Pizza ನಿಮ್ಮ ಮನೆಯಲ್ಲಿ ಏರ್ ಫ್ರೈಯರ್ ಇದೆಯಾ? ಹಾಗಿದ್ರೆ ನಿಮಿಷಗಳಲ್ಲೇ ರುಚಿಕರವಾದ ಪಿಜ್ಜಾ ತಯಾರಿಸಬಹುದು. ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಸುಲಭವಾಗಿ ಮಾಡೋದು ಹೇಗೆಂದು ತಿಳಿಯಿರಿ.
ಹೊರಗಿನ ಪಿಜ್ಜಾ ಆರೋಗ್ಯಕರವಾಗಿರುತ್ತದೋ ಇಲ್ಲವೋ ಎಂಬ ಚಿಂತೆ ಬೇಡ. ನಿಮ್ಮ ಮನೆಯಲ್ಲಿ ಏರ್ ಫ್ರೈಯರ್ ಇದ್ದರೆ ಸಾಕು, ಬೇಕೆಂದಾಗ ಬಿಸಿ ಬಿಸಿ ಪಿಜ್ಜಾ ಮಾಡಿ ಸವಿಯಬಹುದು. ರಾತ್ರಿ ಹೊತ್ತು ಹಸಿವಾದಾಗಲೂ ತಕ್ಷಣ ಮಾಡ್ಕೊಂಡು ತಿನ್ನಬಹುದು.
24
ಪಿಜ್ಜಾ ಬೇಸ್
ಪಿಜ್ಜಾ ಬೇಸ್ - ಒಂದು ಪಿಜ್ಜಾ ಸಾಸ್ - ಒಂದು ಚಮಚ ಮೊಝರೆಲ್ಲಾ ಚೀಸ್ - ಎರಡು ಚಮಚ ಈರುಳ್ಳಿ - ಅರ್ಧ ಕ್ಯಾಪ್ಸಿಕಂ - ಅರ್ಧ ಮುಸುಕಿನ ಜೋಳದ ಕಾಳುಗಳು - ಒಂದು ಹಿಡಿ ಒರೆಗಾನೊ - ಕಾಲು ಚಮಚ ಚಿಲ್ಲಿ ಫ್ಲೇಕ್ಸ್ - ಅರ್ಧ ಚಮಚ ಸ್ವಲ್ಪ ಆಲಿವ್ ಎಣ್ಣೆ
34
ಏರ್ ಫ್ರೈಯರ್
1. ಮೊದಲು ಏರ್ ಫ್ರೈಯರ್ ಅನ್ನು 180°C ನಲ್ಲಿ 3–5 ನಿಮಿಷ ಪ್ರೀಹೀಟ್ ಮಾಡಿ. 2. ತರಕಾರಿಗಳನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕಿಡಿ. 3. ಪಿಜ್ಜಾ ಬೇಸ್ ಮೇಲೆ ಪಿಜ್ಜಾ ಸಾಸ್ ಹರಡಿ. 4. ಈಗ ಕತ್ತರಿಸಿದ ತರಕಾರಿಗಳು ಮತ್ತು ಚೀಸ್ ಅನ್ನು ಮೇಲೆ ಹಾಕಿ. 5. ಅದರ ಮೇಲೆ ಒರೆಗಾನೊ, ಚಿಲ್ಲಿ ಫ್ಲೇಕ್ಸ್ ಉದುರಿಸಿ, ಸ್ವಲ್ಪ ಎಣ್ಣೆ ಹಾಕಿ. 6. ಈ ಪಿಜ್ಜಾವನ್ನು ಏರ್ ಫ್ರೈಯರ್‌ನಲ್ಲಿ 180°C ನಲ್ಲಿ 6–8 ನಿಮಿಷ ಬೇಕ್ ಮಾಡಿ. 7. ಚೀಸ್ ಕರಗಿ, ಪಿಜ್ಜಾ ಆದ ಮೇಲೆ ಹೊರತೆಗೆದು ಸರ್ವ್ ಮಾಡಿ.
44
ಪ್ರತಿಯೊಂದು ಏರ್ ಫ್ರೈಯರ್ ಸ್ವಲ್ಪ ಭಿನ್ನ
ಪ್ರತಿಯೊಂದು ಏರ್ ಫ್ರೈಯರ್ ಸ್ವಲ್ಪ ಭಿನ್ನವಾಗಿರುತ್ತದೆ. ಹಾಗಾಗಿ 6 ನಿಮಿಷಗಳ ನಂತರ ಒಮ್ಮೆ ಪರೀಕ್ಷಿಸುವುದು ಉತ್ತಮ. ಚೀಸ್ ಚೆನ್ನಾಗಿ ಕರಗಿದೆಯೇ, ಬೇಸ್ ಆಗಿದೆಯೊ ಎಂದು ನೋಡಿಕೊಳ್ಳಿ. ಅಗತ್ಯವಿದ್ದರೆ, ಇನ್ನೂ ಒಂದು ಅಥವಾ ಎರಡು ನಿಮಿಷ ಹೆಚ್ಚುವರಿಯಾಗಿ ಬೇಕ್ ಮಾಡಬಹುದು. ಹಾಗೆಯೇ, ಚೀಸ್ ಹೆಚ್ಚು ಹಾಕಿದರೆ ಪಿಜ್ಜಾ ಇನ್ನಷ್ಟು ರುಚಿಯಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.