ದೋಸೆ ಪ್ಯಾನ್‌ಗೆ ಅಂಟಿಕೊಂಡು ಕಿತ್ತುಹೋಗುತ್ತಾ? ಈ ದೇಸಿ ಟ್ರಿಕ್ ಟ್ರೈ ಮಾಡಿ, ರೆಸ್ಟೋರೆಂಟ್‌ನಂತೆ ಗರಿಗರಿಯಾಗಿರುತ್ತೆ

Published : Feb 06, 2026, 12:16 PM IST

Restaurant Style Dosa: ದೋಸೆ ದಕ್ಷಿಣ ಭಾರತೀಯರ ನೆಚ್ಚಿನ ಖಾದ್ಯವಾಗಿದ್ದು, ಇದನ್ನು ಉತ್ತರ ಭಾರತದಲ್ಲೂ ಇಷ್ಟಪಟ್ಟು ತಿಂತಾರೆ. ಕೆಲವೊಮ್ಮೆ ದೋಸೆ ಮಾಡುವಾಗ ಅದು ಪ್ಯಾನ್‌ಗೆ ಅಂಟಿಕೊಳ್ಳಬಹುದು. ಈ ಸಮಸ್ಯೆಯನ್ನು ಸರಿಪಡಿಸುವುದು ಹೇಗೆಂದು ಇಲ್ಲಿ ನೋಡೋಣ.. 

PREV
15
ದೋಸೆ ರೆಸ್ಟೋರೆಂಟ್‌ನಂತೆ ಗರಿಗರಿಯಾಗಿ ಬರಲು

ದೋಸೆ... ಹೆಸರು ಕೇಳಿದರೇನೇ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಆದರೆ ಇಂದಿಗೂ ಮನೆಯಲ್ಲಿ ದೋಸೆ ತಯಾರಿಸುವುದು ಅಷ್ಟೇ ಸವಾಲಿನ ಕೆಲಸ. ಯಾಕೆಂದರೆ ಆಗಾಗ್ಗೆ ದೋಸೆ ಪ್ಯಾನ್‌ಗೆ ಅಂಟಿಕೊಂಡಾಗ ಅಥವಾ ನೀವು ಅದನ್ನು ತೆಗೆಯುವಾಗ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ ನಮ್ಮ ದೋಸೆ ರೆಸ್ಟೋರೆಂಟ್‌ನಂತೆ ಗರಿಗರಿಯಾಗಿ ಬರಲು, ತೆಳ್ಳಗೆ ಬರಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ ನಿಮಗೆ ಸಹಾಯ ಮಾಡುವ ಕೆಲವು ಟೆಕ್ನಿಕ್ಸ್ ಮತ್ತು ಮನೆಮದ್ದುಗಳನ್ನ ಇಲ್ಲಿ ಶೇರ್ ಮಾಡಲಿದ್ದೇವೆ.

25
ಬಾಣಲೆಯಲ್ಲಿ ಈರುಳ್ಳಿ ಬಳಕೆ

ಸಾಮಾನ್ಯವಾಗಿ ಜನರು ಬ್ಯಾಟರ್ ಅಥವಾ ಹಿಟ್ಟನ್ನ ನೇರವಾಗಿ ಬಿಸಿ ಪ್ಯಾನ್‌ ಗೆ ಸುರಿಯುತ್ತಾರೆ. ಇದು ದೊಡ್ಡ ತಪ್ಪು. ದೋಸೆ ಅಂಟಿಕೊಳ್ಳದಂತೆ ತಡೆಯಲು ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ವಿಧಾನವೆಂದರೆ ಈರುಳ್ಳಿ ಬಳಸುವುದು. ಮೊದಲಿಗೆ ಪ್ಯಾನ್ ಬಿಸಿ ಮಾಡಿ, ಕೆಲವು ಹನಿ ಎಣ್ಣೆಯನ್ನು ಸೇರಿಸಿ. ಈಗ ಈರುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ ಅದನ್ನು ಫೋರ್ಕ್‌ನಿಂದ ಹಿಡಿದು ಬಿಸಿ ಪ್ಯಾನ್‌ ಮೇಲೆ ಚೆನ್ನಾಗಿ ಉಜ್ಜಿ. ಈರುಳ್ಳಿ ರಸವು ಪ್ಯಾನ್ ಮೇಲೆ ನೈಸರ್ಗಿಕ ನಾನ್-ಸ್ಟಿಕ್ ಪದರವನ್ನು ಸೃಷ್ಟಿಸುತ್ತದೆ. ಹಿಟ್ಟು ಅಂಟಿಕೊಳ್ಳದಂತೆ ತಡೆಯುತ್ತದೆ ಮತ್ತು ದೋಸೆ ಸುಲಭವಾಗಿ ಹೊರಬರಲು ಅನುವು ಮಾಡಿಕೊಡುತ್ತದೆ.

35
ಉಪ್ಪು ಮತ್ತು ಎಣ್ಣೆ ಮಿಶ್ರಣ

ನಿಮ್ಮ ಪ್ಯಾನ್ ತುಂಬಾ ಹಳೆಯದಾಗಿದ್ದರೆ ಮತ್ತು ಅದರಲ್ಲೇ ಸತತವಾಗಿ ದೋಸೆ ಮಾಡುತ್ತಲೇ ಇದ್ದರೆ ಉಪ್ಪು ಪರಿಹಾರವನ್ನು ಪ್ರಯತ್ನಿಸಿ. ಪ್ಯಾನ್ ಅನ್ನು ಲಘುವಾಗಿ ಬಿಸಿ ಮಾಡಿ. ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ. ಹತ್ತಿ ಬಟ್ಟೆಯಿಂದ ಉಪ್ಪನ್ನು ಉಜ್ಜಿ. ನಂತರ ಸ್ವಲ್ಪ ಎಣ್ಣೆ ಹಚ್ಚಿ, ಪ್ಯಾನ್ ಅನ್ನು ಸ್ವಚ್ಛವಾಗಿ ಒರೆಸಿ. ಈ ಪ್ರಕ್ರಿಯೆಯು ಒರಟು ಮೇಲ್ಮೆಯನ್ನು ಸುಗಮಗೊಳಿಸುತ್ತದೆ. ದೋಸೆಯನ್ನು ಮಾಡುವ ಮೊದಲು ಪ್ಯಾನ್ ಸರಿಯಾದ ತಾಪಮಾನದಲ್ಲಿದೆ ಎಂಬುದನ್ನು ಕನ್‌ಫರ್ಮ್ ಮಾಡಿಕೊಳ್ಳೋದು ಬಹಳ ಮುಖ್ಯ.

45
ನೀರನ್ನು ಸಿಂಪಡಿಸೋದು ಏಕೆ ಮುಖ್ಯ?

ಸಾಮಾನ್ಯವಾಗಿ ದೋಸೆ ಮಾಡುವವರು ಪ್ಯಾನ್ ಮೇಲೆ ನೀರು ಚಿಮುಕಿಸುವುದನ್ನು ನೀವು ಹೆಚ್ಚಾಗಿ ನೋಡಿರುತ್ತೀರಿ. ಇದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆ. ದೋಸೆ ಹಿಟ್ಟು ಸುರಿಯುವ ಮೊದಲು ಪ್ಯಾನ್‌ನ ತಾಪಮಾನ ತುಂಬಾ ಹೆಚ್ಚಾಗಿರುತ್ತದೆ. ಆದ್ದರಿಂದ ನೀರನ್ನು ಚಿಮುಕಿಸಿ. ನಂತರ, ತಕ್ಷಣ ಅದನ್ನು ಬಟ್ಟೆಯಿಂದ ಒರೆಸಿ. ನಂತರ ಹಿಟ್ಟನ್ನು ಹರಡಿ. ಇದು ದೋಸೆ ಅಂಟಿಕೊಳ್ಳುವುದನ್ನು ತಡೆಯುವುದಲ್ಲದೆ, ಅದನ್ನು ಗರಿಗರಿಯಾಗಿಸುತ್ತದೆ.

55
ಈ ಸಣ್ಣ ವಿಷಯಗಳ ಬಗ್ಗೆಯೂ ಗಮನವಿರಲಿ..

*ದೋಸೆಯನ್ನು ಹರಡುವಾಗ ಜ್ವಾಲೆಯನ್ನು ಕಡಿಮೆ ಇರಿಸಿ ಮತ್ತು ಹರಡಿದ ನಂತರ ಮಧ್ಯಮದಿಂದ ಹೆಚ್ಚಿನ ಉರಿಯಲ್ಲಿ ಬೇಯಿಸಿ.
*ದೋಸೆಯ ಅಂಚುಗಳಿಗೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಲು ಮರೆಯದಿರಿ. ಇದರಿಂದ ಮೇಲ್ಮೈ ತಾನಾಗಿಯೇ ಬಿಡುತ್ತದೆ.
*ನೀವು ನಾನ್-ಸ್ಟಿಕ್ ಪ್ಯಾನ್ ಬಳಸುತ್ತಿದ್ದರೆ ಅದನ್ನು ಎಂದಿಗೂ ಸ್ಟೀಲ್ ವೂಲ್ ಪ್ಯಾಡ್‌(Steel wool pad)ನಿಂದ ಉಜ್ಜಬೇಡಿ, ಇಲ್ಲದಿದ್ದರೆ ಅದರ ಲೇಪನ ಹಾನಿಗೊಳಗಾಗುತ್ತದೆ.

ಈ ಸುಲಭವಾದ ಅಡುಗೆ ತಂತ್ರದೊಂದಿಗೆ ನೀವು ಈಗ ಮನೆಯಲ್ಲಿ ಪ್ರೊಫೆಶನಲಿಸ್ಟ್‌ನಂತೆಯೇ ಪರ್‌ಫೆಕ್ಟ್‌ ದೋಸೆ ಮಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories