Smartwatch: ಕೈಗೆ ಸ್ಮಾರ್ಟ್ ವಾಚ್ ಕಟ್ಟುವುದರಿಂದ ನಿಜವಾಗ್ಲೂ ಕ್ಯಾನ್ಸರ್ ಬರುತ್ತಾ?

Published : Jul 30, 2026, 11:22 AM IST

Is a smartwatch harmful to health? ಸ್ಮಾರ್ಟ್ ವಾಚ್ ಇಂದು ಮಕ್ಕಳಿಂದ ಮುದುಕವರೆಗೆ ಧರಿಸುತ್ತಾರೆ. ಸ್ಮಾರ್ಟ್‌ವಾಚ್‌ ಹಲವು ಉಪಯೋಗಗಳಿವೆ. ಅದೇ ರೀತಿ ಸ್ಮಾರ್ಟ್ ವಾಚ್ ಹೊರಸುಸುವ ವಿಕಿರಣದಿಂದ ಕ್ಯಾನ್ಸರ್ ಬರುತ್ತದೆಯೇ? ಹೀಗೊಂದು ವದಂತಿ ಹರಡಿದೆ. ಇದು ನಿಜವೇ?

PREV
15
Is a smartwatch harmful to health?

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಮುದುಕರವರೆಗೆ ವಯಸಿನ ಹಂಗು ಇಲ್ಲದೆ ಎಲ್ಲರೂ ಕೈಗಳಿಗೆ ಸ್ಮಾರ್ಟ್ ವಾಚ್‌ ಕಟ್ಟುತ್ತಾರೆ. ಸಾಂಪ್ರಾದಾಯಿಕ ಗಡಿಯಾರಗಳಿಗಿಂತ ಸ್ಮಾರ್ಟ್ ವಾಚ್‌ಗಳು ಭಿನ್ನವಾಗಿವೆ. ಹಳೆ ಗಡಿಯಾರಗಳು ಕೇವಲ ಸಮಯ ತೋರಿಸಲು ಬಳಕೆಯಾದರೆ, ಸ್ಮಾರ್ಟ್ ವಾಚ್‌ಗಳು ಸಮಯ ತೋರಿಸುವುದಷ್ಟೇ ಅಲ್ಲ, ಹೃದಯ ಬಡಿತ, ಹೆಜ್ಜೆಗಳನ್ನ ಟ್ಯಾಕ್ ಮಾಡುವುದು, ನಿದ್ದೆ ಮಾಡುವ ಸಮಯ ಅಲರ್ಟ್ ಮಾಡುವುದು, ಬೆಳಗಿನ ಅಲಾರಂ, ಕಾಲ್ ರಿಸಿವಿಂಗ್‌, ಸಂಗೀತ.. ಸ್ಮಾರ್ಟ್‌ ವಾಚ್‌ಗಳಲ್ಲಿ ಎಲ್ಲವೂ ಇದೆ. ಹೀಗಾಗಿ ಎಲ್ಲರೂ ಸ್ಮಾರ್ಟ್ ವಾಚ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ.

25
ಸ್ಮಾರ್ಟ್ ವಾಚ್‌ನಿಂದ ಕ್ಯಾನ್ಸರ್ ವದಂತಿ ಎಷ್ಟು ನಿಜ?

ಇತ್ತೀಚಿನ ದಿನಗಳಲ್ಲಿ ಒಂದು ಆಘಾತಕಾರಿ ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ಸ್ಮಾರ್ಟ್ ವಾಚ್‌ಗಳು ಹೊರಸೂಸುವ ವಿಕಿರಣದಿಂದಾಗಿ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ ಎಂದು ಕೆಲವರು ಅಭಿಪ್ರಾಯ ವದಂತಿಯಾಗಿ ಹರಡಿದೆ. ಇದರಿಂದಾಗಿ ಯುವ ಜನತೆ ಸ್ಮಾರ್ಟ್‌ವಾಚ್ ಕಟ್ಟುವ ಆಸೆಯಾದರೂ ಅದರಿಂದ ಕ್ಯಾನ್ಸರ್ ಅಪಾಯ ಎನ್ನುವ ವದಂತಿಯಿಂದ ಧರಿಸಲು ಆಗದೆ, ಬಿಟ್ಟಿರಲು ಆಗದೆ ಗೊಂದಲದಲ್ಲಿದ್ದಾರೆ. ಹಾಗಾದರೆ ನಿಜವಾಗಿಯೂ ಸ್ಮಾರ್ಟ್ ವಾಚ್ ಕಟ್ಟುವುದರಿಂದ ಕ್ಯಾನ್ಸರ್ ಬರುತ್ತದೆಯೇ? 

ಸ್ಮಾರ್ಟ್ ವಾಚ್‌ನಿಂದ ಕ್ಯಾನ್ಸರ್‌ ಬರುತ್ತದೆ ಎಂಬ ಸಾಮಾನ್ಯ ಜನರ ವದಂತಿಗಳನ್ನ ನಂಬುವುದು ಬೇಡ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆ ವಿಚಾರವಾಗಿ ನಾವಿಲ್ಲಿ ತಿಳಿದುಕೊಳ್ಳೋಣ.

35
ಸ್ಮಾರ್ಟ್ ವಾಚ್ ವಿಕಿರಣ ಅಪಾಯಕಾರಿಯೇ?

ಸ್ಮಾರ್ಟ್‌ವಾಚ್‌ಗಳು ಬ್ಲೂಟೂತ್, ವೈ-ಫೈ ಮೂಲಕ ನೇರವಾಗಿ ನಿಮ್ಮ ಫೋನ್ ಅಥವಾ ಇಂಟರ್ನೆಟ್‌ಗೆ ಕನೆಕ್ಟ್ ಆಗುತ್ತವೆ. ಈ ಕನೆಕ್ಟ್ ಆಗಬೇಕೆಂದರೆ ಗಡಿಯಾರವು ಅತಿ ಕಡಿಮೆ-ಶಕ್ತಿಯ ರೇಡಿಯೋ ಆವರ್ತನ (RF) ವಿಕಿರಣ ಅಥವಾ ಅಯಾನೀಕರಿಸದ ವಿಕಿರಣವನ್ನು ಹೊರಸೂಸುತ್ತದೆ. ಇದು ರೇಡಿಯೋ ತರಂಗಗಳು ಮತ್ತು ಬೆಳಕಿನಲ್ಲಿ ಕಂಡುಬರುವ ಅದೇ ರೀತಿಯ ಶಕ್ತಿಯಾಗಿದೆ. ಈ ವಿಕಿರಣವು ಎಕ್ಸ್-ಕಿರಣಗಳಂತಹ ಅಯಾನೀಕರಿಸುವ ವಿಕಿರಣಕ್ಕಿಂತ ಭಿನ್ನವಾಗಿದೆ ಏಕೆಂದರೆ ಇದು ನೇರ ಹಾನಿಯನ್ನುಂಟುಮಾಡುವ ಶಕ್ತಿಯನ್ನು ಹೊಂದಿಲ್ಲ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಹೆಚ್ಚಿನ ಸ್ಮಾರ್ಟ್‌ವಾಚ್‌ಗಳು ಬ್ಲೂಟೂತ್ ಕನೆಕ್ಟ್ ಮೂಲಕ ಕೆಲಸ ಮಾಡುತ್ತವೆ. ಇದು ಅತ್ಯಂತ ಕಡಿಮೆ ಶಕ್ತಿಯಲ್ಲಿ ಸಂಕೇತಗಳನ್ನು ಕಳುಹಿಸುತ್ತದೆ.

45
ತಜ್ಞರ ಸಂಶೋಧನೆ ಏನು ಹೇಳುತ್ತದೆ?

ಸ್ಮಾರ್ಟ್‌ವಾಚ್ ಧರಿಸುವುದರಿಂದ, ಅವುಗಳ ವಿಕಿರಣ ಹೊರಸುಸುವ ರೇಡಿಯೋ ತರಂಗಗಳಿಂದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ತಜ್ಞರು ಹೇಳ್ತಾರೆ. ಇದನ್ನು ಪ್ರಪಂಚಾದ್ಯಂತ ಪ್ರಮುಖ ಆರೋಗ್ಯ ಸಂಸ್ಥೆಗಳು ಕೂಡ ನಂಬುತ್ತವೀ. ಹೀಗಾಗಿ ಮುಂದುವರಿದ ಅಮೆರಿಕದಂತಹ ರಾಷ್ಟ್ರಗಳಲ್ಲೂ ಜನರು ಹೆಚ್ಚಾಗಿ ಸ್ಮಾರ್ಟ್‌ ವಾಚ್‌ಗಳನ್ನು ಬಳಸುತ್ತಾರೆ. ವರದಿಯ ಪ್ರಕರಣ, ರೇಡಿಯೋ ಪ್ರಿಕ್ವೆನ್ಸಿ ಶಕ್ತಿಯಿಂದ ಮನುಷ್ಯನಿಗಾಗಲಿ, ಪ್ರಾಣಿಗಾಗಲಿ ಕ್ಯಾನ್ಸರ್ ಉಂಟುಮಾಡುತ್ತೆ ಎಂಬುದಕ್ಕೆ ಇದುವರೆಗೆ ಪುರಾವೆಗಳಿಲ್ಲ ಎಂದು ತಿಳಿಸಿದೆ. ಆದರೆ ಸ್ಮಾರ್ಟ್‌ ವಾಚ್‌ನಂತ ಸಾಧನಗಳನ್ನು ನಿರಂತರವಾಗಿ ಕೈಗಳಿಗೆ ಧರಿಸುವುದರಿಂದ ಉಂಟಾಗುವ ಪರಿಣಾಮಗಳನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ವರದಿ ಹೇಳಿದೆ. ಒಟ್ಟಾರೆ ಸ್ಮಾರ್ಟ್‌ವಾಚ್‌ಗಳು ಅಪಾಯಕಾರಿ ಎಂಬ ವದಂತಿಗೆ ಯಾವುದೇ ಪುರಾವೆಗಳಿಲ್ಲ.

55
ಆದರೂ ಸ್ಮಾರ್ಟ್ ವಾಚ್ ನಿರಂತರ ಧರಿಸುವುದು ಒಳ್ಳೆಯದಲ್ಲ!

ಆದರೆ ತಜ್ಞರು ಇನ್ನೂ ಕೆಲವು ಸರಳ ಮುನ್ನೆಚ್ಚರಿಕೆ ಬಗ್ಗೆ ಹೇಳುತ್ತಾರೆ ಅದೇನೆಂದರೆ ರಾತ್ರಿ ಮಲಗುವ ಮುನ್ನ ನಿಮ್ಮ ಸ್ಮಾರ್ಟ್ ವಾಚ್ ಅನ್ನು ತೆಗೆದುಹಾಕುವುದು, ಅಗತ್ಯವಿಲ್ಲದಿದ್ದಾಗ ಬ್ಲೂಟೂತ್ ಮತ್ತು ಇಂಟರ್ನೆಟ್ ಕನೆಕ್ಟ್ ಆಫ್ ಮಾಡುವುದು ಮತ್ತು ಮಕ್ಕಳು ದೀರ್ಘಕಾಲದವರೆಗೆ ಸ್ಮಾರ್ಟ್ ವಾಚ್‌ಗಳನ್ನು ಧರಿಸುವುದನ್ನು ತಡೆಯುವುದು, ಏಕೆಂದರೆ ಅವರ ದೇಹವು ಬೆಳವಣಿಗೆ ಹಂತದಲ್ಲಿರುವುದರಿಂದ ದುರ್ಬಲವಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories