ಲಕ್ಕುಂಡಿಯ 100 ಗುಡಿ, 100 ಬಾವಿಗಳ ಪತ್ತೆಗಾಗಿ ಉತ್ಖನನ; ಈವರೆಗೆ ಸಿಕ್ಕಿದ್ದೆಷ್ಟು?

Published : May 17, 2026, 09:09 AM IST

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 100 ಗುಡಿಗಳು ಮತ್ತು 100 ಬಾವಿಗಳ ಪತ್ತೆಗಾಗಿ ಉತ್ಖನನ ನಡೆಯುತ್ತಿದೆ. ಈವರೆಗೆ 32 ಗುಡಿಗಳು ಮತ್ತು 36 ಬಾವಿಗಳು ಪತ್ತೆಯಾಗಿದ್ದು, ಉಳಿದವುಗಳ ಶೋಧ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಪ

PREV
14
ಗದಗ ಜಿಲ್ಲೆಯ ಲಕ್ಕುಂಡಿ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಈವರೆಗೆ 32 ದೇವರ ಗುಡಿಗಳು ಹಾಗೂ 36 ಬಾವಿಗಳನ್ನು ಪತ್ತೆ ಮಾಡಿದ್ದು, ಇನ್ನೂ 68 ಗುಡಿಗಳು ಮತ್ತು 64 ಬಾವಿಗಳನ್ನು ಉತ್ಖನನ ಮಾಡಬೇಕಿದೆ. ಆ ಉತ್ಖನನ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುತ್ತಿದ್ದು, ಈ ವರ್ಷದ ಡಿಸೆಂಬರ್‌ ಅಂತ್ಯದೊಳಗೆ ಉತ್ಖನನ ಕಾರ್ಯ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

24
100 ದೇವರ ಗುಡಿಗಳು ಮತ್ತು 100 ಬಾವಿಗಳಿರುವ ಸ್ಥಳ

ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಕೆ. ಪಾಟೀಲ್‌, ಲಕ್ಕುಂಡಿಯನ್ನು 100 ದೇವರ ಗುಡಿಗಳು ಮತ್ತು 100 ಬಾವಿಗಳಿರುವ ಸ್ಥಳ ಎಂದು ಕರೆಯಲಾಗುತ್ತದೆ. ಅವುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಕಳೆದೆರಡು ವರ್ಷಗಳಿಂದೀಚೆಗೆ ಉತ್ಖನನ ಕಾರ್ಯ ನಡೆಸಲಾಗುತ್ತಿದ್ದು, ಈವರೆಗೆ 32 ದೇವರ ಗುಡಿಗಳು ಹಾಗೂ 36 ಬಾವಿಗಳನ್ನು ಪತ್ತೆ ಮಾಡಲಾಗಿದೆ. ಉಳಿದವುಗಳ ಪತ್ತೆಗೆ ಉತ್ಖನನ ಕಾರ್ಯ ಆರಂಭಿಸುವಂತೆ ಸೂಚಿಸಲಾಗಿದೆ ಎಂದರು.

34
3 ಸಾವಿರಕ್ಕೂ ಹೆಚ್ಚಿನ ಪ್ರಾಚ್ಯಾವಶೇಷಗಳು

ಲಕ್ಕುಂಡಿಯಲ್ಲಿ ಕಳೆದೊಂದು ವರ್ಷದಿಂದ 3 ಸಾವಿರಕ್ಕೂ ಹೆಚ್ಚಿನ ಪ್ರಾಚ್ಯಾವಶೇಷಗಳು ಸಂಗ್ರಹವಾಗಿವೆ. ಅದರಲ್ಲೂ ಕಳೆದ 12 ದಿನಗಳಲ್ಲಿಯೇ 1500 ಪ್ರಾಚ್ಯಾವಶೇಷಗಳು ಪತ್ತೆಯಾಗಿ, ಅವನ್ನು ಸಂಸ್ಕರಿಸಲಾಗಿದೆ. ಇನ್ನು, ಲಕ್ಕುಂಡಿ ಗ್ರಾಮಸ್ಥರೇ 1500ಕ್ಕೂ ಹೆಚ್ಚಿನ ಪ್ರಾಚ್ಯಾವಶೇಷಗಳನ್ನು ನಮಗೆ ನೀಡಿದ್ದಾರೆ. ಮತ್ತಷ್ಟು ಉತ್ಖನನ ನಡೆಸಿ ಪ್ರಾಚ್ಯವಸ್ತುಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.

ಇದನ್ನೂ ಓದಿ: ಹಂಪಿ ಉತ್ಖನನ: ಪುರಾತನ ದೇವಾಲಯದ ಕಲ್ಲಿನ ಚಾವಣಿ, ಅಪರೂಪದ ಆನೆಯ ಕಲಾಕೃತಿಗಳು ಪತ್ತೆ

44
ವಿಶ್ವ ಪರಂಪರೆ ತಾಣಗಳ ಪಟ್ಟಿ

ಲಕ್ಕುಂಡಿಯಲ್ಲಿ ಹೊಯ್ಸಳ, ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ಅವಶೇಷಗಳು, ವಾಸ್ತುಶಿಲ್ಪಗಳಿವೆ. ಅವುಗಳನ್ನು ಪತ್ತೆ ಮಾಡಲಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ತೆರೆದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುವುದು. ಅದಕ್ಕೆ ಅಗತ್ಯ ಭೂಮಿಯನ್ನು ನಿಗದಿ ಮಾಡಲಾಗಿದೆ. ಹಾಗೆಯೇ, ಲಕ್ಕುಂಡಿಯನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸುವ ಸಲುವಾಗಿ ಯುನೆಸ್ಕೋಗೆ ಪ್ರಸ್ತಾವನೆಯನ್ನೂ ಕಳುಹಿಸಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ: ವಾರಂಗಲ್ ಹಿಂದಿಕ್ಕಿ, ಐತಿಹಾಸಿಕ ದಾಖಲೆ ಬರೆಯುತ್ತ ಹೆಜ್ಜೆಯಿಟ್ಟ ಲಕ್ಕುಂಡಿ

Read more Photos on
click me!

Recommended Stories