ಚಾಮರಾಜನಗರ: ಕುಡಿದು ವಾಹನ ಚಲಾಯಿಸಿದ್ದ ಆಟೋ ಚಾಲಕನಿಗೆ ವಿನೂತನ ಶಿಕ್ಷೆ; ಬೋರ್ಡ್ ಹಿಡಿದು ನಿಂತ ಡ್ರೈವರ್

Published : Feb 15, 2026, 02:11 PM IST

ಮದ್ಯಪಾನ ಮಾಡಿ ಆಟೋ ಚಲಾಯಿಸಿದ ಚಾಮರಾಜನಗರದ ಚಾಲಕನಿಗೆ ನ್ಯಾಯಾಲಯವು ವಿನೂತನ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಆದೇಶದಂತೆ, ಚಾಲಕನು 'ಕುಡಿದು ವಾಹನ ಓಡಿಸಬೇಡಿ' ಎಂಬ ಫಲಕ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ನಿಂತು ಜಾಗೃತಿ ಮೂಡಿಸಿದ್ದಾನೆ. ಈ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗಿದೆ.

PREV
14
ಬೋರ್ಡ್ ಹಿಡಿದು ಜಾಗೃತಿ

ಮದ್ಯಪಾನ ಮಾಡಿ ಆಟೋ ಚಲಾಯಿಸಿದ ಚಾಲಕನಿಗೆ ನ್ಯಾಯಾಲಯ ವಿಶೇಷವಾದ ಶಿಕ್ಷೆಯನ್ನು ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ರಸ್ತೆ ಬದಿ ನಿಂತು ಕುಡಿದು ವಾಹನ ಓಡಿಸಬೇಡಿ ಎಂಬ ಬೋರ್ಡ್ ಹಿಡಿದು ಜಾಗೃತಿ ಮೂಡಿಸಿದ್ದಾನೆ.

24
ಚಾಮರಾಜನಗರದ ರಾಜಶೇಖರ್

ಚಾಮರಾಜನಗರದ ರಾಜಶೇಖರ್ ವಿನೂತನ ಶಿಕ್ಷೆಗೊಳಗಾದ ಆಟೋ ಚಾಲಕ. ಮದ್ಯಪಾನ ಮಾಡಿ ಆಟೋ ಚಲಾಯಿಸುತ್ತಿದ್ದ ರಾಜಶೇಖರ್‌ನನ್ನು ಸಂಚಾರಿ ಪೊಲೀಸರು ಹಿಡಿದಿದ್ದರು. ಈ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

34
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ

ಈ ಅರ್ಜಿಯ ವಿಚಾರಣೆ ನಡೆಸಿದ ಚಾಮರಾಜನಗರ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಡಿ.ಪ್ರಕಾಶ್, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಬೋರ್ಡ್ ಹಿಡಿದು ನಿಲ್ಲುವಂತೆ ಆದೇಶಿಸಿದ್ದರು. ನ್ಯಾಯಾಲಯದ ಆದೇಶದನ್ವಯ ಶಿಕ್ಷೆಯನ್ನು ಪೂರ್ಣ ಮಾಡಿದ್ದಾನೆ.

ಇದನ್ನೂ ಓದಿ: Chamarajanagar: ಮೊದಲ ಬಾರಿಗೆ ಗಡಿ ಗ್ರಾಮಕ್ಕೆ ಸ್ಯಾಟ್‌ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯ

44
ಒಂದು ಸಾವಿರ ರೂಪಾಯಿ ದಂಡ

ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಬೋರ್ಡ್ ಹಿಡಿದು ನಿಂತ ಆಟೋ ಚಾಲಕ ರಾಜಶೇಖರ್, ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದ್ದಾನೆ. ಜಾಗೃತಿ ಮೂಡಿಸುವುದರ ಜೊತೆಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಬೆಳಗ್ಗೆ10 ರಿಂದ 12, ಸಂಜೆ 4 ರಿಂದ 6 ವರೆಗೆ ಜಾಗೃತಿ ಮೂಡಿಸಬೇಕು ಎಂದು ಆದೇಶಿಸಲಾಗಿತ್ತು.

ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯ 59 ದಿನಗಳ ಬಳಿಕ ಕೊನೆಗೂ ಹುತ್ತೂರು, ಶ್ಯಾನಡ್ರಹಳ್ಳಿ ಕೆರೆಗೆ ನೀರು ಬಂತು; ರೈತರಲ್ಲಿ ಸಂತಸ

Read more Photos on
click me!

Recommended Stories