ಬೆಂಗಳೂರು: ನಿರಾಶ್ರಿತರ ಆಶ್ರಮದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಮಹಿಳಾ ಪ್ರಜೆಗಳು ಗ್ರಿಲ್ ಮುರಿದು ಎಸ್ಕೇಪ್

Published : May 17, 2026, 03:30 PM IST

ಬೆಂಗಳೂರಿನ ಕೊತ್ತನೂರು ಬಳಿಯ 'ಹೋಮ್ ಆಫ್ ಹೋಪ್' ನಿರಾಶ್ರಿತ ಕೇಂದ್ರದಿಂದ ನಾಲ್ವರು ಅಕ್ರಮ ವಿದೇಶಿ ಮಹಿಳೆಯರು ಕಿಟಕಿಯ ಗ್ರಿಲ್ ಮುರಿದು ಪರಾರಿಯಾಗಿದ್ದಾರೆ. ವೀಸಾ ಅವಧಿ ಮುಗಿದಿದ್ದರಿಂದ FRRO ವಶದಲ್ಲಿದ್ದ ಉಗಾಂಡ ಮತ್ತು ನೈಜೀರಿಯಾ ಮೂಲದ ಈ ಮಹಿಳೆಯರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

PREV
16
ನಿರಾಶ್ರಿತ ಕೇಂದ್ರದಿಂದ ಅಕ್ರಮ ವಿದೇಶಿ ಮಹಿಳೆಯರ ಎಸ್ಕೇಪ್

ಬೆಂಗಳೂರು: ನಗರದಲ್ಲಿ ಆತಂಕಕ್ಕೆ ಕಾರಣವಾಗುವಂತಹ ಘಟನೆ ಒಂದು ನಡೆದಿದೆ. ನಿರಾಶ್ರಿತರಿಗಾಗಿ ಕಾರ್ಯನಿರ್ವಹಿಸುತ್ತಿರುವ ಆಶ್ರಮದಲ್ಲಿ ಅಕ್ರಮ ವಿದೇಶಿ ಪ್ರಜೆಗಳು ಇರಿಸಲಾಗಿತ್ತು. ಆದರೆ ವಿದೇಶಿ ಮಹಿಳೆಯರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ‘ಹೋಮ್ ಆಫ್ ಹೋಪ್’ ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ.

26
ಕಿಟಕಿಯ ಗ್ರಿಲ್ ಮುರಿದು ಪರಾರಿ

ಮೇ 11ರಂದು ಬೆಳಗ್ಗೆ ಸುಮಾರು 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಶ್ರಮದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ಮಹಿಳೆಯರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಆಶ್ರಮದ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಮೇ 11ರಂದು ಘಟನೆ ನಡೆದಿದ್ದು, ಈವರೆಗೆ ಅವರ ಸುಳಿವು ಪತ್ತೆಯಾಗಿಲ್ಲ.

36
ಉಗಾಂಡ ಮತ್ತು ನೈಜೀರಿಯಾ ಮೂಲದ ಮಹಿಳೆಯರು

ಪರಾರಿಯಾಗಿರುವ ಮಹಿಳೆಯರನ್ನು ಉಗಾಂಡ ಹಾಗೂ ನೈಜೀರಿಯಾ ಮೂಲದವರು ಎಂದು ಗುರುತಿಸಲಾಗಿದೆ. ಅವರ ಹೆಸರುಗಳನ್ನು ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನ ಎಂದು ತಿಳಿದುಬಂದಿದೆ. ಇವರು ವೀಸಾ ಅವಧಿ ಮುಗಿದ ಬಳಿಕವೂ ತಮ್ಮ ದೇಶಕ್ಕೆ ಮರಳದೇ ಭಾರತದಲ್ಲೇ ಅಕ್ರಮವಾಗಿ ಉಳಿದಿದ್ದರು.

46
FRRO ವಶದಲ್ಲಿದ್ದ ವಲಸಿಗರು

ವೀಸಾ ನಿಯಮ ಉಲ್ಲಂಘನೆ ಹಿನ್ನೆಲೆ ಈ ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ವಿದೇಶಿಗರ ನೋಂದಣಿ ಕಚೇರಿ (FRRO) ಅಧಿಕಾರಿಗಳು ಜೈಲಿನಲ್ಲಿ ಜಾಗದ ಕೊರತೆಯ ಕಾರಣದಿಂದ ಅವರನ್ನು ‘ಹೋಮ್ ಆಫ್ ಹೋಪ್’ ಆಶ್ರಮದಲ್ಲಿ ಇರಿಸಿದ್ದರು. ಆಶ್ರಮದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳನ್ನು ಇಟ್ಟುಕೊಳ್ಳಲಾಗಿದ್ದು, ಅವರ ಮೇಲ್ವಿಚಾರಣೆ FRRO ಅಧಿಕಾರಿಗಳ ಜವಾಬ್ದಾರಿಯಲ್ಲಿತ್ತು.

56
ಅಕ್ರಮ ಚಟುವಟಿಕೆಗಳ ಅನುಮಾನ

ಈ ಕೇಂದ್ರದಲ್ಲಿ ತಂಗಿದ್ದ ಕೆಲವು ವಿದೇಶಿಗರ ಬಳಿ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಅಕ್ರಮ ಚಟುವಟಿಕೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಪರಾರಿಯಾದ ಮಹಿಳೆಯರು ಕೂಡ ಇದೇ ರೀತಿಯ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

66
ಪೊಲೀಸರ ತನಿಖೆ ಆರಂಭ

ಈ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಮಹಿಳೆಯರಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ನಾಕಾಬಂದಿ ಹಾಗೂ ಪರಿಶೀಲನೆ ಹೆಚ್ಚಿಸಲಾಗಿದೆ. ನಿರಾಶ್ರಿತ ಕೇಂದ್ರದಿಂದ ವಿದೇಶಿ ಮಹಿಳೆಯರು ಪರಾರಿಯಾಗಿರುವುದು ನಗರ ಭದ್ರತೆಗೆ ಸವಾಲಾಗಿದ್ದು, ಅಕ್ರಮ ವಲಸಿಗರ ಮೇಲ್ವಿಚಾರಣೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪರಾರಿಯಾದವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

Read more Photos on
click me!

Recommended Stories