Washing machine settings tips: ನಮಗೆ ಗೊತ್ತಿರುವ ಒಂದೆರಡು ಬಟನ್‌ಗಳನ್ನಷ್ಟೇ ಒತ್ತಿ ಬಟ್ಟೆ ತೊಳೆಯುವುದು ನಮ್ಮಲ್ಲಿ ಹಲವರ ಅಭ್ಯಾಸ. ಆದರೆ ವಾಷಿಂಗ್ ಮಷಿನ್‌ನಲ್ಲಿರುವ 5 ಪ್ರಮುಖ ಫೀಚರ್‌ಗಳನ್ನು ಸರಿಯಾಗಿ ಬಳಸಿದರೆ ಬಟ್ಟೆ ಸುಕ್ಕುಗಟ್ಟುವುದಿಲ್ಲ, ವಿದ್ಯುತ್ ಮತ್ತು ಸಮಯ ಉಳಿಯುತ್ತೆ.
5 ಪ್ರಮುಖ ಸೆಟ್ಟಿಂಗ್ಸ್‌ಗಳು ನಾವು ದಿನನಿತ್ಯ ವಾಷಿಂಗ್ ಮಷಿನ್ ಬಳಸುವಾಗ ನಮಗೆ ಅಭ್ಯಾಸವಾಗಿರುವ ಒಂದೆರಡು ಬಟನ್‌ಗಳನ್ನು ಮಾತ್ರ ಒತ್ತಿ (ನಾರ್ಮಲ್ ಮೋಡ್) ಬಟ್ಟೆ ಒಗೆಯಲು ಹಾಕಿಬಿಡುತ್ತೇವೆ. ಆದರೆ ವಾಷಿಂಗ್ ಮಷಿನ್‌ನಲ್ಲಿ ಎಷ್ಟೋ ಉಪಯುಕ್ತ ಫೀಚರ್‌ಗಳಿದ್ದರೂ, ಹಲವರು ಅವುಗಳನ್ನು ಮುಟ್ಟುವುದೇ ಇಲ್ಲ! ಈ ಸೆಟ್ಟಿಂಗ್ಸ್‌ಗಳನ್ನು ಸರಿಯಾಗಿ ಬಳಸಿದರೆ ಬಟ್ಟೆಗಳು ಹಾಳಾಗುವುದಿಲ್ಲ, ವಿದ್ಯುತ್ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ. ನೀವು ತಿಳಿದುಕೊಳ್ಳಲೇಬೇಕಾದ 5 ಪ್ರಮುಖ ಸೆಟ್ಟಿಂಗ್ಸ್‌ಗಳು ಇಲ್ಲಿವೆ..
26
1. ಪರ್ಮನೆಂಟ್ ಪ್ರೆಸ್ (Permanent Press / Wrinkle Control)
1. ಪರ್ಮನೆಂಟ್ ಪ್ರೆಸ್ (Permanent Press / Wrinkle Control) ಯಾಕಾಗಿ?: ಬಟ್ಟೆಗಳು ಅತಿಯಾಗಿ ಸುಕ್ಕುಗಟ್ಟುವುದನ್ನು (Wrinkles) ತಡೆಯಲು. ಹೇಗೆ ಕೆಲಸ ಮಾಡುತ್ತದೆ?: ತುಂಬಾ ಕೊಳಕಿಲ್ಲದ ದಿನನಿತ್ಯದ ಬಟ್ಟೆಗಳಿಗೆ ಇದು ಅತ್ಯುತ್ತಮ. ಇದು ಕಡಿಮೆ ನೀರಿನ ತಾಪಮಾನ ಮತ್ತು ನಿಧಾನವಾದ ಸ್ಪಿನ್ (Spin) ವೇಗವನ್ನು ಬಳಸುತ್ತದೆ. ಬಟ್ಟೆ ಒಗೆದ ನಂತರ ಅವುಗಳಿಗೆ ಅತಿಯಾಗಿ ಇಸ್ತ್ರಿ (Iron) ಮಾಡುವ ಅಗತ್ಯವಿರುವುದಿಲ್ಲ. ಮಷಿನ್‌ನಲ್ಲಿ ಈ ಹೆಸರು ಇಲ್ಲದಿದ್ದರೆ 'Casuals', 'Colors' ಅಥವಾ 'Wrinkle Care' ಹೆಸರಿನಲ್ಲಿ ಇರುತ್ತದೆ.
36
2. ಕ್ವಿಕ್ ವಾಶ್ ಅಥವಾ ಸ್ಪೀಡ್ ವಾಶ್ (Quick / Speed Wash)
2. ಕ್ವಿಕ್ ವಾಶ್ ಅಥವಾ ಸ್ಪೀಡ್ ವಾಶ್ (Quick / Speed Wash) ಯಾಕಾಗಿ?: ಅರ್ಜೆಂಟ್ ಆಗಿ ಬಟ್ಟೆ ಬೇಕಾದಾಗ ಮತ್ತು ಸಮಯ ಉಳಿಸಲು. ಹೇಗೆ ಕೆಲಸ ಮಾಡುತ್ತದೆ?: ಸಾಮಾನ್ಯವಾಗಿ ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಒಗೆಯಲು 45 ನಿಮಿಷದಿಂದ 1 ಗಂಟೆ ಬೇಕು. ಆದರೆ ಕೇವಲ 1 ಅಥವಾ 2 ಬಟ್ಟೆಗಳು ಮಾತ್ರ ಇದ್ದಾಗ ಅಥವಾ ಬೆವರು ಮಾತ್ರ ಹತ್ತಿರುವ ಬಟ್ಟೆಗಳನ್ನು ತೊಳೆಯಲು 'ಕ್ವಿಕ್ ವಾಶ್' ಬೆಸ್ಟ್. ಇದು ಕೇವಲ 15 ರಿಂದ 20 ನಿಮಿಷಗಳಲ್ಲಿ ಬಟ್ಟೆಯನ್ನು ತೊಳೆದುಕೊಡುತ್ತದೆ.
