ಈ ಜಾಗಗಳಲ್ಲಿ ರಾತ್ರಿ ಆತ್ಮಗಳು ಸಂಚರಿಸುತ್ತಂತೆ, ಬಾಲಿವುಡ್ ಸಿಟಿಯಲ್ಲೇ ಇದೆ ಭಯಾನಕ ಲೋಕ

Published : May 19, 2026, 12:40 PM IST

ಮಾಯಾನಗರಿ ಮುಂಬೈ ಅಂದ್ರೆ ಬಾಲಿವುಡ್‌, ಸೀ ಲಿಂಕ್‌, ತಾಜ್ ಹೋಟೆಲ್‌, ಫುಲ್ ನೈಟ್‌ಲೈಫ್ ಅಂತಲೇ ಜನರಿಗೆ ಗೊತ್ತು. ಆದರೆ ಇದೇ ಮುಂಬೈನಲ್ಲಿ ರಾತ್ರಿ ಹೊತ್ತಿಗೆ ಜನರನ್ನು ಬೆಚ್ಚಿಬೀಳಿಸುವ ಕೆಲ ಭಯಾನಕ ಜಾಗಗಳೂ ಇವೆ.

PREV
15
ಮುಕೆಶ್ ಮಿಲ್ಸ್ – ಚಿತ್ರೀಕರಣಕ್ಕೂ ಹೆದರೋ ಸ್ಥಳ!

ಕೊಲಾಬಾದ ಸಮುದ್ರ ತೀರದ ಬಳಿ ಇರುವ ಮುಕೆಶ್ ಮಿಲ್ಸ್‌ ಅನ್ನು ಮುಂಬೈನ ಅತ್ಯಂತ ಹಾಂಟೆಡ್ ಜಾಗಗಳಲ್ಲಿ ಒಂದೆಂದು ಕರೆಯಲಾಗುತ್ತದೆ. ಅನೇಕ ಬಾಲಿವುಡ್ ಸಿನಿಮಾಗಳ ಶೂಟಿಂಗ್ ಇಲ್ಲಿ ನಡೆದಿದ್ರೂ, ರಾತ್ರಿ ಹೊತ್ತಿಗೆ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬ ಮಾತುಗಳು ವರ್ಷಗಳಿಂದ ಕೇಳಿಬರುತ್ತಿವೆ. ಕೆಲವರು ಶೂಟಿಂಗ್ ವೇಳೆ ಕಾಣದ ಶಕ್ತಿ ಅನುಭವಿಸಿದ್ದೇವೆ ಎಂದೂ ಹೇಳಿಕೊಂಡಿದ್ದಾರೆ.

25
ಡಿ’ಸೋಜಾ ಚಾಲ್ – ರಾತ್ರಿ ಕೇಳಿಸೋ ಹೆಜ್ಜೆ ಸದ್ದು!

ಮಾಹಿಮ್‌ನಲ್ಲಿರುವ ಡಿ’ಸೋಜಾ ಚಾಲ್ ಬಗ್ಗೆ ಹಲವು ಭಯಾನಕ ಕಥೆಗಳು ಹರಿದಾಡುತ್ತವೆ. ಈ ಜಾಗದಲ್ಲಿ ಮೃತಪಟ್ಟ ಮಹಿಳೆಯ ಆತ್ಮ ರಾತ್ರಿ ಸುಳಿದಾಡುತ್ತೆ ಎಂದು ಸ್ಥಳೀಯರು ಹೇಳುತ್ತಾರೆ. ರಾತ್ರಿ ಹೊತ್ತಿಗೆ ಹೆಜ್ಜೆ ಸದ್ದು, ಪಿಸುಮಾತು ಕೇಳಿಸುತ್ತದೆ ಎಂಬ ವದಂತಿಯಿಂದ ಈ ಚಾಲ್ ಭಯಾನಕ ಸ್ಥಳಗಳ ಪಟ್ಟಿಗೆ ಸೇರಿದೆ.

35
ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ – ಕಾಡಿನೊಳಗಿನ ಭಯಾನಕ ಮೌನ

ಹಗಲು ಪ್ರವಾಸಿಗರಿಂದ ಕಿಕ್ಕಿರಿದಿರುವ ಈ ರಾಷ್ಟ್ರೀಯ ಉದ್ಯಾನ, ರಾತ್ರಿ ಹೊತ್ತಿಗೆ ಸಂಪೂರ್ಣ ವಿಭಿನ್ನ ವಾತಾವರಣ ಪಡೆಯುತ್ತದೆ. ಕಾಡಿನೊಳಗೆ ವಿಚಿತ್ರ ಶಬ್ದಗಳು, ನೆರಳುಗಳು ಕಾಣುತ್ತವೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಯೇ ಕೆಲ ಭಾಗಗಳಿಗೆ ರಾತ್ರಿ ಹೋಗೋದನ್ನ ತಪ್ಪಿಸುತ್ತಾರೆ ಎನ್ನಲಾಗುತ್ತದೆ.

45
ಟವರ್ ಆಫ್ ಸೈಲೆನ್ಸ್ – ಆತ್ಮಗಳ ಕಥೆಗಳಿಂದ ಫೇಮಸ್

ಪಾರ್ಸಿ ಸಮುದಾಯದ ಅಂತ್ಯಕ್ರಿಯೆಗಾಗಿ ಬಳಸಲಾಗುತ್ತಿದ್ದ ಈ ಸ್ಥಳದ ಸುತ್ತ ಹಲವು ಅಲೌಕಿಕ ಕಥೆಗಳು ಕೇಳಿಬರುತ್ತವೆ. ರಾತ್ರಿ ಹೊತ್ತಿಗೆ ಅಲ್ಲಿ ವಿಚಿತ್ರ ಅನುಭವವಾಗುತ್ತದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇದರಿಂದಲೇ ಈ ಜಾಗವನ್ನು ಮುಂಬೈನ ಭಯಾನಕ ಸ್ಥಳಗಳಲ್ಲಿ ಒಂದೆಂದು ಕರೆಯಲಾಗುತ್ತದೆ.

55
ತಾಜ್ ಪ್ಯಾಲೆಸ್ ಹೋಟೆಲ್ – ಐಷಾರಾಮಿ ಹೋಟೆಲ್ ಹಿಂದಿನ ಭಯಾನಕ ಕಥೆ

ಮುಂಬೈನ ಐಕಾನಿಕ್ ತಾಜ್ ಪ್ಯಾಲೆಸ್ ಹೋಟೆಲ್ ಕೂಡ ದೆವ್ವದ ಕಥೆಗಳಿಂದ ಸುದ್ದಿಯಾಗಿತ್ತು. ಹೋಟೆಲ್ ವಿನ್ಯಾಸ ಮಾಡಿದ ವಾಸ್ತುಶಿಲ್ಪಿ ಕಟ್ಟಡ ತನ್ನ ಪ್ಲಾನ್ ಪ್ರಕಾರ ನಿರ್ಮಾಣವಾಗಿಲ್ಲ ಅನ್ನೋ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂಬ ದಂತಕಥೆ ಇಂದಿಗೂ ವೈರಲ್ ಆಗುತ್ತಲೇ ಇದೆ. ಕೆಲವರು ಹೋಟೆಲ್‌ನಲ್ಲಿ ವಿಚಿತ್ರ ಅನುಭವಗಳ ಬಗ್ಗೆ ಮಾತನಾಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories