ಹುಬ್ಬಳ್ಳಿ ಮೇಲ್ಸೇತುವೆ ಸಂಚಾರಕ್ಕೆ ಯಾವಾಗ ಮುಕ್ತ; ಇಲ್ಲಿಗೆ ಕಾಮಗಾರಿಯ ಲೇಟೆಸ್ಟ್ ಮಾಹಿತಿ

Published : May 09, 2026, 08:24 AM IST

ಹುಬ್ಬಳ್ಳಿಯ ಬಹುನಿರೀಕ್ಷಿತ ಮೇಲ್ಸೇತುವೆ ಕಾಮಗಾರಿಯು ಶೇ.70ರಷ್ಟು ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಶಾಸಕ ಮಹೇಶ ಟೆಂಗಿನಕಾಯಿ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 

PREV
16
ವರ್ಷಾಂತ್ಯಕ್ಕೆ ಫ್ಲೈಓವರ್‌ ಕಾಮಗಾರಿ ಪೂರ್ಣ!

ಹುಬ್ಬಳ್ಳಿ: ನಗರದ ನಡೆಯುತ್ತಿರುವ ಮೇಲ್ಸೇತುವೆಯ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದ್ದು ಡಿಸೆಂಬರ್‌ಗೆ ಮುಗಿಯಲಿದೆ. ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ಶುಕ್ರವಾರ ಕೋರ್ಟ್ ವೃತ್ತದಿಂದ ಹೊಸೂರ ವೃತ್ತದ ವರೆಗೂ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

26
₹ 13 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ

ಪಂಚ ರಾಜ್ಯ ಚುನಾವಣೆ ಹಿನ್ನೆಲೆ ಕಾರ್ಮಿಕರು ಅಲ್ಲಿಗೆ ತೆರಳಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಎಲ್ಲ ಕಾರ್ಮಿಕರು ಆಗಮಿಸಿದ್ದು ಕಾಮಗಾರಿ ಭರದಿಂದ ಸಾಗಿದೆ ಎಂದ ಅವರು, ಬಹುತೇಕ ಕೆಲಸ ಪೂರ್ಣಗೊಂಡಿದ್ದು ಗಲ್ಡರ್‌ ಅಳವಡಿಸಲಾಗಿದೆ. ಕಾಮಗಾರಿ ಮುಗಿದ ಜಾಗದಲ್ಲಿ ₹ 13 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಕೇಂದ್ರದ ಅನುಮೋದನೆ ದೊರೆಕಿದೆ ಎಂದರು.

36
ದೇಸಾಯಿ ವೃತ್ತದಿಂದ ಕೋರ್ಟ್ ವೃತ್ತದ ವರೆಗಿನ ರಸ್ತೆ ಕಾಮಗಾರಿ

ಮೊದಲ ಹಂತದಲ್ಲಿ ಹೊಸೂರ ವೃತ್ತದಿಂದ ಹಳೇ ಬಸ್ ನಿಲ್ದಾಣದ ವರೆಗೆ ಸಿಸಿ ರಸ್ತೆ ಕಾಮಗಾರಿ ಆರಂಭವಾಗಿದ್ದು, 15 ದಿನದಲ್ಲಿ ಮುಗಿಯಲಿದೆ. ಎರಡನೇ ಹಂತದಲ್ಲಿ ಚೆನ್ನಮ್ಮ ವೃತ್ತದಿಂದ ಭವಾನಿ ಆರ್ಕೆಡ್ ವರೆಗೆ ಕೈಗೊಳ್ಳಲು ಸೂಚಿಸಲಾಗಿದೆ. ದೇಸಾಯಿ ವೃತ್ತದಿಂದ ಕೋರ್ಟ್ ವೃತ್ತದ ವರೆಗಿನ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಗದಗ ರಸ್ತೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಪರಿಹರಿಸಿ ಕಾಮಗಾರಿ ಆರಂಭಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

46
ಬಿಆರ್‌ಟಿಎಸ್ ಬಸ್ ನಿಲ್ದಾಣ

ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲಿ ಕೆಲವು ಸಮಸ್ಯೆಗಳಿದ್ದು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬಸ್ ನಿಲ್ದಾಣ ಎದುರಿರುವ ಬಿಆರ್‌ಟಿಎಸ್ ಬಸ್ ನಿಲ್ದಾಣ ತೆರವುಗೊಳಿಸಿದ್ದು, ಅದನ್ನು ಗಾಳಿ ದುರ್ಗಮ್ಮ ದೇವಸ್ಥಾನ ಹತ್ತಿರ ವಾಹನ ಸವಾರರಿಗೆ ತೊಂದರೆಯಾಗದಂತೆ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

56
ಬಸ್ ನಿಲ್ದಾಣ ತೆರವು

ಸದ್ಯಕ್ಕೆ ಪಾಲಿಕೆ ಎದುರಿಗಿರುವ ಬಸ್ ನಿಲ್ದಾಣ ತೆರವುಗೊಳಿಸಲು ನಿರ್ಧರಿಸಿದ್ದು ಕಾಮಗಾರಿ ಮುಗಿದ ಮೇಲೆ ಎಲ್ಲಿಗೆ ಸ್ಥಳಾಂತರಿಸಬೇಕು ಎಂಬುದನ್ನು ಚರ್ಚಿಸಲಾಗಿದೆ ಎಂದು ಹೇಳಿದರು. ಈ ವೇಳೆ ಉಪಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮೂರಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಡಿಸಿಪಿ ರವೀಶ್ ಸಿ.ಆರ್., ಎಸಿಪಿ ವೀರೇಶ ಪಾಟೀಲ, ಬಿಜೆಪಿ ಮುಖಂಡ ರವಿ ನಾಯಕ, ಈಶ್ವರಗೌಡ ಪಾಟೀಲ, ಸಾಯಿನಾಥ ದಲಬಂಜನ ಸೇರಿದಂತೆ ಅನೇಕರಿದ್ದರು.

ಇದನ್ನೂ ಓದಿ: ಸೂರ್ಯಕಾಂತಿ ರೈತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ; ಫಿಕ್ಸ್ ಆಯ್ತು ಪ್ರತಿ ಕ್ವಿಂಟಾಲ್‌ ದರ

66
ಮೇಲ್ಸೇತುವೆ ಕಾಮಗಾರಿ

ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಒಟ್ಟು 87 ಫೌಂಡೇಶನ್‌ನಲ್ಲಿ 84 ಫೌಂಡೇಶನ್‌ ಸ್ಥಾಪಿಸಲಾಗಿದೆ. ಆರು ಪೀಯರ್ ಕ್ಯಾಪ್ (ಸೇತುವೆ ಕಂಬದ ಮೇಲ್ಭಾಗ ರಚನೆ) ಅಳಡಿಸಬೇಕಿದೆ. 294 ಗಲ್ಡರ್‌ನಲ್ಲಿ 262 ಅಳವಡಿಸಿದ್ದು 25 ಗಲ್ಡರ್‌ಗಳ ತಯಾರಿಸಬೇಕಿದೆ. 32 ಸ್ಲ್ಯಾಬ್ ಅಳವಡಿಸುವುದು ಬಾಕಿ ಇದ್ದು, ಗಲ್ಡರ್ ಅಳವಡಿಸಿದ ಬಳಿಕ ಸ್ಲ್ಯಾಬ್ ಹಾಕಲಾಗುವುದು. ಚೆನ್ನಮ್ಮ ವೃತ್ತದಲ್ಲಿ ಬಾಕ್ಸ್ ಗಲ್ಡರ್ ಹಾಕುವುದು ಸ್ವಲ್ಪ ವಿಳಂಬವಾಗಲಿದೆ. ಫ್ಲೈಓವರ್ ಕಾಮಗಾರಿ ಮುಗಿದ ಸ್ಥಳದಲ್ಲಿ ಒಂದುವರೆ ತಿಂಗಳೊಳಗೆ ಮುಖ್ಯ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಅಧಿಕಾರಿ ಸತೀಶ ನಾಗನೂರ ತಿಳಿಸಿದರು.

ಇದನ್ನೂ ಓದಿ: Umesh Meti Kodimath visit: ಕೋಡಿಮಠ ಶ್ರೀಗಳಗೆ ಬೆಳ್ಳಿ ಕೀರಿಟ ಅರ್ಪಿಸಿದ ಶಾಸಕ ಉಮೇಶ್ ಮೇಟಿ

Read more Photos on
click me!

Recommended Stories