ಗಂಡೋ? ಹೆಣ್ಣೋ? ಬದನೆಕಾಯಿ, ಕ್ಯಾಪ್ಸಿಕಂ, ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷ್ಯ ಗೊತ್ತಾದ್ರೆ ಮೋಸ ಹೋಗಲ್ಲ

Published : Sep 10, 2026, 01:54 PM IST

ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸುವಾಗ ಅವುಗಳ ಆಕಾರ, ಬಣ್ಣ, ಗಾತ್ರವನ್ನು ಗಮನಿಸುವುದು ಸಾಮಾನ್ಯ. ಆದರೆ ಕೆಲವು ತರಕಾರಿಗಳ ಕೆಳಭಾಗದಲ್ಲಿರುವ ಗುರುತುಗಳನ್ನು ಗಮನಿಸಿದರೆ ಉತ್ತಮ ಆಯ್ಕೆ ಮಾಡಬಹುದು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

PREV
14
ಬದನೆಕಾಯಿಯಲ್ಲಿ ಈ ಗುರುತು

ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸುವಾಗ ಅವುಗಳ ಆಕಾರ, ಬಣ್ಣ, ಗಾತ್ರವನ್ನು ಗಮನಿಸುವುದು ಸಾಮಾನ್ಯ. ಆದರೆ ಕೆಲವು ತರಕಾರಿಗಳ ಕೆಳಭಾಗದಲ್ಲಿರುವ ಗುರುತುಗಳನ್ನು ಗಮನಿಸಿದರೆ ಉತ್ತಮ ಆಯ್ಕೆ ಮಾಡಬಹುದು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬದನೆಕಾಯಿ, ಕ್ಯಾಪ್ಸಿಕಂ ಹಾಗೂ ಕಲ್ಲಂಗಡಿ ಹಣ್ಣು ಆಯ್ಕೆ ಮಾಡುವಾಗ ಯಾವ ಗುರುತು ನೋಡಬೇಕು ಎಂಬ ಮಾಹಿತಿ ಇಲ್ಲಿದೆ.

ಬದನೆಕಾಯಿಯಲ್ಲಿ ಈ ಗುರುತು ಗಮನಿಸಿ

ಬದನೆಕಾಯಿಯ ತಳಭಾಗವನ್ನು ಗಮನಿಸಿದಾಗ ಕೆಲವೊಂದರಲ್ಲಿ ದುಂಡಾದ ಭಾಗ ಕಾಣಿಸುತ್ತದೆ. ಇನ್ನು ಕೆಲವು ಬದನೆಕಾಯಿಗಳಲ್ಲಿ ನೇರವಾದ ಗುರುತು ಕಂಡುಬರುತ್ತದೆ. ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ತಳಭಾಗದಲ್ಲಿ ದುಂಡಾದ ಗುರುತು ಇರುವುದನ್ನು 'ಗಂಡು ಬದನೆಕಾಯಿ' ಎಂದು, ನೇರ ಗುರುತು ಇರುವುದನ್ನು 'ಹೆಣ್ಣು ಬದನೆಕಾಯಿ' ಎಂದು ಕರೆಯಲಾಗುತ್ತದೆ. ತಿನ್ನಲು ಗಂಡು ಬದನೆಕಾಯಿ ಉತ್ತಮ ಎಂಬ ನಂಬಿಕೆಯೂ ಇದೆ. ಇದರಲ್ಲಿ ಬೀಜ ಕಡಿಮೆ ಇರುತ್ತದೆ ಹಾಗೂ ಬೇಯಿಸಿದಾಗ ಒಗರು ಕಡಿಮೆ ಎನ್ನಲಾಗುತ್ತದೆ.

