ಕೊಪ್ಪಳ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೃತ ಲಕ್ಷ್ಮೀ ಅವರ ತಾಯಿಯೇ, ತಮ್ಮ ಮಗಳ ಸಾವಿಗೆ ಬೀರಪ್ಪ ಎಂಬಾತನೊಂದಿಗಿನ ಅಕ್ರಮ ಸಂಬಂಧ ಮತ್ತು ಆತನ ಒತ್ತಡವೇ ಕಾರಣ ಎಂದು ದೂರು ದಾಖಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಮೃತ ಲಕ್ಷ್ಮೀ ವಿರುದ್ಧವೇ ಪ್ರಕರಣ ದಾಖಲಾಗಿದೆ. ಈ ಸಂಬಂಧ ಲಕ್ಷ್ಮೀ ತಾಯಿ ದೂರು ದಾಖಲಿಸಿದ್ದಾರೆ.
24
ಮೃತ ಮಹಿಳೆ ತಾಯಿಯಿಂದ ದೂರು ದಾಖಲು
ಮೃತ ಲಕ್ಷ್ಮೀ ತನ್ನದೇ ಗ್ರಾಮದ ಬೀರಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ಅಕ್ರಮ ಸಂಬಂಧವೇ ಲಕ್ಷ್ಮೀ ಮತ್ತು ಮಕ್ಕಳಾದ ರಮೇಶ್, ಜಾನವಿ ಸಾವಿಗೆ ಕಾರಣವಾಗಿದೆ. ಬೀರಪ್ಪನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಲಕ್ಷ್ಮೀ ತಾಯಿ ಆಗ್ರಹಿಸಿದ್ದಾರೆ
34
ಅಕ್ರಮ ಸಂಬಂಧದ ಗುಟ್ಟು
ಲಕ್ಷ್ಮೀ ಮತ್ತು ಬೀರಪ್ಪ ನಡುವಿನ ಅಕ್ರಮ ಸಂಬಂಧ ವಿಷಯ ಕುಟುಂಬದಲ್ಲಿ ಗೊತ್ತಾಗಿತ್ತು. ಕುಟುಂಬಸ್ಥರು ಇಬ್ಬರಿಗೂ ತಿಳಿಹೇಳಿ ದೂರವಾಗುವಂತೆ ಹೇಳಿದ್ದರು. ಆದರೂ ಲಕ್ಷ್ಮೀ ಮತ್ತು ಬೀರಪ್ಪ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಈ ವಿಷಯ ಗ್ರಾಮದಲ್ಲಿ ಹರಿದಾಡುತ್ತಿತ್ತು. ಗಂಡ ಮತ್ತು ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಬರುವಂತೆ ಲಕ್ಷ್ಮೀ ಮೇಲೆ ಬೀರಪ್ಪ ಒತ್ತಡ ಹಾಕುತ್ತಿದ್ದನು.
ಬೀರಪ್ಪ ಒತ್ತಡದಿಂದ ಮಗಳು ಲಕ್ಷ್ಮೀ ಮಾನಸಿಕವಾಗಿ ನೊಂದಿದ್ದಳು. ಈ ಒತ್ತಡದಿಂದಾಗಿ ತನ್ನ ಮಕ್ಕಳಾದ ರಮೇಶ್ ಹಾಗೂ ಜಾನವಿಯನ್ನು ಕೊಂದು ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ. ಬೀರಪ್ಪ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಲಕ್ಷ್ಮೀ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಲಕ್ಷ್ಮೀ ತಾಯಿ ದೂರು ನೀಡಿದ ಅನ್ವಯ ಕೂಕನೂರ ಪೊಲೀಸ್ ಠಾಣೆಯಲ್ಲಿ 103(1)108,351(2)(3)BNS2023 -3(1) ಹಾಗೂ SC ST ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ.