ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ 30 ವರ್ಷಗಳ ರೈತರ ಕನಸಾಗಿದ್ದ ರಾಮನಗುಡ್ಡ ಕೆರೆಗೆ ಕಾವೇರಿ ನೀರು ಹರಿಸಲಾಗಿದೆ. ಈ ಯೋಜನೆಯಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟವೂ ವೃದ್ಧಿಯಾಗುವ ನಿರೀಕ್ಷೆಯಿದೆ.
ಚಾಮರಾಜನಗರ: ಹನೂರು ತಾಲೂಕಿಗೆ ಸಿಎಂ ಸಿದ್ದರಾಮಯ್ಯ 25 ಕೋಟಿ ರು. ವಿಶೇಷ ಅನುದಾನ ನೀಡಿದ್ದು 4 ಕೋಟಿ ರು. ಹಣವನ್ನು ಕೆರೆಗಳ ಹೂಳೆತ್ತಲೆಂದೆ ಮೀಸಲಿಸಿರಿದ್ದೇನೆ. ಹಂತಹಂತವಾಗಿ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಿದ್ದು ಹನೂರು ತಾಲೂಕನ್ನು ಹಸನು ಮಾಡಲು ಶ್ರಮವಹಿಸುತ್ತೇನೆ ಎಂದು ಶಾಸಕ ಎಂಆರ್ ಮಂಜುನಾಥ್ ಭರವಸೆ ನೀಡಿದರು.
27
ರಾಮನಗುಡ್ಡ ಕೆರೆ
ರಾಮನಗುಡ್ಡ ಕೆರೆ ಬಳಿಕ ಭೌಗೋಳಿಕವಾಗಿ ವಿಸ್ತಾರವಾಗಿ ದೊಡ್ಡ ತಾಲೂಕಿನ ಹುಬ್ಬೆಹುಣಸೆ ಜಲಾಶಯ ಹಾಗೂ ಉಡುತೊರೆ ಜಲಾಶಯ ತುಂಬಲು ಡಿಪಿಆರ್ ಸಿದ್ಧಗೊಳ್ಳುತ್ತಿದ್ದು ಹನೂರು ತಾಲೂಕಿನ ರೈತರಿಗೆ ಮೆಗಾ ನೀರಾವರಿ ಯೋಜನೆ ಬಂದಾತಗಲಿದೆ ಎಂದು ತಿಳಿಸಿದರು.
37
30 ವರ್ಷಗಳ ರೈತರ ಕಾತರ
ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ ನೀಗಿದಂತಾಗಿದೆ. ಭೂತಾಯಿಯ ಒಡಲನ್ನು ತುಂಬಲು ಕೊನೆಗೂ ಕಾವೇರಿ ಹರಿದಿದ್ದು 30 ವರ್ಷಗಳ ರೈತರ ಕಾತರ ನನಸಾಗಿದೆ ಎಂದರು.
ನೀರಿಗಾಗಿ ಸತತ ಒತ್ತಾಯ, ಮನವಿ, ಕನಸು ಕಡೆಗೂ ಈಡೇರಿದ್ದು ಬತ್ತಿದ ನೆಲದಲ್ಲಿ ಗಂಗೆ ಭೋರ್ಗರೆದು ಬಂದಿದ್ದನ್ನು ಕಂಡ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮನಗುಡ್ಡ ಕೆರೆ ಅಚ್ಚಕಟ್ಟು ಪ್ರದೇಶದ ರೈತರು ಹರ್ಷಗೊಂಡಿದ್ದಾರೆ. ಸತತ 30 ವರ್ಷಗಳಿಂದ ಕೆರೆ ತುಂಬಲು ಕಾತರದಿಂದ ಕಾಯುತ್ತಿದ್ದ ಅನ್ನದಾತರ ಕ್ಷಣ ಶುಕ್ರವಾರ ಈಡೇರಿದೆ ಎಂದರು.
57
92 ಎಕರೆ ವಿಸ್ತೀರ್ಣದ ರಾಮನಗುಡ್ಡ ಕೆರೆ
2.5 ಕೋಟಿ ರು. ವೆಚ್ಚದಲ್ಲಿ 1.45 ಕಿಮೀ ಪೈಪ್ ಲೈನ್ ನಿರ್ಮಾಣ ಕಾಮಗಾರಿಯನ್ನು ಮೂರುವರೆ ತಿಂಗಳಲ್ಲಿ ಮುಕ್ತಾಯಗೊಂಡು ಇಂದು 92 ಎಕರೆ ವಿಸ್ತೀರ್ಣದ ರಾಮನಗುಡ್ಡ ಕೆರೆಗೆ ನೀರು ಹರಿಸಲು ಚಾಲನೆ ನೀಡಿದ್ದು ಇನ್ನು ಒಂದು ತಿಂಗಳಲ್ಲಿ 98 ಎಕರೆ ವಿಸ್ತೀರ್ಣದ ಕೆರೆ ತುಂಬುವ ನಿರೀಕ್ಷೆ ಇದೆ ಎಂದರು.
67
26 ಚೆಕ್ ಡ್ಯಾಂ
ಕಳೆದ 30 ವರ್ಷಗಳ ಯೋಜನೆ ಇದಾಗಿದ್ದು ಕಾವೇರಿ ನದಿಯಿಂದ ನೀರು ತುಂಬಲು ಆರಂಭಿಸಿದ ಹಿನ್ನೆಲೆ 1 ಸಾವಿರಕ್ಕೂ ಅಧಿಕ ಎಕರೆ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಅಭಾವವಿಲ್ಲದೇ ಬೆಳೆ ತೆಗೆಯುವ ನಿರೀಕ್ಷೆ ಗರಿಗೆದರಿದೆ. ರಾಮನಗುಡ್ಡ ಕೆರೆಗೆ ನೀರು ಹರಿಸುವ ಸಲುವಾಗಿ 26 ಚೆಕ್ ಡ್ಯಾಂ ಗಳನ್ನು ಭರ್ತಿ ಮಾಡಿರುವುದರಿಂದ ರೈತರಿಗೆ ಸಾಕಷ್ಟು ಅನೂಕೂಲವಾಗಲಿದೆ ಎಂದರು.
3 ,4, ದಶಕಗಳ ಕನಸು ಈಡೇರಿದ್ದರಿಂದ ಸವಾಲುಗಳ ನಡುವೆ ನೀರು ಹರಿಸಿದ್ದರಿಂದ ಸ್ಥಳೀಯ ಶಾಸಕ ಮಂಜುನಾಥ್ ಅವರನ್ನು ಅಚ್ಚುಕಟ್ಟು ಪ್ರದೇಶದ ರೈತರು ಒಂದೂವರೆ ಕಿಮೀ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಕುಣಿದು ಕುಪ್ಪಳಿಸಿದರು.
ಹನೂರು ತಾಲೂಕಿನ ಬೂದು ಬಾಳು ಗ್ರಾಮದ ಬಳಿ ಶಾಸಕ ಎಂಆರ್ ಮಂಜುನಾಥ್ ನೂತನವಾಗಿ ನಿರ್ಮಾಣ ಮಾಡಲಾಗಿರುವ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ರಾಮನಗುಡ್ಡ ಕೆರೆಗೆ ನೀರು ಬಿಡುಗಡೆಗೊಳಿಸಿದರು.