ಬೇಡವಾಗಿದ್ದ ಗಂಡ, ಬೇಕಿದ್ದ ಡೇವಿಡ್: ಪೊಲೀಸರ ಮುಂದೆ ಇಂಚಿಂಚು ಲವ್ ಕಹಾನಿ ಹೇಳಿದ ಪ್ರಿಯಾಂಕಾ

Published : Feb 16, 2026, 07:33 AM IST

30 ಲಕ್ಷ ಮೌಲ್ಯದ ಒಡವೆಗಳೊಂದಿಗೆ ನಾಪತ್ತೆಯಾಗಿದ್ದ ಪ್ರಿಯಾಂಕಾ, ತಾನು ಕೊ*ಲೆಯಾಗಿದ್ದೇನೆಂದು ಬಿಂಬಿಸಿ ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸಿದ್ದಳು. ಪತಿ ಜೊತೆಗಿನ ಜೀವನದಲ್ಲಿ ಅಸಮಾಧಾನಗೊಂಡಿದ್ದ ಆಕೆ, ತನ್ನ ಕೊಲೆ ನಾಟಕದ ಮೂಲಕ ಮಧ್ಯಪ್ರದೇಶಕ್ಕೆ ಹೋಗಲು ಯೋಜಿಸಿದ್ದಳು.

PREV
15
ಕುಣಿಗಲ್‌ ತಾಲೂಕಿನ ಗೃಹಿಣಿ ಪ್ರಿಯಾಂಕಾ

ಹಾಸನ/ಕುಣಿಗಲ್‌: 30 ಲಕ್ಷ ರು. ಮೌಲ್ಯದ ಒಡವೆ ಧರಿಸಿ ನಾಪತ್ತೆಯಾಗಿದ್ದ ಕುಣಿಗಲ್‌ ತಾಲೂಕಿನ ಗೃಹಿಣಿ ಪ್ರಿಯಾಂಕಾ, ತಾನು ಕೊಲೆಯಾಗಿರುವುದಾಗಿ ಬಿಂಬಿಸಿ ಪ್ರಿಯಕರನ ಜತೆ ಮಧ್ಯಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದಳು!

25
ಪತಿ ಜತೆ ಬಾಳಲು ಇಷ್ಟವಿರಲಿಲ್ಲ

ಹಾಸನದ ಬೇಲೂರಿನಲ್ಲಿ ನಾಪತ್ತೆಯಾದ ಪ್ರಿಯಾಂಕಾ ಕುಣಿಗಲ್‌ನಲ್ಲಿ ಪ್ರಿಯಕರ ಡೇವಿಡ್‌ ಮನೆಯಲ್ಲಿ ಪತ್ತೆಯಾಗಿದ್ದಳು. ವಿಚಾರಣೆ ವೇಳೆ, ತನಗೆ ಪತಿ ಜತೆ ಬಾಳಲು ಇಷ್ಟವಿರಲಿಲ್ಲ. ಡೇವಿಡ್‌ ಜತೆ ಓಡಿಹೋಗಲು ನಾಟಕವಾಡಿದೆ ಎಂದು ಹೇಳಿದ್ದಾಳೆ.

35
ಯಾಕೆ ಈ ನಾಟಕ? ಸತ್ಯ ಹೇಳಿದ ಪ್ರಿಯಾಂಕಾ?

ಕುಣಿಗಲ್‌ನ ಖಾಸಗಿ ಕಾರ್ಖಾನೆಯಲ್ಲಿ ಸೂಪರ್‌ವೈಸರ್‌ ಆಗಿರುವ ಡೇವಿಡ್‌ ಮೂಲತಃ ಪಶ್ಚಿಮ ಬಂಗಾಳದವನು. ಅದೇ ಕಾರ್ಖಾನೆಗೆ ಪ್ರಿಯಾಂಕಾ ಕೂಡ ಕೆಲಸಕ್ಕೆ ಹೋಗುತ್ತಿದ್ದಳು. ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು. ಶೀಘ್ರದಲ್ಲೇ ಡೇವಿಡ್‌ ಮಧ್ಯಪ್ರದೇಶಕ್ಕೆ ವರ್ಗಾವಣೆಯಾಗುತ್ತಿದ್ದ. ಹೀಗಾಗಿ ಆತನ ಜತೆ ಅಲ್ಲಿಗೆ ಹೋಗಲು ತಾನು ಕೊ*ಲೆಯಾಗಿರುವ ನಾಟಕವಾಡಿದ್ದಳು ಎಂದು ತಿಳಿದು ಬಂದಿದೆ.

45
ಪೊಲೀಸರ ಕೈಗೆ ತಗ್ಲಾಕೊಂಡಿದ್ದು ಹೇಗೆ?

ವಿವಾಹದ ನೆಪದಲ್ಲಿ ಬೇಲೂರಿಗೆ ಬಂದಿದ್ದ ಆಕೆ ಕೆರೆಯೊಂದರ ಬಳಿ ಒಳಉಡುಪು, ಬಟ್ಟೆ, ವ್ಯಾನಿಟಿ ಬ್ಯಾಗ್‌ ಎಸೆದು ಕೊ*ಲೆಯಾಗಿರುವ ಕತೆ ಕಟ್ಟಿ, ಫೋನ್‌ ಸ್ವಿಚ್‌ ಆಫ್‌ ಮಾಡಿ ಕುಣಿಗಲ್‌ಗೆ ಬಂದಿದ್ದಳು. ಆಕೆಯನ್ನು ಕೊ*ಲೆ ಮಾಡಿ ಕೆರೆಗೆ ಎಸೆದಿರಬಹುದು ಎಂದು ಪೊಲೀಸರು ಈಶ್ವರ ಮಲ್ಪೆ ತಂಡವನ್ನು ಕರೆಸಿ ಜಾಲಾಡಿದರೂ ಶವ ಸಿಕ್ಕಿರಲಿಲ್ಲ. ಈ ನಡುವೆ ಆಕೆಯ ಕರೆ ವಿವರ ಪರಿಶೀಲಿಸಿದಾಗ, ಪ್ರಿಯಾಂಕಾ ಡೇವಿಡ್‌ ಜತೆ ನಿರಂತರ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಹೀಗಾಗಿ ಸಿಕ್ಕಿಬಿದ್ದಿದ್ದಾಳೆ.

ಇದನ್ನೂ ಓದಿ: ನೌಟಂಕಿ ಪ್ರಿಯಾಂಕಾ-ಕಿಲಾಡಿ ಡೇವಿಡ್ ಲವ್ ಸ್ಟೋರಿ; ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಂಕಲ್-ಆಂಟಿ

55
11 ವರ್ಷದ ಹಿಂದೆ ಮದುವೆ

ಬೇಲೂರು ತಾಲೂಕಿನ ಪ್ರಿಯಾಂಕಾಗೆ 11 ವರ್ಷದ ಹಿಂದೆ ಕುಣಿಗಲ್ ನಿವಾಸಿ ರುದ್ರೇಶ್ ಎಂಬವರೊಂದಿಗೆ ಮದುವೆಯಾಗಿತ್ತು. ಇತ್ತ ಡೇವಿಡ್‌ಗೂ ಮದುವೆಯಯಾಗಿತ್ತು. ಡೇವಿಡ್ ಮನೆಯಲ್ಲಿದ್ದ ಪ್ರಿಯಾಂಕಾಳನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: 30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!

Read more Photos on
click me!

Recommended Stories