ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜೆಡಿಎಸ್ ಶಾಸಕ ಹೆಚ್.ಟಿ.ಮಂಜು ತಮ್ಮ ವಿರುದ್ಧ ಕೇಳಿಬಂದ 3 ಕೋಟಿ ರೂ. ಲಂಚದ ಆರೋಪದಿಂದ ಬೇಸತ್ತು ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಜೆಡಿಎಸ್ ಶಾಸಕ ಹೆಚ್.ಟಿ.ಮಂಜು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆತ್ಮ*ಹತ್ಯೆ ಮಾತನಾಡಿಕೊಳ್ಳುವ ಮಾತುಗಳನ್ನಾಡಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ತಮ್ಮ ವಿರುದ್ಧದ ಆರೋಪಗಳಿಂದ ಬೇಸತ್ತು ಈ ಮಾತುಗಳನ್ನಾಡಿದರು.
25
3 ಕೋಟಿ ಹಣ ಪಡೆದಿದ್ದಾರೆಂದು ಎಂಬ ಗುಸುಗುಸು
ಶಾಸಕ ಮಂಜು ವಿರುದ್ಧ ಜೆಡಿಎಸ್ ಮುಖಂಡ ಧರಣೇಶ್ ಎಂಬವರಿಂದ 3 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಶಾಸಕರು ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ 3 ಕೋಟಿ ಹಣ ಪಡೆದಿದ್ದಾರೆಂದು ಎಂಬ ಗುಸುಗುಸು ನಡೆದಿದೆ.
35
ಕತ್ತೆ ಮೇಲೆ ಕೂತು ಮೆರವಣಿಗೆ ಮಾಡಿಸಿಕೊಳ್ಳುತ್ತೇನೆ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದರು. ಹಣ ಪಡೆದಿರುವುದು ಸಾಬೀತಾದ್ರೆ ತಲೆ ಬೋಳಿಸಿಕೊಂಡು ಕತ್ತೆ ಮೇಲೆ ಕೂತು ಮೆರವಣಿಗೆ ಮಾಡಿಸಿಕೊಳ್ಳುತ್ತೇನೆ. ನಿಮ್ಮ ಆರೋಪಗಳು ಸುಳ್ಳಾದ್ರೆ ನೀವೇನು ಮಾಡ್ತೀರಿ ಎಂದು ಪ್ರಶ್ನೆ ಮಾಡಿದರು.
ನಾನು ಆತ್ಮ*ಹತ್ಯೆ ಮಾಡಿಕೊಳ್ಳಲು ಹೋದರೆ ನೀವೆಲ್ಲಾ ತಡೆಯುತ್ತೀರಿ. ನಿಮಗೆ ಹೇಳದೇ ನಾನೇ ಕೋಣೆಯೊಳಗೆ ಹೋಗಿ ಚಾಕುವಿನಿಂದ ಚುಚ್ಚಿಕಕೊಂಡು ಆತ್ಮ*ಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಶಾಸಕ ಹೆಚ್.ಟಿ.ಮಂಜು ಆಕ್ರೋಶ ಹೊರ ಹಾಕಿದರು. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಮುಖ್ಯ. ಒಬ್ಬ ಶಾಸಕನ ಮೇಲೆ ಕಾರಣವಿಲ್ಲದೇ ಆರೋಪ ಮಾಡೋದು ತಪ್ಪು ಎಂದು ಶಾಸಕರು ಹೇಳಿದರು.
3 ಕೋಟಿ ಅಲ್ಲ, ಅವರಿಂದ ನಾನು 10 ಸಾವಿರ ಹಣ ಪಡೆದುಕೊಂಡಿರೋದನ್ನು ರುಜುವಾತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು. ಆರೋಪಗಳನ್ನು ಮಾಡೋದಲ್ಲದ ಅದನ್ನು ರುಜುವಾತು ಮಾಡಬೇಕಾಗುತ್ತದೆ. ಅವರ ಆರೋಪದ ಕ್ಲಿಪ್‌ಗಳು ನನ್ನ ಬಳಿಯಲ್ಲಿವೆ ಎಂದು ಶಾಸಕರು ಹೇಳಿದರು.