Yash Toxic Raya Teaser ಬಳಿಕ ರಾತ್ರೋ ರಾತ್ರಿ ಪೋಸ್ಟ್‌ ಹಂಚಿಕೊಂಡ Radhika Pandit; ಏನು ಹೇಳಿದ್ರು?

Published : Jan 09, 2026, 08:14 AM IST

ರಾಕಿಂಗ್‌ ಸ್ಟಾರ್‌ ಯಶ್‌ ಜನ್ಮದಿನದ ಪ್ರಯುಕ್ತ ನಟನೆಯ ‘ಟಾಕ್ಸಿಕ್‌ʼ ಸಿನಿಮಾದಲ್ಲಿ ಅವರ ಪಾತ್ರ ಪರಿಚಯದ ಟೀಸರ್‌ ರಿಲೀಸ್‌ ಆಗಿದೆ. ಈ ಸಿನಿಮಾದಲ್ಲಿ ಅದೊಂದು ಹಸಿಬಿಸಿ ದೃಶ್ಯ ಭಾರೀ ಚರ್ಚೆ ಆಗಿತ್ತು. ರಾಧಿಕಾ ರಿಯಾಕ್ಷನ್‌ ಏನಿರಬಹುದು ಎಂದು ಚರ್ಚೆ ಆಗಿತ್ತು. ಈಗ ರಾಧಿಕಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

PREV
15
ಯಾವ ಸೆರ್ಟಿಫಿಕೇಟ್‌ ಸಿಗುತ್ತದೆ?

ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಅವರು ಹಸಿಬಿಸಿ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯದ ಬಗ್ಗೆ ಭಾರೀ ಚರ್ಚೆಯಾಗಿದೆ. ಯಶ್‌ ಅವರು ಇದೇ ಮೊದಲ ಬಾರಿಗೆ ಇಷ್ಟೊಂದು ರೊಮ್ಯಾಂಟಿಕ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಯಾವ ಸರ್ಟಿಫಿಕೇಟ್‌ ಸಿಗಬಹುದು ಎಂದು ಕೂಡ ಕೆಲವರು ಕುತೂಹಲವನ್ನು ಹೊರಹಾಕಿದ್ದಾರೆ.

25
ರಾಧಿಕಾ ಪಂಡಿತ್‌ ಏನಂತಾರೆ?

ಟಾಕ್ಸಿಕ್‌ ಸಿನಿಮಾದ ರಾಯ ಪಾತ್ರದ ಬಗ್ಗೆ ರಾಧಿಕಾ ಪಂಡಿತ್‌ ಅವರು ಯಾವುದೇ ಪೋಸ್ಟ್‌ ಕೂಡ ಹಂಚಿಕೊಂಡಿರಲಿಲ್ಲ. ಈ ಟೀಸರ್‌ ನೋಡಿ ರಾಧಿಕಾ ಅವರು ಏನು ಹೇಳಬಹುದು ಎಂದು ಅನೇಕರಿಗೆ ಪ್ರಶ್ನೆ ಕಾಡಿತ್ತು. ರಾಧಿಕಾ ಅವರು ಹಳೆಯ ಸಿನಿಮಾಗಳ ಡೈಲಾಗ್‌ನ್ನು ಕೂಡ ವೈರಲ್‌ ಮಾಡಲಾಗಿತ್ತು.

35
ಇಡೀ ದೇಶ ಶುಭಾಶಯ ಹೇಳಿತ್ತು

ಇಡೀ ದೇಶಕ್ಕೆ ದೇಶವೇ ಯಶ್‌ ಅವರಿಗೆ ಶುಭಾಶಯಗಳನ್ನು ಕೋರಿ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಹಾಕುತ್ತಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ರಾಧಿಕಾ ಮಾತ್ರ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿರಲಿಲ್ಲ.

45
ರಾತ್ರೋ ರಾತ್ರಿ ಪೋಸ್ಟ್

ಯಶ್‌ ಅವರಿಗೆ ಕೊನೆಗೂ ರಾತ್ರಿ ರಾಧಿಕಾ ಪಂಡಿತ್‌ ಅವರು ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ನಮ್ಮ ಫೇವರಿಟ್‌ ಹ್ಯೂಮನ್‌ಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ಟಾಕ್ಸಿಕ್‌ ಟೀಸರ್‌ಗೆ ರಾಧಿಕಾ ರಿಯಾಕ್ಷನ್‌ ಏನು ಎನ್ನೋದು ಗೊತ್ತಾಗಿದೆ.

55
ಫೋಟೋ ವೈರಲ್

ಅಂದಹಾಗೆ ಈ ಜೋಡಿ ಗೋವಾದಲ್ಲಿ ಜನ್ಮದಿನ ಆಚರಿಸಿಕೊಂಡಿದೆ ಎನ್ನಲಾಗುತ್ತಿದೆ. ಇವರು ಗೋವಾದಲ್ಲಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿವೆ.

Read more Photos on
click me!

Recommended Stories