ಕುರಂಕೋಟೆ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ, ಬಸ್ ನಿಲ್ದಾಣ, ಹಾಗೂ ಊರಿನ ಪ್ರಮುಖ ರಸ್ತೆಯಲ್ಲಿ ಪೊಸ್ಟರ್ ಅಂಟಿಸಲಾಗಿದೆ. ಹಣಕಾಸಿನ ಸಂಸ್ಥೆ ಹೆಸರಿನಲ್ಲಿ ಈ ರೀತಿಯ ಪೋಸ್ಟರ್ ಅಂಟಿಸಲಾಗಿದೆ. ಇನ್ನು ಪೋಸ್ಟರ್ ಕಾಣುತ್ತಿದ್ದಂತೆ ಸಿದ್ದರಾಜಯ್ಯ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಹಣಕಾಸಿನ ಸಂಸ್ಥೆ ಘಟಕಕ್ಕೆ ಬಂದಿದ್ದಾರೆ. ನಾವು ಈ ರೀತಿಯಲ್ಲಿ ಪೋಸ್ಟರ್ ಅಂಟಿಸಲ್ಲ. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬರಲಾಗಿದೆ ಹಣಕಾಸಿನ ಸಂಸ್ಥೆಯ ಸಿಬ್ಬಂದಿ ಹೇಳಿದ್ದಾರೆ.