ಹೈನುಗಾರಿಕೆಯಲ್ಲಿ ಹಸುಗಳ ಹಾಲು ಉತ್ಪಾದನೆ ಹೆಚ್ಚಳ ಮಾಡಿಕೊಳ್ಳುವ ಸುಲಭ ಸಲಹೆಗಳು ಇಲ್ಲಿವೆ

Published : Sep 24, 2026, 05:48 PM IST

ಹೈನುಗಾರಿಕೆಯಲ್ಲಿ ಜೆರ್ಸಿ ಹಸುಗಳಿಂದ ಅಧಿಕ ಹಾಲು ಪಡೆಯಲು ವೈಜ್ಞಾನಿಕ ವಿಧಾನಗಳ ಅಳವಡಿಕೆ ಅತ್ಯಗತ್ಯವಾಗಿದೆ. ಹಸುಗಳ ಆರೋಗ್ಯದ ನಿರ್ವಹಣೆ ಸೇರಿದಂತೆ ಕೆಳಗಿನ ವಿಧಾನಗಳನ್ನು ಅಳವಡಿಸಿಕೊಂಡಲ್ಲಿ ಹಾಲಿನ ಉತ್ಪಾದನೆಯನ್ನು ಸುಲಭವಾಗಿ ಹೆಚ್ಚಿಸಬಹುದು.

PREV
15
ಹೈನುಗಾರಿಕೆ

ಹೈನುಗಾರಿಕೆ ಆರಂಭಿಸುವ ರೈತರು ಸಾಮಾನ್ಯವಾಗಿ ಜೆರ್ಸಿ ಸೇರಿದಂತೆ ಉತ್ತಮ ತಳಿಯ ಹಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೈನುಗಾರಿಕೆಯಲ್ಲಿ ಹಾಲು ಉತ್ಪಾದನೆ ಮತ್ತು ಕಡಿಮೆ ಸಮಯದಲ್ಲಿ ಜಾನುವಾರಗಳ ಸಂಖ್ಯೆ ಹೆಚ್ಚಿಸಿಕೊಳ್ಳೋದು ಮೊದಲ ಆದ್ಯತೆಯಾಗಿರುತ್ತವೆ, ಸಾಮಾನ್ಯವಾಗಿ ಜೆರ್ಸಿ ಹಸುವೊಂದು ದಿನಕ್ಕೆ 10 ರಿಂದ 15 ಲೀಟರ್ ಹಾಲು ನೀಡುತ್ತದೆ. ಸಾಕಾಣಿಕೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಕೆ ಮಾಡಿಕೊಂಡ್ರೆ ಹಾಲಿನ ಪ್ರಮಾಣ ಹೆಚ್ಚಳ ಮಾಡಿಕೊಳ್ಳಬಹುದು.

25
ಸಮತೋಲಿತ ಆಹಾರ

ಹೆಚ್ಚು ಮೇವು ನೀಡಿದ್ರೆ ಅಧಿಕ ಹಾಲು ಸಿಗುತ್ತೆ ಎಂಬ ಕಲ್ಪನೆ ಬಹುತೇಕರಲ್ಲಿದೆ. ಹಸುಗಳಿಗೆ ಮೇವು ನೀಡಿದ್ರೆ ಮಾತ್ರ ಸಾಕಾಗುವುದಿಲ್ಲ. ಹಸುಗಳಿಗೆ ಸೂಕ್ತ ಪ್ರಮಾಣದಲ್ಲಿ ಹಸಿರು ಮತ್ತು ಒಣ ಮೇವು, ಸಮತೋಲಿದಲ್ಲಿ ಧಾನ್ಯಗಳನ್ನು ನೀಡುವುದು ಮುಖ್ಯವಾಗುತ್ತದೆ. ಹಸುಗಳಿಗೆ ನೀಡಲಾಗುವ ಆಹಾರದಲ್ಲಿ ಪ್ರೋಟೀನ್, ಫೈಬರ್, ಐರನ್ ಮತ್ತು ವಿಟಮಿನ್‌ಗಳ ಸಮತೋಲನವನ್ನು ಹೊಂದಿರಬೇಕಾಗುತ್ತದೆ.

ಈ ಸಮತೋಲದ ಆಹಾರದಿಂದ ಹಸುಗಳು ನೀಡುವ ಹಾಲಿನ ಪ್ರಮಾಣ ಹೆಚ್ಚಳವಾಗುತ್ತದೆ. ಹಸುವಿಗೆ ಎಲ್ಲಾ ಸಮಯದಲ್ಲಿಯೂ ಸೂಕ್ತವಾಗಿ ನೀರು ನೀಡಬೇಕು. ಬೇಸಿಗೆಯಲ್ಲಿ ವಿಶೇಷವಾಗಿ ಹಸುಗಳಿಗೆ ಸಮಯಕ್ಕೆ ಸರಿಯಾಗಿ ನೀರು ಕುಡಿಸೋದನ್ನು ಮರೆಯಬಾರದು.

35
ಅಗತ್ಯ ಖನಿಜಾಂಶಗಳು

ಕ್ಯಾಲ್ಸಿಯಂ, ರಂಜಕ ಮತ್ತು ಇತರ ಅಗತ್ಯ ಖನಿಜಾಂಶಗಳ ಕೊರತೆಯಿಂದಾಗಿ ಹಸುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತವೆ. ಹಾಲು ನೀಡುವ ಸಂದರ್ಭದಲ್ಲಿ ಹಸುಗಳು ಅನಾರೋಗ್ಯಕ್ಕೆ ತುತ್ತಾದ್ರೆ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹಸುಗಳ ವಾಸಸ್ಥಳ ಶುಷ್ಕ ಮತ್ತು ಸ್ವಚ್ಛವಾಗಿರಬೇಕು. ಇದರಿಂದ ಹಸುಗಳ ಆರೋಗ್ಯ ಚೆನ್ನಾಗಿರುತ್ತದೆ. ತೇವಾಂಶ ಪ್ರದೇಶದಲ್ಲಿ ಹಸುಗಳಿದ್ರೆ ಸೋಂಕು ಸೇರಿದಂತೆ ರೋಗಗಳ ಅಪಾಯ ಅಧಿಕವಾಗಿರುತ್ತದೆ.

45
ಹಾಲು ಕರೆಯುವಿಕೆ ಸಮಯ

ಹಾಲು ಕರೆಯುವಿಕೆ ಸಮಯವನ್ನು ನಿಗಧಿ ಮಾಡಿಕೊಳ್ಳಿ. ಬಹುತೇಕರು ಸಾಮಾನ್ಯವಾಗಿ ದಿನಕ್ಕೆ ಎರಡು ಬಾರಿ ಹಾಲು ಕರೆಯುತ್ತಾರೆ. ಹಾಲು ಕರೆಯುವ ಮುನ್ನ ಕರುಗಳಿಗೆ ಹಾಲುಣಿಸುವ ಸಮಯವನ್ನು ಫಿಕ್ಸ್ ಮಾಡಿಕೊಳ್ಳಿ. ಬೆಳಗ್ಗೆ ಮತ್ತು ಸಂಜೆ ಆಗಿದ್ರೆ ಒಂದು ಸಮಯವನ್ನು ಫಿಕ್ಸ್ ಮಾಡಿದ್ರೆ ಹಾಲಿನ ಪ್ರಮಾಣ ಹೆಚ್ಚಳವಾಗುತ್ತದೆ. ಸಮಯ ನಿಗಧಿ ಮಾಡಿಕೊಳ್ಳೋದರಿಂದ ಹಸುವಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

55
ಹಸುಗಳ ಆರೋಗ್ಯ

ಹಾಲು ಕರೆಯುವ ಸಂದರ್ಭದಲ್ಲಿ ಹಸುವಿನ ಕೆಚ್ಚಲಿನಲ್ಲಿ ಊತ, ಶಾಖ, ನೋವು ಅಥವಾ ಹಾಲಿನಲ್ಲಿ ಅಸಾಮಾನ್ಯ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಈ ರೀತಿಯ ಬದಲಾವಣೆಗಳು ಕಂಡು ಬಂದ್ರೆ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿ. ಜರ್ಸಿ ಹಸುಗಳು ಬಿಸಿ ವಾತಾವರಣದಲ್ಲಿಯೂ ಹಾಲು ನೀಡುತ್ತವೆ. ಅತಿಯಾದ ಶಾಖ ಮತ್ತು ತೇವಾಂಶ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories