ಜೇನುತುಪ್ಪ ಪ್ಯಾಕ್ ಹಚ್ಚಿ
ಮೊಣಕಾಲು, ಮೊಣಕೈ ಕಪ್ಪು ತೆಗೆಯಲು ಜೇನುತುಪ್ಪಕ್ಕೆ ನಿಂಬೆರಸ, ಸಕ್ಕರೆ ಸೇರಿಸಿ. ಕಪ್ಪಾದ ಚರ್ಮಕ್ಕೆ ಹಚ್ಚಿ ಉಜ್ಜಿ. ಇದು ಸತ್ತ ಚರ್ಮ ತೆಗೆದು ತೇವಾಂಶ ನೀಡಿ ಕಪ್ಪು ಕಡಿಮೆ ಮಾಡುತ್ತೆ.
ಬಟಾಟೆ ರಸ
ಬಟಾಟೆ ಬ್ಲೀಚಿಂಗ್‌ನಂತೆ ಕೆಲಸ ಮಾಡುತ್ತೆ. ಬಟಾಟೆ ರಸಕ್ಕೆ ನಿಂಬೆ, ಟೊಮೆಟೊ ರಸ ಸೇರಿಸಿ. ಅಲೋವೆರಾ, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಪೇಸ್ಟ್ ಮಾಡಿ ಮೊಣಕಾಲು, ಮೊಣಕೈ, ಬೆರಳುಗಳಿಗೆ ಹಚ್ಚಿ. ೨೦ ನಿಮಿಷ ಬಿಟ್ಟು ನೀರಿನಿಂದ ಮಸಾಜ್ ಮಾಡಿ ಸ್ಪಾಂಜಿನಿಂದ ಒರೆಸಿ. ಮೊದಲ ಬಾರಿ ಬಳಸಿದಾಗಲೇ ಒಳ್ಳೆಯ ಫಲಿತಾಂಶ ಸಿಗುತ್ತೆ.