹಾರಗಳು ಶ್ರಮದಾಯಕ ವ್ಯಾಯಾಮದ ನಂತರ ಸ್ನಾಯುಗಳ ಬೆಳವಣಿಗೆ ಮತ್ತು ಚೇತರಿಕೆಗೆ ಉತ್ತೇಜನ ನೀಡುತ್ತವೆ. ನೆನಪಿಡಿ, ನಿಮ್ಮ ಸ್ನಾಯು ಅಂಗಾಂಶವು ಸುಮಾರು 75 ಪ್ರತಿಶತದಷ್ಟು ನೀರಿನಿಂದ ಕೂಡಿದ ಕಾರಣ ಸ್ನಾಯುಗಳನ್ನು ನಿರ್ಮಿಸುವಲ್ಲಿ ಜಲಸಂಚಯನವು ಒಂದು ಪ್ರಮುಖ ಭಾಗವಾಗಿದೆ.
ಇದಲ್ಲದೆ, ನಿಮ್ಮ ದೇಹವನ್ನು ಹೈಡ್ರೀಕರಿಸುವುದರಿಂದ ನಿಮ್ಮ ಅಂಗಗಳನ್ನು ಡಿಟೊಕ್ಸಿಫ್ಯ್ ಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಕೀಲುಗಳನ್ನು ರಕ್ಷಿಸುತ್ತದೆ. ನಿಮ್ಮ ಸ್ವೇಟ್ ಸೆಷನ್ಗಳನ್ನು ಯೋಗ್ಯವಾಗಿಸುವಂತಹ ಸ್ನಾಯುಗಳನ್ನು ನಿರ್ಮಿಸುವ ಉನ್ನತ ಆಹಾರಗಳು ಇಲ್ಲಿವೆ.
ಮೊಟ್ಟೆಗಳು ಉತ್ತಮ-ಗುಣಮಟ್ಟದ ಪ್ರೋಟೀನ್ ಅನ್ನು ಹೊಂದಿರುತ್ತವೆ, ಇದು ವ್ಯಾಯಾಮದ ನಂತರದ ಸ್ನಾಯುಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಅವಶ್ಯಕವಾಗಿದೆ. ಮೊಟ್ಟೆಗಳು ಸ್ನಾಯುಗಳನ್ನು ನಿರ್ಮಿಸುವ ಅಮೈನೊ ಆಸಿಡ್ ಲ್ಯುಸಿನ್ನ ಅತ್ಯುತ್ತಮ ಮೂಲವಾಗಿದೆ, ಇದನ್ನು ದೇಹದಿಂದ ಮಾತ್ರ ಉತ್ಪಾದಿಸಲಾಗುವುದಿಲ್ಲ ಮತ್ತು ಆಹಾರ ಮೂಲಗಳಲ್ಲಿ ಮಾತ್ರ ಕಂಡುಬರುತ್ತದೆ. ಆರೋಗ್ಯಕರ ಕೊಬ್ಬುಗಳು ಮತ್ತು ಬಿ ವಿಟಮಿನ್, ಸತು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಮತ್ತು ಕೋಲೀನ್ನಂತಹ ಇತರ ಪ್ರಮುಖ ಪೋಷಕಾಂಶಗಳಲ್ಲಿಯೂ ಅವು ಸಮೃದ್ಧವಾಗಿವೆ.
ಚಿಕನ್ ಬ್ರೆಸ್ಟ್ ಸ್ನಾಯು ಪಡೆಯಲು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್ನೊಂದಿಗೆ ಲೋಡ್ ಆಗಿದ್ದು, ಪ್ರತಿ 3-ಔನ್ಸ್ (85-ಗ್ರಾಂ) ನಲ್ಲಿ ಸುಮಾರು 26 ಗ್ರಾಂ ಉತ್ತಮ-ಗುಣಮಟ್ಟದ ಪ್ರೋಟೀನ್ಗಳನ್ನು ಕಡಿಮೆ ಕೊಬ್ಬಿನೊಂದಿಗೆ ಹೊಂದಿರುತ್ತದೆ. ಚಿಕನ್ ಬ್ರೆಸ್ಟ್ ಬಿ ವಿಟಮಿನ್ ನಿಯಾಸಿನ್ ಮತ್ತು ಬಿ 6 ನ ಉತ್ತಮ ಪ್ರಮಾಣವನ್ನು ಸಹ ಹೊಂದಿದೆ, ಇದು ನಿಮ್ಮ ದೇಹವು ವ್ಯಾಯಾಮದ ಸಮಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ.
ಫಿಶ್ ಆಯಿಲ್ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ, ಇದು ಸ್ನಾಯುಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ. ಮೀನಿನ ಎಣ್ಣೆಯಲ್ಲಿ ಆಂಟಿ ಇಂಪ್ಲಾಮೆಟಿರಿ ಗುಣಲಕ್ಷಣಗಳಿವೆ, ಇದು ನಿಮ್ಮ ಸ್ನಾಯುಗಳು ತೀವ್ರವಾದ ವ್ಯಾಯಾಮದಿಂದ ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಸ್ನಾಯುಗಳ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಮೀನಿನ ಎಣ್ಣೆಯಲ್ಲಿರುವ ಒಮೆಗಾ -3 ಗಳು ನಿಮ್ಮ ಮೆಟಬೋಲಿಸಂ ಕ್ರಿಯೆಯನ್ನು ವೇಗಗೊಳಿಸುತ್ತದೆ.
ಕ್ವಿನೋವಾ: ತೆಳ್ಳಗಿನ ಸ್ನಾಯುಗಳನ್ನು ನಿರ್ಮಿಸಲು ಪ್ರೋಟೀನ್ ಬಹಳ ಮುಖ್ಯವಾದರೂ, ನಾವು ಸಕ್ರಿಯವಾಗಿರಲು ಸಮೃದ್ಧವಾದ ಕಾರ್ಬೋಹೈಡ್ರೇಟ್ಗಳು ಸಹ ಅವಶ್ಯಕ. ಒಂದು ಕಪ್ (185 ಗ್ರಾಂ) ಬೇಯಿಸಿದ ಕ್ವಿನೋವಾದಲ್ಲಿ ಸುಮಾರು 40 ಗ್ರಾಂ ಕಾರ್ಬ್ಸ್ ಜೊತೆಗೆ 8 ಗ್ರಾಂ ಪ್ರೋಟೀನ್, 5 ಗ್ರಾಂ ಫೈಬರ್ ಮತ್ತು ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಮತ್ತು ಫೋಸ್ಫೋರಸ್ಸ್ ಇದೆ.
ಸ್ಟೀಲ್-ಕಟ್ ಓಟ್ಸ್: ಸ್ಟೀಲ್-ಕಟ್ ಓಟ್ಸ್ ವ್ಯಾಯಾಮದ ನಂತರ ಸೇವಿಸಲು ಉತ್ತಮ ಆಹಾರವಾಗಿದೆ ಏಕೆಂದರೆ ಇದು ಸ್ನಾಯುಗಳನ್ನು ಸರಿಪಡಿಸಲು ಮತ್ತು ಸ್ನಾಯುಗಳ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಾಲು ಕಪ್ ಸ್ಟೀಲ್-ಕಟ್ ಓಟ್ಸ್ ನಿಮಗೆ 7 ಗ್ರಾಂ ಪ್ರೋಟೀನ್ ನೀಡುತ್ತದೆ. ಸ್ಟೀಲ್-ಕಟ್ ಓಟ್ಸ್ ಕಾರ್ಬೋಹೈಡ್ರೇಟ್ ಮತ್ತು ಫೈಬರ್ನ ಮೂಲವಾಗಿದೆ. ಕೆಲವು ಅಧ್ಯಯನಗಳು ಓಟ್ಸ್ ಕ್ಯಾನ್ಸರ್ ನಿರೋಧಕ ಅಂಟಿ ಒಕ್ಸಿಡಂಟ್ಸ್ ಗಳನ್ನು ಹೊಂದಿರುತ್ತವೆ ಮತ್ತು ಕರುಳಿನ ಆರೋಗ್ಯಕ್ಕೆ ಅದ್ಭುತವಾಗಿದೆ ಎಂದು ಸೂಚಿಸುತ್ತವೆ.
ಅನಾನಸ್: ಸ್ನಾಯುಗಳನ್ನು ನಿರ್ಮಿಸಲು ನೀವು ಹಣ್ಣುಗಳನ್ನು ತಿನ್ನುವ ಬಗ್ಗೆ ಯೋಚಿಸದೇ ಇರಬಹುದು. ಆದರೆ ನಿಮ್ಮ ಆಹಾರ ಕ್ರಮದಲ್ಲಿ ನೀವು ಅನಾನಸ್ ಅನ್ನು ಸೇರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಅನಾನಸ್ ಬ್ರೊಮೆಲೈನ್ ಅನ್ನು ಹೊಂದಿರುತ್ತದೆ, ಇದು ಸ್ನಾಯುಗಳ ನೋವನ್ನು ಎದುರಿಸಲು ಸಹಾಯ ಮಾಡುತ್ತದೆ .
ಅನಾನಸ್ ನಿಮ್ಮ ದೇಹವು ಪ್ರೋಟೀನ್ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಇದು ಸ್ನಾಯುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬ್ರೊಮೆಲೇನ್ ರಕ್ತ ಪರಿಚಲನೆ ಮತ್ತು ಗಾಯದ ಗುಣಪಡಿಸುವಿಕೆಯನ್ನು ಸುಧಾರಿಸುತ್ತದೆ, ಇದು ವರ್ಕ್-ಔಟ್ ನಂತರದ ಲಘು ಆಹಾರವಾಗಿದೆ.