ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಗಾಯಕ ಹನುಮಂತ್‌ಗೆ ಅವಮಾನವಾಗಿದೆ ಎಂಬ ವಿಡಿಯೋ ವೈರಲ್ ಆಗಿತ್ತು. ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಎಸ್‌ಪಿ ಭೀಮಾಶಂಕರ್ ಗುಳೇದ್, ಇದು ಭಾಷಾ ವಿವಾದವಲ್ಲ, ಬದಲಿಗೆ ಸಮಯ ಮತ್ತು ಜನಜಂಗುಳಿಯ ಸುರಕ್ಷತೆಯ ಕಾರಣಕ್ಕೆ ನಡೆದ ವಾಗ್ವಾದ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಬಿಗ್‌ಬಾಸ್ ಶೋ ವಿಜೇತ, ಜನಪ್ರಿಯ ಗಾಯಕ ಹನುಮಂತ್ ಅವರಿಗೆ ಅನುಮಾನ ಆಗಿದೆ ಎಂಬ ಶೀರ್ಷಿಕೆಯಡಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಎಸ್‌ಪಿ ಭೀಮಾಶಂಕರ್ ಗುಳೇದ್ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ನಡುವಿನ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿತ್ತು.
25
ಆರೋಪಗಳಿಗೆ ಸ್ಪಷ್ಟನೆ
ಹಿಂದಿ ಹಾಡುಗಳಿಗಾಗಿ ಹನುಮಂತ್ ಅವರು ಹಾಡನ್ನು ನಿಲ್ಲಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಸ್ವತಃ ಎಸ್‌ಪಿ ಭೀಮಾಶಂಕರ್ ಗುಳೇದ್ ಅವರು ಕಿತ್ತೂರು ಉತ್ಸವದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
35
ಭೀಮಾಶಂಕರ್ ಗುಳೇದ್ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಶುದ್ಧ ಸುಳ್ಳು. ಸಮಯದ ವಿಚಾರವಾಗಿ ವಿದ್ಯಾವತಿ ಅವರಿಗೂ ಮತ್ತು ನನಗೂ ವಾಗ್ವಾದ ಆಗಿತ್ತು. ಕನ್ನಡ ವರ್ಸಸ್ ಹಿಂದಿ ಎಂಬ ಭಾಷೆಗಳ ವಿಚಾರವಾಗಿ ವಾಗ್ವಾದ ನಡೆದಿಲ್ಲ. ರಾತ್ರಿ 9.30ಕ್ಕೆ ಆ ಕಾರ್ಯಕ್ರಮ ಮುಗಿಯಬೇಕಿತ್ತು. ಆದ್ರೆ ವಿದ್ಯಾವತಿ ಅವರು 10.30ಕ್ಕೆ ಮುಗಿಸೋದಾಗಿ ಹೇಳಿದ್ದರು. ಇದರಲ್ಲಿ ಅವರದ್ದು ತಪ್ಪಿಲ್ಲ. ಇಬ್ಬರು ಅಧಿಕಾರಿಗಳ ವಿಷಯ ಬಂದಿರೋದರಿಂದ ಸ್ಪಷ್ಟನೆ ನೀಡಲಾಗುತ್ತಿದೆ ಎಂದು ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
ಕೆಲವರು ಈ ವಿಷಯವನ್ನು ಕನ್ನಡಿಗ ವರ್ಸಸ್ ಬೇರೆ ಭಾಷೆ ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದು ಭಾಷಾ ವಿಷಯವಲ್ಲ. ಸಮಯಕ್ಕಾಗಿ ನಡೆದ ಮಾತುಕತೆಯಾಗಿತ್ತು. ಮೂರು ದಿನಗಳಿಂದ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಿಗದಿಯಂತೆ ಕಾರ್ಯಕ್ರಮವನ್ನು ಮುಗಿಸೋದು ನಮ್ಮ ಉದ್ದೇಶವಾಗಿತ್ತು ಎಂದು ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ವೇದಿಕೆ ಮೇಲೆ ಗಾಯಕರಾದ ಬಾಳು ಬೆಳಗುಂದಿ ಮತ್ತು ಹನುಮಂತ್ ಬರುತ್ತಿದ್ದಂತೆ ಜನಜಂಗುಳಿ ಹೆಚ್ಚಾಯ್ತು. ಕೆಲ ಪ್ರೇಕ್ಷಕರು ವಿದ್ಯುತ್ ಕಂಬ, ಅಡ್ಡಲಾಗಿ ಹಾಕಲಾಗಿದ್ದ ಕೋಲುಗಳು ಮೇಲೆ ಹತ್ತುತ್ತಿದ್ದರು. ಮೈಕ್‌ನಲ್ಲಿಯೂ ಈ ಬಗ್ಗೆ ಅನೌನ್ಸ್ ಮಾಡಲಾಗುತ್ತಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಹ್ವಾನ ಪತ್ರಿಕೆಯಲ್ಲಿರುವ ಸೂಚಿಸಿದ ಸಮಯಕ್ಕೆ ಕಾರ್ಯಕ್ರಮ ಮುಗಿಸೋದು ನಮ್ಮ ಕೆಲಸವಾಗಿತ್ತು ಎಂದು ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.