ಮನೆಯ ಗ್ಯಾಸ್ ಆಗಾಗ ನಿಮ್ಮ ಬಜೆಟ್ ಅನ್ನು ತಲೆಕೆಳಗೆ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಗ್ಯಾಸ್ ಬೇಗ ಖಾಲಿ ಆಗಿಬಿಡುತ್ತೆ. ಅಯ್ಯೋ ಗ್ಯಾಸ್ ಖಾಲಿ ಆಯ್ತು ಅಂತಾ ಬಾಯಿ ಮೇಲೆ ಬೆರಳಿಡುತ್ತೇವೆ. ಮೊನ್ನೆಯಷ್ಟೇ ಹೊಸ ಗ್ಯಾಸ್ ಬಂದಿತ್ತು. ಈಗ ನೋಡಿದ್ರೆ ಖಾಲಿ ಖಾಲಿ ಅಂತಾ ತಲೆ ಚಚ್ಚಿಕೊಳ್ತೀವಿ.
ಅಂದ್ಹಾಗೆ ಮನೆಯಲ್ಲಿ ಗ್ಯಾಸ್ ಸುಮ್ಮಸುಮ್ಮೆನೆ ಖಾಲಿ ಆಗೋದಿಲ್ಲ. ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳಿಂದಾಗಿ ಅದು ಸಂಭವಿಸುತ್ತದೆ. ಒಂದು ವೇಳೆ ನಾವು ತಪ್ಪುಗಳನ್ನ ಮಾಡಿದಿದ್ರೆ.. 10 ರಿಂದ 15 ದಿನಗಳ ಕಾಲ ಹೆಚ್ಚುವರಿಯಾಗಿ ಬಳಸಬಹುದಾಗಿದೆ.
25
ಗ್ಯಾಸ್ ಹಚ್ಚುವ ಮೊದಲು ಏನು ಮಾಡಬೇಕು?
ನೀವು ಓಲೆಗೆ ಬೆಂಕಿ ಹಚ್ಚುವ ಮೊದಲು ಅಡುಗೆಗೆ ಬೇಕಾದ ಎಲ್ಲಾ ತಯಾರಿ ಮುಗಿಸಿಕೊಳ್ಳಿ
ಗ್ಯಾಸ್ ಹಚ್ಚಿದ ಮೇಲೆ ಒಂದೊಂದೇ ವಸ್ತುಗಳನ್ನ ಕತ್ತರಿಸುವುದು, ಹುಡುಕುವುದು ಮಾಡಬೇಡಿ
ಪ್ಲಾನ್ ಪ್ರಕಾರ ಗ್ಯಾಸ್ ಹೊತ್ತಿಸಿ.. ಬೆಂಕಿಯನ್ನ ವ್ಯರ್ಥ ಮಾಡದೇ ಅಡುಗೆ ಮಾಡಿ ಮುಗಿಸಿ
ಅದಕ್ಕಾಗಿ ನೀವು ಅಡುಗೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನ ಮೊದಲೇ ಸಿದ್ಧಪಡಿಸಿಕೊಳ್ಳಬೇಕು
35
ಪ್ಯಾನ್ ಮತ್ತು ಬರ್ನರ್
ಪ್ಯಾನ್‌ನ ಗಾತ್ರಕ್ಕೆ ಸೂಕ್ತವಾದ ಬರ್ನರ್ ಆರಿಸಬೇಕು
ಇಲ್ಲದಿದ್ದರೆ ಹೆಚ್ಚುವರಿ ಬೆಂಕಿ ಸುಮ್ಮನೆ ಹಾಳಾಗುತ್ತದೆ
ಫ್ಲಾಟ್-ಬಾಟಮ್ ಹೊಂದಿರುವ ಪ್ಯಾನ್ ಬಳಸುವುದು ಒಳ್ಳೆಯದು
ಅಡುಗೆ ಮಾಡುವಾಗ ಮುಚ್ಚಳಗಳನ್ನು ಮುಚ್ಚುವುದನ್ನ ಮರೆಯಬಾರದು
ಇದು ಉಗಿಯನ್ನು ಹಿಡಿದಿಟ್ಟುಕೊಳ್ಳುತ್ತದೆ, ಎರಡು ಪಟ್ಟು ಬೇಗ ಬೇಯುತ್ತದೆ
ಬೇಳೆ, ಅಕ್ಕಿ, ಆಲೂಗಡ್ಡ, ಮಾಂಸ ಬೇಯಿಸಲು ಹೆಚ್ಚು ಸಮಯ ಬೇಕು
ಗಟ್ಟಿಯಾದ ವಸ್ತುಗಳ ಬೇಯಿಸಲು ಕುಕರ ಬಳಸಿ, ಗ್ಯಾಸ್ ಉಳಿತಾಯ
ಈ ಟ್ರಿಕ್ಸ್ ಫಾಲೋ ಮಾಡಿದ್ರೆ 30 ರಿಂದ 40 ಪ್ರತಿಶತದಷ್ಟು ಅನಿಲ ಉಳಿಸಬಹುದು
55
ಇನ್ನೂ ಏನು ಮಾಡಬಹುದು?
ಒಂದು ಸಲ ಕುದಿಯಲು ಪ್ರಾರಂಭಿಸಿದ್ರೆ ಬೆಂಕಿಯ ಉರಿಯನ್ನ ಕಡಿಮೆ ಮಾಡಬೇಕು
ಹೆಚ್ಚಿನ ಉರಿಯಲ್ಲಿ ಬೇಯಿಸಿದ್ರೆ ಆಹಾರ ಹಾಳಾಗುವುದಲ್ಲದೆ, ಪೋಷಕಾಂಶಗಳು ನಾಶ
ಜೊತೆಗೆ ಗ್ಯಾಸ್ ಕೂಡ ವೇಸ್ಟ್ ಆಗುತ್ತದೆ
ಫ್ರಿಡ್ಜ್‌ನಿಂದ ತೆಗೆದ ಹಾಲು, ತರಕಾರಿ, ಹಿಟ್ಟನ್ನು ನೇರವಾಗಿ ಒಲೆಯ ಮೇಲೆ ಇಡಬಾರದು
ಅವುಗಳನ್ನು ಮುಂಚಿತವಾಗಿ ತೆಗೆದಿಟ್ಟು ನಂತರ ಅಡುಗಗೆ ಬಳಸಬೇಕು
ಸ್ಟೌವ್ ಮೇಲೆ ಇರಲಿ ಎಚ್ಚರ
ಸ್ಟೌವ್ ಬರ್ನರ್‌ನ ರಂಧ್ರಗಳಲ್ಲಿ ಎಣ್ಣೆ, ಗ್ರೀಸ್ ಮತ್ತು ಆಹಾರ ತ್ಯಾಜ್ಯ ಸಂಗ್ರಹ ಆಗಿರುತ್ತದೆ
ಆಗ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ, ಕೆಂಪು ಅಥವಾ ಹಳದಿ ಜ್ವಾಲೆಯನ್ನು ಉತ್ಪಾದಿಸುತ್ತದೆ
ಇದರಿಂದ ಹೆಚ್ಚ ಗ್ಯಾಸ್ ಬೇಕಾಗುತ್ತದೆ, ವಾರಕ್ಕೊಮ್ಮೆ ಬರ್ನರ್‌ಗಳನ್ನು ಸ್ವಚ್ಛಗೊಳಿಸಬೇಕು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.