ವಿದ್ಯುತ್ ಬಿಲ್ ಕಡಿಮೆ ಮಾಡಲು 10 ಸೂಪರ್ ಟಿಪ್ಸ್!

Published : May 20, 2025, 05:53 PM IST

ವಿದ್ಯುತ್ ಬಿಲ್ ಉಳಿತಾಯ ಸಲಹೆಗಳು: ಬಿಸಿಲು ಜಾಸ್ತಿಯಾದಂತೆ, ವಿದ್ಯುತ್ ಬಿಲ್ ಕೂಡ ಜಾಸ್ತಿ ಆಗ್ತಿದೆ. ತಿಂಗಳ ಬಿಲ್ ನೋಡಿ ಹೃದಯ ಬಡಿತ ಜೋರಾಗ್ತಿದೆ. ಆದ್ರೆ ಭಯಪಡುವ ಅಗತ್ಯ ಇಲ್ಲ. ಸಣ್ಣಪುಟ್ಟ ಮನೆಮದ್ದುಗಳಿಂದ ನೂರಾರು-ಸಾವಿರಾರು ರೂಪಾಯಿ ಉಳಿಸಬಹುದು. 10 ಸುಲಭ ಟಿಪ್ಸ್ ತಿಳ್ಕೊಳ್ಳಿ  

PREV
110
ವಿದ್ಯುತ್ ಬಿಲ್ ಕಡಿಮೆ ಮಾಡಲು 10 ಸೂಪರ್ ಟಿಪ್ಸ್!

1. ಹಳೆ ಬಲ್ಬ್ ತೆಗೆದು LED ಹಾಕಿ

ಹಳೆ ಹಳದಿ ಬಲ್ಬ್‌ಗಳು ವಿದ್ಯುತ್ ತಿಂತಾವೆ. LED ಬಲ್ಬ್‌ಗಳು 80% ವಿದ್ಯುತ್ ಉಳಿಸುತ್ತವೆ ಮತ್ತು 10 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಇದರಿಂದ ಬಿಲ್ ನೇರವಾಗಿ ಅರ್ಧ ಆಗಬಹುದು.

210

2. ಮೊಬೈಲ್ ಚಾರ್ಜರ್ ಹಾಕಿ ಬಿಡ್ಬೇಡಿ

ಚಾರ್ಜರ್ ಹಾಕಿ ಬಿಡೋದು ನಿಮ್ಮ ಹವ್ಯಾಸನಾ? ಚಾರ್ಜಿಂಗ್ ಆದ್ಮೇಲೆ ಚಾರ್ಜರ್ ತೆಗೆದುಬಿಡಿ. ಇದರಿಂದ ತಿಂಗಳಿಗೆ ₹100 ರಿಂದ 200 ರೂ. ಉಳಿತಾಯ ಮಾಡಬಹುದು.

310

3. ಫ್ಯಾನ್ ACಗಿಂತ ಮೊದಲು ಹಾಕಿ

ಬಿಸಿಲಲ್ಲಿ ಮೊದಲು ರೂಮನ್ನು ಫ್ಯಾನ್‌ನಿಂದ ತಂಪು ಮಾಡಿ, ನಂತರ AC ಹಾಕಿ. ಇದರಿಂದ AC ಮೇಲೆ ಲೋಡ್ ಕಡಿಮೆ ಮತ್ತು ಬಿಲ್ ಕೂಡ ಕಡಿಮೆ.

410

4. ಫ್ರಿಡ್ಜ್ ಆಗಾಗ ತೆರೆಯಬೇಡಿ

ಫ್ರಿಡ್ಜ್ ಆಗಾಗ ತೆರೆದರೆ ಅದರೊಳಗಿನ ತಂಪು ಹೋಗುತ್ತದೆ. ಆಗ ಪುನಃ ಫ್ರಿಡ್ಜ್ ತಂಪಾಗಿಡಲು ಮೋಟಾರ್ ಜಾಸ್ತಿ ಓಡುತ್ತದೆ. ಕಡಿಮೆ ತೆರೆದಷ್ಟು ಪವರ್ ಉಳಿತಾಯ ಆಗುತ್ತದೆ.

510

5. ಸೋಲಾರ್ ಲೈಟ್ಸ್ ಹಾಕಿ

ಗಾರ್ಡನ್ ಅಥವಾ ಬಾಲ್ಕನಿಯಲ್ಲಿ ಸೋಲಾರ್ ಲ್ಯಾಂಪ್ ಹಾಕಿ, ಫ್ರೀ ಸೂರ್ಯನ ಬೆಳಕಿನಿಂದ ರಾತ್ರಿ ಬೆಳಕು, ಬಿಲ್ ಜೀರೋ ಆಗುತ್ತದೆ.

610

6. ಗೀಜರ್‌ಗೆ ಟೈಮ್ ಸೆಟ್ ಮಾಡಿ

ಗೀಜರ್ 24x೭7 ಆನ್ ಇಡ್ತೀರಾ? 10-15 ನಿಮಿಷ ಸಾಕು, ಆಟೋ-ಕಟ್ ಗೀಜರ್ ಉಪಯೋಗಿಸಿ. ಇದರಿಂದ ನಿಮ್ಮ ವಿದ್ಯುತ್ ಉಳಿತಾಯವಾಗಲಿದೆ.

710

7. ನೀವು ಮನೆಗೆ 5 ಸ್ಟಾರ್ ಉಪಕರಣ ಖರೀದಿಸಿ

ನೀವು ಮನೆಗೆ ಯಾವಾಗಲೂ 5 ಸ್ಟಾರ್ ರೇಟಿಂಗ್ ಇರುವ ಫ್ಯಾನ್, AC, ಫ್ರಿಡ್ಜ್, ವಾಷಿಂಗ್ ಮೆಷಿನ್ ಖರೀದಿಸಿ. ಸ್ವಲ್ಪ ದುಬಾರಿಯಾದರೂ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ.

810

8. ಹಗಲಿನಲ್ಲಿ ಸೂರ್ಯನ ಬೆಳಕು ಬಳಸಿ

ಹಗಲಿನಲ್ಲಿ ಸುಖಾ ಸುಮ್ಮನೆ ಲೈಟ್‌ಗಳನ್ನು ಆನ್ ಮಾಡಿ ಹಾಗೆಯೇ ಬಿಡಬೇಡಿ. ಪರದೆ ತೆಗೆದು, ಕಿಟಕಿ ತೆರೆದಿಡಿ, ಫ್ರೀ ಬೆಳಕು ಸಿಗುತ್ತದೆ.

910

9. ವಾಷಿಂಗ್ ಮೆಷಿನ್ ಫುಲ್ ಲೋಡ್‌ನಲ್ಲಿ ಓಡಿಸಿ

ವಾಷಿಂಗ್ ಮೆಷಿನ್‌ನಲ್ಲಿ ಅರ್ಧ ಬಟ್ಟೆ ಹಾಕಿ ಓಡಿಸಿದ್ರೆ ವಿದ್ಯುತ್ ಜಾಸ್ತಿ ಖರ್ಚಾಗುತ್ತೆ. ಫುಲ್ ಲೋಡ್‌ನಲ್ಲಿ ಓಡಿಸಿ ಉಳಿತಾಯ ಮಾಡಿ.

1010

10. ಟಿವಿ, ಕಂಪ್ಯೂಟರ್ ಆಫ್ ಮಾಡಿ

ಬಳಸದೇ ಇದ್ದಾಗ TV, ಲ್ಯಾಪ್‌ಟಾಪ್ ಮತ್ತು ಇತರ ಡಿವೈಸ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡಿ. ಸ್ಟ್ಯಾಂಡ್‌ಬೈ ಮೋಡ್‌ನಲ್ಲೂ ವಿದ್ಯುತ್ ಖರ್ಚಾಗುತ್ತದೆ.

Read more Photos on
click me!

Recommended Stories