ಮಳೆಗಾಲ ಶುರುವಾಗಿದ್ದು, ಮಳೆ ಜೊತೆ ಚಳಿ ಮತ್ತು ತಂಪಾದ ಗಾಳಿಯು ಬೀಸುತ್ತಿದೆ. ಚಳಿ ಹೆಚ್ಚಾಗುತ್ತಿದ್ದಂತೆ ಒಂದು ಕಪ್ ಟೀ ಕುಡಿಯುವ ಬಯಕೆಯುಂಟಾಗುತ್ತದೆ. ಇಂದು ನಾವು ನಿಮಗೆ ಫೈವ್ ಸ್ಟಾರ್ ಹೋಟೆಲ್ ರೀತಿಯಲ್ಲಿ ಟೀ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
26
ತುಂಬಾ ಜನಕ್ಕೆ ಈ ರೀತಿಯಾಗಿ ಟೀ ಮಾಡಬಹುದು ಅಂತ ಗೊತ್ತಿರಲ್ಲ. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ರುಚಿಯಾದ, ಘಮ ಘಮಿಸುವ ಮಸಾಲೆ ಟೀ ಹೇಗೆ ಮಾಡುತ್ತಾರೆ? ಅವುಗಳಿಗೆ ಬೇಕಾಗುವ ಸಾಮಾಗ್ರಿಗಳ ಮಾಹಿತಿ ಇಲ್ಲಿದೆ.
36
ಮಸಾಲೆ ಟೀ ಮಾಡಲು ಬೇಕಾಗುವ ಸಾಮಾಗ್ರಿಗಳು
ಹಾಲು: 2 ಕಪ್, ಟೀ ಪುಡಿ: 1 ಟೀ ಸ್ಪೂನ್, ಸಕ್ಕರೆ: 2 ಟೀ ಸ್ಪೂನ್, ಏಲಕ್ಕಿ: 1, ಶುಂಠಿ: ಅರ್ಧ ಇಂಚು (ಟೀ ಮಸಾಲೆ ಪೌಡರ್ ಸಹ ಬಳಸಹುದು)
ಮೊದಲಿಗೆ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಳ್ಳಬೇಕು. ಪಾತ್ರೆಗೆ 2 ಟೀ ಸ್ಪೂನ್ ಸಕ್ಕರೆ ಹಾಕಿಕೊಳ್ಳಿ. ಕಡಿಮೆ ಉರಿಯಲ್ಲಿ ಸಕ್ಕರೆಯನನ್ನು ಕರಗಿಸಿಕೊಳ್ಳಿ. ಅಂದ್ರೆ ಸಕ್ಕರೆ ಪಾಕದ ಹದಕ್ಕೆ ಬರುವಂತೆ ನೋಡಿಕೊಳ್ಳಿ.
56
ಸಕ್ಕರೆ ಪಾಕವಾಗುತ್ತಿದ್ದಂತೆ ಅದಕ್ಕೆ ನಿಮ್ಮಿಷ್ಟದ ಟೀ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಮತ್ತು ಟೀ ಪುಡಿ ಮಿಕ್ಸ್ ಆಗುತ್ತಿದ್ದಂತೆ ಅದಕ್ಕೆ ಹಾಲು ಸೇರಿಸಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಬೇಕು.
66
ಹಾಲು, ಟೀ ಪುಡಿ ಮತ್ತು ಸಕ್ಕರೆ ಚೆನ್ನಾಗಿ ಬೇಯುತ್ತಿದ್ದಂತೆ ಜಜ್ಜಿದ ಶುಂಠಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿದ್ರೆ ರುಚಿಯಾದ ಮಸಾಲೆ ಟೀ ಕುಡಿಯಲು ಸಿದ್ಧವಾಗುತ್ತದೆ. (ಏಲಕ್ಕಿ, ಶುಂಠಿ ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವವ ಟೀ ಮಸಾಲೆ ಪೌಡರ್ ಸೇರಿಸಿಕೊಳ್ಳಬಹುದು)