24
ಕ್ಯಾಪ್ಸಿಕಂ ಆಯ್ಕೆ ಮಾಡುವಾಗ ಎಷ್ಟು ಉಬ್ಬುಗಳಿವೆ ನೋಡಿ

ಕ್ಯಾಪ್ಸಿಕಂ ಖರೀದಿಸುವಾಗ ಅದರ ಕೆಳಭಾಗವನ್ನೊಮ್ಮೆ ತಿರುಗಿಸಿ ನೋಡಿ. ಅಲ್ಲಿ ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಉಬ್ಬುಗಳು ಕಾಣಿಸಬಹುದು. ಮೂರು ಉಬ್ಬುಗಳಿರುವ ಕ್ಯಾಪ್ಸಿಕಂ ಅನ್ನು 'ಗಂಡು ಕ್ಯಾಪ್ಸಿಕಂ', ನಾಲ್ಕು ಉಬ್ಬುಗಳಿರುವುದನ್ನು 'ಹೆಣ್ಣು ಕ್ಯಾಪ್ಸಿಕಂ' ಎಂದು ಕರೆಯಲಾಗುತ್ತದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತದಲ್ಲಿದೆ. ಈ ಮಾಹಿತಿಯ ಪ್ರಕಾರ, ಮೂರು ಉಬ್ಬುಗಳಿರುವ ಕ್ಯಾಪ್ಸಿಕಂ ಅನ್ನು ಅಡುಗೆಗೆ ಹಾಗೂ ವಿಶೇಷವಾಗಿ ಸಲಾಡ್‌ಗಳಿಗೆ ಬಳಸಲು ಉತ್ತಮ ಎಂದು ಹೇಳಲಾಗುತ್ತದೆ. ನಾಲ್ಕು ಉಬ್ಬುಗಳಿರುವ ಕ್ಯಾಪ್ಸಿಕಂ ಅನ್ನು ಬೇರೆ ಅಡುಗೆಗಳಿಗೆ ಬಳಸಬಹುದು ಎನ್ನಲಾಗುತ್ತದೆ.

34
ಕಲ್ಲಂಗಡಿ ಹಣ್ಣಿನಲ್ಲೂ 'ಗಂಡು-ಹೆಣ್ಣು' ಗುರುತೇ?

ಕಲ್ಲಂಗಡಿ ಖರೀದಿಸುವಾಗ ಅದರ ಆಕಾರವನ್ನು ಗಮನಿಸುವ ಸಲಹೆಯೂ ಇದೆ. ಈ ಪ್ರಕಾರ, ಉದ್ದನೆಯ ಆಕಾರದಲ್ಲಿರುವ ಕಲ್ಲಂಗಡಿಯನ್ನು 'ಗಂಡು' ಎಂದು, ಗುಂಡಗಿನ ಆಕಾರದಲ್ಲಿರುವ ಕಲ್ಲಂಗಡಿಯನ್ನು 'ಹೆಣ್ಣು' ಎಂದು ಕರೆಯಲಾಗುತ್ತದೆ. ಗುಂಡಗಿನ ಕಲ್ಲಂಗಡಿ ಹೆಚ್ಚು ಸಿಹಿಯಾಗಿರುತ್ತದೆ ಎಂಬ ನಂಬಿಕೆಯಿದೆ. ಉದ್ದನೆಯ ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚು ಇರುತ್ತದೆ ಎಂದು ಹೇಳಲಾಗುತ್ತದೆ.

44
ಆದರೆ ಒಂದು ವಿಷಯ ನೆನಪಿರಲಿ

'ಗಂಡು' ಮತ್ತು 'ಹೆಣ್ಣು' ಎಂಬ ಈ ವರ್ಗೀಕರಣಗಳು ಸಸ್ಯಶಾಸ್ತ್ರೀಯವಾಗಿ ಬದನೆಕಾಯಿ, ಕ್ಯಾಪ್ಸಿಕಂ ಅಥವಾ ಕಲ್ಲಂಗಡಿಗೆ ಅನ್ವಯಿಸುವ ಅಧಿಕೃತ ಲಿಂಗವರ್ಗೀಕರಣವಲ್ಲ. ಹಣ್ಣಿನ ರುಚಿ, ಬೀಜದ ಪ್ರಮಾಣ ಅಥವಾ ನೀರಿನ ಅಂಶವನ್ನು ಕೇವಲ ಈ ಆಕಾರದ ಗುರುತುಗಳಿಂದ ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಖರೀದಿಸುವಾಗ ತಾಜಾತನ, ಬಣ್ಣ, ಗಾತ್ರ, ಗಟ್ಟಿತನ ಹಾಗೂ ಹಣ್ಣಿನ ಗುಣಮಟ್ಟವನ್ನೂ ಗಮನಿಸುವುದು ಮುಖ್ಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories