Cleaning Hacks: ಹೋಟೆಲ್‌ಗಳಂತೆ ಮನೆಯಲ್ಲಿ ಟವೆಲ್‌ಗಳು ಮೃದುವಾಗಿರಲು ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಟವೆಲ್‌ಗಳನ್ನು ಹೇಗೆ ತೊಳೆಯಬೇಕು ಎಂಬ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಶುಚಿಯಾದ ಶ್ವೇತ ಟವೆಲ್‌ಗಳನ್ನು ನೀಡುತ್ತಾರೆ. ಈ ಟೆವೆಲ್‌ಗಳು ಹಲವು ಬಳಕೆ ನಂತ್ರವೂ ಮೃದುವಾಗಿರುತ್ತವೆ. ಆದ್ರೆ ಮನೆಗಳಲ್ಲಿ ಒಮ್ಮೆ ಟವೆಲ್ ಬಳಸಿದರೆ ಗಟ್ಟಿಯಾಗುತ್ತವೆ. ಈ ಸಮಸ್ಯೆಗೆ ಕಾರಣ ಏನು? ವಾಷಿಂಗ್ ಮಷೀನ್‌ನಲ್ಲಿ ಟವೆಲ್ ಹೇಗೆ ತೊಳೆಯಬೇಕು ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ.
26
ಬಟ್ಟೆಯ ಸಾಫ್ಟ್
ಹೋಟೆಲ್‌ಗಳಲ್ಲಿ ಟವೆಲ್ ತೊಳೆಯಲು ನಿರ್ಧಿಷ್ಟವಾದ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ ಮನೆಗಳಲ್ಲಿ ಎಲ್ಲಾ ಬಟ್ಟೆಗಳೊಂದಿಗೆ ತೊಳೆಯಲು ಹಾಕಲಾಗುತ್ತದೆ. ಇದರಿಂದ ಟವೆಲ್ ಕೆಲವೇ ದಿನಗಳಲ್ಲಿ ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ದಾರದ ಎಳೆಗಳು ಒರಟಾಗಿ, ಕೆಟ್ಟ ವಾಸನೆ ಬರಲು ಆರಂಭಿಸುತ್ತದೆ.
36
ವಾಷಿಂಗ್ ಮಷೀನ್
ವಾಷಿಂಗ್ ಮಷೀನ್‌ಗೆ ಟವೆಲ್ ಹಾಕುತ್ತಿದ್ರೆ ತುಂಬಾ ಎಚ್ಚರಿಕೆಯಿಂದಿರಬೇಕು. ಪ್ಯಾಂಟ್, ಜಾಕೆಟ್ ಅಂತಹ ಬಟ್ಟೆಗಳೊಂದಿಗೆ ಹಾಕಿದ್ರೆ ಜಿಪ್ಪರ್, ಗುಂಡಿಗಳು ಟವೆಲ್‌ಗೆ ಉಜ್ಜೋದರಿಂದ ಬಟ್ಟೆಯಲ್ಲಿ ಎಳೆಗಳು ಹಾನಿಗೊಳ್ಳುತ್ತವೆ. ಇದರಿಂದ ಬಟ್ಟೆಯ ಸಾಫ್ಟ್‌ನೆಸ್ ಕಡಿಮೆಯಾಗುತ್ತದೆ. ಆದ್ದರಿಂದ, ಟವೆಲ್‌ಗಳನ್ನು ಪ್ರತ್ಯೇಕವಾಗಿ ತೊಳೆಯುವುದು ಉತ್ತಮ.
ಕೈಯಿಂದ ಟವೆಲ್ ತೊಳೆಯುತ್ತಿದ್ರೆ, ಇವುಗಳ ಮೇಲೆ ಹೆಚ್ಚು ಒತ್ತಡ ಹಾಕದೇ ಮತ್ತು ಅತಿಯಾಗಿ ಉಜ್ಜದೇ ಕ್ಲೀನ್ ಮಾಡಬೇಕು. ಹಾಗೆತೇ ಇತರೆ ಬಟ್ಟೆಗಳೊಂದಿಗೆ ಟವೆಲ್ ಎಂದಿಗೂ ನೆನೆಯಲು ಹಾಕಬೇಡಿ. ಇತರೆ ಬಟ್ಟೆಗಳಲ್ಲಿ ಗಲೀಜು ಟವೆಲ್‌ಗೆ ವರ್ಗಾವಣೆಯಾದ್ರೆ, ಕೆಟ್ಟ ವಾಸನೆಗೆ ಕಾರಣವಾಗಬಹುದು. ವಾಷಿಂಗ್ ಮಷೀನ್ ಅಥವಾ ಕೈಯಿಂದ ತೊಳೆದ ನಂತರ ಟವಲ್ ಅನ್ನು ತಕ್ಷಣವೇ ಒಣಗಲು ಹಾಕಿ. ಹೆಚ್ಚು ಬಿಸಿಲಿನಲ್ಲಿ ಟೆವಲ್‌ಗಳನ್ನು ಒಣಗಿಸಬೇಡಿ.
56
ಡಿಟರ್ಜೆಂಟ್ ಬಳಕೆ
ಕೆಲವರು ಬಟ್ಟೆ ಸ್ವಚ್ಛವಾಗಲಿ ಎಂಬ ಉದ್ದೇಶದಿಂದ ಹೆಚ್ಚು ಡಿಟರ್ಜೆಂಟ್ ಪೌಡರ್ ಅಥವಾ ಲಿಕ್ವಿಡ್ ಸೇರಿಸುತ್ತಾರೆ. ಹೆಚ್ಚು ಡಿಟರ್ಜೆಂಟ್ ಸೇರಿಸುವುದರಿಂದ ಟವೆಲ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಅತಿಯಾದ ಡಿಟರ್ಜೆಂಟ್ ಬಳಕೆ ಬಟ್ಟೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ. ಕೆಲವರು ಪ್ರತಿಬಾರಿಯೂ ಬಟ್ಟೆ ತೊಳೆದ ನಂತರ ಸುವಾಸನೆ ಲಿಕ್ವಿಡ್ ಸೇರಿಸುತ್ತಾರೆ. ಇದು ಸಹ ಬಟ್ಟೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
66
ಟವೆಲ್ ಆರೈಕೆ
ಟವೆಲ್ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದ್ರೆ ಅಂದ್ರೆ ಅದರ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಟವೆಲ್ ಮೊದಲಿಗಿಂತ ಕಡಿಮೆ ನೀರನ್ನು ಹೀರಿಕೊಳ್ಳುತ್ತಿದ್ದರೆ ಅಥವಾ ತೊಳೆದ ನಂತರ ಭಾರವಾಗಿದ್ದರೆ, ಕಡಿಮೆ ಸಾಫ್ಟ್‌ನರ್ ಅನ್ನು ಬಳಸಲು ಪ್ರಯತ್ನಿಸಿ. ಸಂಪೂರ್ಣವಾಗಿ ತೊಳೆಯುವುದು ಸಹ ಟವೆಲ್ ಆರೈಕೆಯ ಪ್ರಮುಖ ಭಾಗವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.