ಶನಿಮಹಾತ್ಮ ಜಯಂತಿ ದಿನವೇ ಆಂಜನೇಯ ದೇಗುಲ ಕಳ್ಳತನ, ಹುಂಡಿ ಮುಟ್ಟದೆ ಬೆಳ್ಳಿ ಸಾಮಾಗ್ರಿ ಕಳವು

Published : May 17, 2026, 10:47 AM IST

ರಾಯಚೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ ನಡೆದಿದೆ. ಕಳ್ಳರು ಹುಂಡಿಯನ್ನು ಮುಟ್ಟಿಲ್ಲ. ಆದರೆ ದೇಗುಲದಲ್ಲಿರುವ ಬೆಳ್ಳಿ ಸೇರಿದಂತೆ ಆಭರಣ ಒಂದನ್ನು ಬಿಡದೆ ಕಳ್ಳತನ ಮಾಡಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ. 

PREV
15
ಶನಿ ಮಹಾತ್ಮ ಜಯಂತಿ ದಿನವೇ ಕಳ್ಳತನ

ಶನಿ ಮಹಾತ್ಮ ಜಯಂತಿ ದಿನವೇ ಆಂಜನೇಯ ಸ್ವಾಮಿ ದೇಗುಲ ಕಳ್ಳತನ ನಡೆದ ಘಟನೆ ರಾಯಚೂರಿನ ಸಿಂಧನೂರು ತಾ. ಒಳಬಳ್ಳಾರಿ ರಸ್ತೆಯ ಜೋಳದರಾಶಿ ಬಳಿ ನಡೆದಿದೆ. ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲ ಪ್ರತಿ ದಿನ ಹಲವು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಭಕ್ತರು ಕಾಣಿಕೆಯನ್ನೂ ನೀಡುತ್ತಾರೆ. ಇದೇ ದೇಗುಲ ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ.

25
ಸಿಸಿಟಿವಿಯಲ್ಲಿ ಕಳ್ಳತನ ದೃಶ್ಯ ಸೆರೆ

ಇಬ್ಬರು ಕಳ್ಳರು ಮುಖಕ್ಕೆ ಮಾಸ್ಕ್ ಹಾಗೂ ಬಟ್ಟೆ ಕಟ್ಟಿಕೊಂಡು ಆಂಜನೇಯ ಸ್ವಾಮಿ ದೇಗುಲಕ್ಕೆ ಎಂಟ್ರಿಕೊಟ್ಟಿದ್ದಾರೆ. ದೇವಸ್ಥಾನದ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ ನಡೆಸಿದ್ದಾರೆ. ಈ ಕಳ್ಳತನ ಮಾದರಿ ಇದೀಗ ಹಲವು ಅನುಮಾನಕ್ಕೂ ಕಾರಣಾಗಿದೆ.

35
ಹುಂಡಿ ಮುಟ್ಟಿಲ್ಲ, ಬೆಳ್ಳಿ ಬಿಟ್ಟಿಲ್ಲ

ದೇಗುಲ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಹುಂಡಿಯನ್ನು ಮುಟ್ಟಿಲ್ಲ. ಆದರೆ ಆಂಜನೇಯನಿಗೆ ತೊಡಿಸಿದ ಆಭರಣ ಸೇರಿದಂತೆ ಭದ್ರವಾಗಿಟ್ಟಿದ್ದ ಬೆಳ್ಳಿಯ ಆಭರಣ, ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಇಬ್ಬರು ಖದೀಮರಿಂದ ಬೆಳ್ಳಿ ಉಡದಾರ, ಬೆಳ್ಳಿ ತಟ್ಟೆ, ಪೂಜೆಯ ತಾಮ್ರದ ತಟ್ಟೆ ಕಳವು ಮಾಡಿದ್ದಾರೆ.

45
ಬೆಳ್ಳಿ ಟಾರ್ಗೆಟ್

ದೇಗುಲದ ಎದುರೇ ಹುಂಡಿ ಇತ್ತು. ಹುಂಡಿಯಲ್ಲಿ ಹಣವೂ ಭರ್ತಿಯಾಗಿತ್ತು. ಆದರೆ ಕಳ್ಳರು ಹುಂಡಿಯನ್ನು ಮುಟ್ಟದೇ ಬರಿ ಬೆಳ್ಳಿ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ. ಇದು ಹಲವು ಅನುಮಾನಕ್ಕೆ ಕಾರಣಾಗಿದೆ. ಕಳ್ಳತನದ ಪ್ರತಿಯೊಂದು ದೃಶ್ಯ ದೇಗುಲದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

55
ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಕೇಸ್

ಮಾಹಿತಿ ತಿಳಿದು ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇಗುಲದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read more Photos on
click me!

Recommended Stories