Tumakuru News: ತುಮಕೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿ ಸುರೇಶ್ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆತ್ಮ*ಹತ್ಯೆಗೂ ಮುನ್ನ ಆತ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಸಾವಿನ ಬಗ್ಗೆ ಬರೆದುಕೊಂಡಿದ್ದನು.
ತುಮಕೂರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಆತ್ಮ*ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಒನ್ ಸೈಡ್ ಲವ್ ಎಂದು ತಿಳಿದು ಬಂದಿದೆ. ಮೃತ ಸುರೇಶ್ ತನ್ನದೇ ಕಾಲೇಜಿನ ಸೀನಿಯರ್ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಮಾಹಿತಿ ಆತನ ಗೆಳೆಯರ ವಿಚಾರಣೆಯಲ್ಲಿ ತಿಳಿದು ಬಂದಿದೆ.
24
ಕೊಪ್ಪಳ ಜಿಲ್ಲೆಯ ನಿವಾಸಿ
20 ವರ್ಷದ ಸುರೇಶ್ ಮೂಲತಃ ಕೊಪ್ಪಳ ಜಿಲ್ಲೆಯ ನಿವಾಸಿಯಾಗಿದ್ದು, ತುಮಕೂರಿನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಅಭ್ಯಾಸ ಮಾಡುತ್ತಿದ್ದನು. ಮೆರಿಟ್ ಆಧಾರದ ಮೇಲೆ ಸೀಟು ಪಡೆದುಕೊಂಡಿದ್ದ ಸುರೇಶ್ ಜಯನಗರದ ಸರಸ್ವತಿಪುರಂನ ಬಾಡಿಗೆ ಕೋಣೆಯೊಂದರಲ್ಲಿ ವಾಸವಾಗಿದ್ದನು. ಇತ್ತೀಚೆಗೆ ಸುರೇಶ್ ಜೊತೆಯಲ್ಲಿದ್ದ ಗೆಳೆಯ ಸಹ ರೂಮ್ ಖಾಲಿ ಮಾಡಿದ್ದನು. ಅಂದಿನಿಂದ ಸುರೇಶ್ ಒಂಟಿಯಾಗಿಯೇ ರೂಮ್‌ನಲ್ಲಿದ್ದನು.
34
Good bye my dear life rip
ಅಕ್ಟೋಬರ್ 26ರ ಬೆಳಗಿನ ಜಾವ ಸುಮಾರು 3 ಗಂಟೆಗೆ Good Bye My Dear Life RIP ಎಂದು ಬರೆದುಕೊಂಡು ಸ್ಟೇಟಸ್ ಹಾಕಿಕೊಂಡಿದ್ದನು. ವಾಟ್ಸಪ್ ಸ್ಟೇಟಸ್ ನೋಡಿದ ಪೋಷಕರು ಮಗನಿಗೆ ಕರೆ ಮಾಡಿದ್ದಾರೆ. ಮಗ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಸುರೇಶ್ ತಂದೆ ಕೊಪ್ಪಳದಿಂದ ತುಮಕೂರಿಗೆ ಆಗಮಿಸಿದ್ದಾರೆ.
ಸದ್ಯ ಮೇಲ್ನೋಟಕ್ಕೆ ಇದು ಆತ್ಮ*ಹತ್ಯೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಸುರೇಶ್ ತಂದೆ ನೀಡಿದ ದೂರಿನಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.