ಕೈಮೀರಿದ ರೈತ ಪ್ರತಿಭಟನೆ, ಮುಧೋಳದಲ್ಲಿ ಟ್ರಾಕ್ಟರ್‌ಗೆ ಹಚ್ಚಿದ ಬೆಂಕಿಯಿಂದ ನೂರಾರು ಟನ್ ಕಬ್ಬು ನಾಶ, ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರ್‌ಗಳಿಗೆ ರೈತರು ಬೆಂಕಿ ಹಚ್ಚಿದ್ದಾರೆ. ಸಮೀರವಾಡಿ ಕಾರ್ಖಾನೆ ಆವರಣದಲ್ಲಿ ಈ ಘಟನೆ ನಡೆದಿದೆ.
ಮುಧೋಳ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ಪರೂಪ ಪಡೆದುಕೊಂಡಿದೆ. 3300 ರೂಪಾಯಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ ರೈತರು ತಮ್ಮ ಪಟ್ಟು ಸಡಿಸಿಲಿಲ್ಲ. ಇಂದು ಸಮೀರವಾಡಿ ಕಾರ್ಖಾನೆಯತ್ತ ನುಗ್ಗಿದ ರೈತರು ಆಕ್ರೋಶದಲ್ಲಿ ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ 20ಕ್ಕೂ ಹೆಚ್ಚು ಟ್ರಾಕ್ಟರ್ ಸುಟ್ಟು ಭಸ್ಮವಾಗಿದೆ.
25
ಕಾರ್ಖಾನೆ ಆವರಣದಲ್ಲಿ ರೈತರ ಆಕ್ರೋಶ
ಮುಧೋಳದಿಂದ ಸಮೀರವಾಡಿ ತೆರಳುವ ಮಧ್ಯೆ ರೈತರು ಕಬ್ಬು ತುಂಬಿದ ಟ್ರಾಕ್ಟರ್ ಮಗುಚಿ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ಟ್ರಾಕ್ಟರ್ ಹೊತ್ತಿ ಉರಿಯುತ್ತಿದ್ದಂತೆ ರೈತರು ನೇರವಾಗಿ ಸಮೀರವಾಡಿ ಕಾರ್ಖಾನೆಗೆ ನುಗ್ಗಿದ್ದಾರೆ. ಕಾರ್ಖಾನೆ ಆವರಣದಲ್ಲಿದ್ದ ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇಡೀ ಪ್ರದೇಶ ಬೆಂಕಿಯ ಜ್ವಾಲೆಯಲ್ಲಿ ಸುಟ್ಟ ಕರಕರಲಾಗಿದೆ.
35
ರೈತರ ಆಕ್ರೋಶಕ್ಕೆ ಬದಲಾದ ಮುಧೋಳ
ರೈತರು 3,300 ರೂಪಾಯಿ ಬೆಂಬಲ ಬೆಲ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇತ್ತ ಕಾರ್ಖಾನೆ ಮಾಲೀಕರು 3,250 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. ಇನ್ನುಳಿದ 50 ರೂಪಾಯಿ ತಡವಾಗಿ ನೀಡುವುದಾಗಿ ಭರವಸೆ ನೀಡಿದ್ದರೆ. ಆದರೆ 3,300 ರೂಪಾಯಿ ಒಟ್ಟು ಮೊತ್ತ ನೀಡುವಂತೆ ರೈತರು ಪಟ್ಟು ಹಿಡಿದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
20ಕ್ಕೂ ಹೆಚ್ಚು ಟ್ರಾಕ್ಟರ್ ಹೊತ್ತಿ ಉರಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸು ಕಾರ್ಯದಲ್ಲಿ ತೊಡಗಿದೆ. ಆದರೆ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಬೆಂಕಿ ಜ್ವಾಲೆ ನಿಲ್ಲುತ್ತಿಲ್ಲ. ಹೀಗಾಗಿ ಟ್ರಾಕ್ಟ್ ಹಾಗೂ ಕಬ್ಬು ಸುಟ್ಟು ನಾಶವಾಗಿದೆ. ನೂರಾರು ಟನ್ ಕಬ್ಬು ನಾಶವಾಗಿದೆ. ಅಪಾರ ನಷ್ಟ ಸಂಭವಿಸಿದೆ.
ನೂರಾರು ಟನ್ ಕಬ್ಬು ನಾಶ
55
ಐದು ಬಾರಿ ರೈತರ ಜೊತೆ ಮಾತುಕತೆ
ರೈತರ ಜೊತೆ ಐದು ಬಾರಿ ಮಾತುಕತೆ ನಡೆಸಿದ್ದೇವೆ. 3,250 ರೂಪಾಯಿ ನೀಡಲು ಮಾಲೀಕರು ಒಪ್ಪಿಕೊಂಡಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ರೈತರು ಪ್ರತಿಭಟನೆ ಮಾಡಲಿ. ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಅವರ ಸಮಸ್ಯೆಗಳನ್ನು ಆಲಿಸಿ, ಮಾಲೀಕರ ಬಳಿ ಮಾತುಕತೆ ನಡೆಸಲಾಗಿದೆ ಎಂದು ಸಚಿವ ಆರ್‌ಬಿ ತಿಮ್ಮಾಪುರ್ ಹೇಳಿದ್ದಾರೆ.