3. ಪ್ರಿ-ಸೋಕ್ ಅಥವಾ ಪ್ರಿ-ವಾಶ್ (Pre-Soak / Pre-Wash) ಯಾಕಾಗಿ?: ಹಠಮಾರಿ ಕಲೆಗಳು ಮತ್ತು ಅತಿಯಾದ ಕೊಳೆ ಹೋಗಲಾಡಿಸಲು. ಹೇಗೆ ಕೆಲಸ ಮಾಡುತ್ತದೆ?: ಮಕ್ಕಳು ಮಣ್ಣಿನಲ್ಲಿ ಆಡಿ ಬಂದ ಬಟ್ಟೆಗಳು ಅಥವಾ ಅತಿಯಾದ ಕಲೆಯಿರುವ ಬಟ್ಟೆಗಳನ್ನು ಕೈಯಿಂದ ನೆನೆಸಿಡುವ ಅಗತ್ಯವಿಲ್ಲ. ಈ ಬಟನ್ ಒತ್ತಿದರೆ, ಮುಖ್ಯ ವಾಶ್ ಶುರುವಾಗುವ ಮೊದಲೇ ಮಷಿನ್ 15-30 ನಿಮಿಷಗಳ ಕಾಲ ಬಟ್ಟೆಯನ್ನು ಸೋಪು ನೀರಿನಲ್ಲಿ ನೆನೆಸಿಡುತ್ತದೆ. ನಂತರ ಆ ಕೊಳಕು ನೀರನ್ನು ಹೊರಹಾಕಿ ಹೊಸ ನೀರಿನಲ್ಲಿ ಮುಖ್ಯ ವಾಶ್ ಆರಂಭಿಸುತ್ತದೆ.
56
4. ಏರ್-ಓನ್ಲಿ ಮೋಡ್ (Air-Only)
4. ಏರ್-ಓನ್ಲಿ ಮೋಡ್ (Air-Only) ಯಾಕಾಗಿ?: ಧೂಳು, ಹೊಲಸು ಮತ್ತು ಸಾಕುಪ್ರಾಣಿಗಳ ಕೂದಲು ತೆಗೆಯಲು. ಹೇಗೆ ಕೆಲಸ ಮಾಡುತ್ತದೆ?: ಇದು ಡ್ರೈಯರ್‌ನಲ್ಲಿರುವ (Dryer) ಅದ್ಭುತ ಫೀಚರ್. ಇದರಲ್ಲಿ ಹೀಟರ್ ಆನ್ ಆಗುವುದಿಲ್ಲ, ಕೇವಲ ತಂಪಾದ ಗಾಳಿ ಮಾತ್ರ ಸುತ್ತುತ್ತದೆ. ಕರ್ಟನ್‌ಗಳು, ಸೋಫಾ ಕುಶನ್‌ಗಳು ಅಥವಾ ಬೆಡ್‌ಶೀಟ್‌ಗಳಲ್ಲಿರುವ ಧೂಳು ಮತ್ತು ಕೂದಲನ್ನು ಬಟ್ಟೆ ಒಗೆಯದೆಯೇ ಕೇವಲ ಗಾಳಿಯ ಮೂಲಕ ತೆಗೆದು ಫ್ರೆಶ್ ಮಾಡಲು ಈ ಮೋಡ್ ಬಳಸಿ.
66
5. ಟಬ್ ಕ್ಲೀನ್ ಅಥವಾ ವಾಷರ್ ಕ್ಲೀನಿಂಗ್ ಸೈಕಲ್ (Tub Clean / Washer Cleaning)
5. ಟಬ್ ಕ್ಲೀನ್ ಅಥವಾ ವಾಷರ್ ಕ್ಲೀನಿಂಗ್ ಸೈಕಲ್ (Tub Clean / Washer Cleaning) ಯಾಕಾಗಿ?: ವಾಷಿಂಗ್ ಮಷಿನ್‌ನಲ್ಲಿ ಬೂಸ್ಟ್, ಬ್ಯಾಕ್ಟೀರಿಯಾ ಮತ್ತು ದುರ್ವಾಸನೆ ಹೋಗಲಾಡಿಸಲು. ಹೇಗೆ ಕೆಲಸ ಮಾಡುತ್ತದೆ?: ಬಟ್ಟೆ ಶುಭ್ರವಾಗಿರಬೇಕಾದರೆ ಮೊದಲು ಮಷಿನ್ ಕ್ಲೀನ್ ಆಗಿರಬೇಕು. ಡಿಟರ್ಜೆಂಟ್ ಪೌಡರ್ ಮಷಿನ್ ಒಳಗೆ ಶೇಖರಣೆಯಾಗಿ ಬ್ಯಾಕ್ಟೀರಿಯಾ ಬೆಳೆಯುತ್ತವೆ. ತಿಂಗಳಿಗೊಮ್ಮೆ ಅಥವಾ 30 ವಾಶ್ ಆದ ನಂತರ 'ಟಬ್ ಕ್ಲೀನ್' ಮೋಡ್ ಆನ್ ಮಾಡಿ ಡಿಸ್ಕೇಲಿಂಗ್ ಪೌಡರ್ ಅಥವಾ ಟ್ಯಾಬ್ಲೆಟ್ ಹಾಕಿ ಖಾಲಿ ಮಷಿನ್ ರನ್ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.