ಬೆಂಗಳೂರಿಗೆ ಬರೋ ರೈಲು ಪ್ರಯಾಣಿಕರ ಗಮನಕ್ಕೆ; ಮೆಜೆಸ್ಟಿಕ್‌ ಬರುತ್ತಿಲ್ಲ ನಿಮ್ಮ ಟ್ರೈನ್

Published : Jun 17, 2026, 11:14 AM IST

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್)ರೈಲ್ವೆ ನಿಲ್ದಾಣದ ಯಾರ್ಡ್ ಕಾಮಕಾರಿ ಕೇರಳ ರೈಲುಗಳ ಮೇಲೆ ಪರಿಣಾಮ ಬೀರಿರುವುದರಿಂದ ಬೆಂಗಳೂರಿನಲ್ಲಿ ರೈಲು ಸಂಚಾರದಲ್ಲಿ ಅಡಚಣೆ ಮುಂದುವರೆದಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ. 

PREV
16
ರೈಲ್ವೇ ಪ್ರಯಾಣಿಕರೇ ಗಮನಿಸಿ

ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣದಲ್ಲಿ ನವೀಕರಣ ಕಾರ್ಯವು ಎರಡನೇ ಹಂತಕ್ಕೆ ತಲುಪಿದ್ದರಿಂದ ಜೂನ್ 17ರಂದು ಬೆಂಗಳೂರು ಹಾಗೂ ಕೇರಳ ನಡುವಿನ ರೈಲಯ ಸೇವೆಯಲ್ಲಿ ಅಡಚಣೆ ಮುಂದುವರೆದಿವೆ. ಬೆಂಗಳೂರು ಹಾಗೂ ತಿರುವನಂತಪುರಂ ನಡುವೆ ಜುಲೈ ತಿಂಗಳ ಕೊನೆಯವರೆಗೆ ವಿಶೇಷ ರೈಲು ಸಂಚಾರದ ಹೊರತಾಗಿಯೂ ಕೆಲವು ರೈಲು ಸಂಚಾರ ರದ್ದಾಗಿದ್ದರೇ, ಇನ್ನು ಕೆಲವು ಮಾರ್ಗ ಬದಲಾವಣೆ ಮಾಡಲಾಗಿದೆ.

26
ಕೇರಳ-ಕೆಎಸ್‌ಆರ್‌ ಬೆಂಗಳೂರು ರೈಲ್ವೇ ಪ್ರಯಾಣಿಕರಿಗೆ ಅನಾನುಕೂಲತೆ

ಜೂನ್ 17ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್‌ನಲ್ಲಿ ಪ್ರಮುಖ ಯಾರ್ಡ್ ನವೀಕರಣ ಕಾರ್ಯ ಮುಂದುವರೆದಿದ್ದರಿಂದ ಕೇರಳದಿಂದ ಬೆಂಗಳೂರಿಗೆ ಸಂಚರಿಸುವ ರೈಲ್ವೇ ಪ್ರಯಾಣಿಕರಿಗೆ ಮತ್ತೊಮ್ಮೆ ಅನಾನುಕೂಲತೆ ಎದುರಾಗಿದೆ.

36
ನೈಋತ್ಯ ರೈಲ್ವೇ ವಿಭಾಗದ ಮೂಲಸೌಕರ್ಯ ಅಭಿವೃದ್ದಿ

ಹಳಿಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಭವಿಷ್ಯದ ಜನದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಇಟ್ಟುಕೊಂಡು ನೈಋತ್ಯ ರೈಲ್ವೇ ವಿಭಾಗವು ಕೆಎಸ್‌ಆರ್ ರೈಲ್ವೇ ನಿಲ್ದಾಣದಲ್ಲಿ ಮೂಲಸೌಕರ್ಯಗಳ ನವೀಕರಣ ಯೋಜನೆ ಹಮ್ಮಿಕೊಂಡಿದೆ. ಇದು ಪ್ರಮುಖ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಈ ತಾತ್ಕಾಲಿಕ ಅಡಚಣೆಯು ಬೆಂಗಳೂರಿನ ರೈಲ್ವೇ ನೆಟ್‌ವರ್ಕ್‌ನಲ್ಲಿ ದೀರ್ಘಕಾಲಿಕ ಮೂಲಭೂತ ಸೌಕರ್ಯ ಒದಗಿಸಲು ಅನುಕೂಲವಾಗಲಿದೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

46
ಕೆಲವು ರೈಲುಗಳ ಮಾರ್ಗ ಬದಲಾವಣೆ

ಕೆಎಸ್‌ಆರ್‌ ರೈಲ್ವೇ ಸ್ಟೇಷನ್‌ನಲ್ಲಿ ಈ ಕೆಲಸಗಳು ನಡೆಯುತ್ತಿರುವುದರಿಂದ ಕೆಎಸ್‌ಆರ್ ರೈಲ್ವೇ ಸ್ಟೇಷನ್ ಬೆಂಗಳೂರಿಗೆ ಬರುತ್ತಿದ್ದ ರೈಲುಗಳ ಮಾರ್ಗಗಳನ್ನು ಬದಲಿಸಿ ಸರ್ ಎಂ ವಿಶ್ವೇಶ್ವರಯ್ಯ(SMVT) ಹಾಗೂ ಯಶವಂತಪುರ(YPR) ಟರ್ಮಿನಲ್‌ಗೆ ಶಿಫ್ಟ್ ಮಾಡಲಾಗಿದೆ. ಈ ತಾತ್ಕಾಲಿಕ ಅಡಚಣೆಯಿಂದಾಗಿ ರೈಲ್ವೇ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸುವ ಮುನ್ನ ತಮ್ಮ ನಿರ್ಗಮನ ನಿಲ್ದಾಣಗಳನ್ನು ಪರಿಶೀಲಿಸುವಂತೆ ಪ್ರಯಾಣಿಕರಲ್ಲಿ ರೈಲ್ವೇ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

56
ಯಾವೆಲ್ಲಾ ರೈಲುಗಳ ಬದಲಾವಣೆಗಳಾಗಿವೆ?

ಎರ್ನಾಕುಲಂ ಇಂಟರ್‌ಸಿಟಿ ಸರ್ವೀಸ್ ರೈಲು ಸರ್ ಎಂ ವಿಶ್ವೇಶ್ವರಯ್ಯ(SMVT) ಗೆ ಕೊನೆಯಾಗಲಿದೆ.

ಕುಚುವೆಲಿ ಎಕ್ಸ್‌ಪ್ರೆಸ್ ಸರ್ವೀಸ್ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಯಶವಂತಪುರಂ ರೈಲ್ವೇ ಸ್ಟೇಷನ್ ಬಂದು ತಲುಪಲಿದೆ.

66
ರೈಲು ರದ್ದಾದ ಪ್ರಯಾಣಿಕರಿಗೆ ಹಣ ರೀಫಂಡ್

ಇನ್ನು ಕೆಲವು ರೈಲು ಸೇವೆಗಳನ್ನು ಸಂಪೂರ್ಣ ರದ್ದು ಮಾಡಲಾಗಿದ್ದು, ಇನ್ನು ಕೆಲವು ರೈಲು ಸೇವೆಗಳನ್ನು ಬೆಂಗಳೂರಿನ ಹೊರವಲಯದಲ್ಲಿಯೇ ರೈಲು ನಿಲ್ಲಿಸಲು ಅನುಮತಿ ಮಾಡಿ ಕೊಡಲಾಗಿದೆ. ಇನ್ನು ರೈಲು ಸೇವೆ ರದ್ದಾದ ಪ್ರಯಾಣಿಕರಿಗೆ ಹಣ ರೀಫಂಡ್ ಮಾಡುವುದಾಗಿಯೂ ರೈಲ್ವೇ ಇಲಾಖೆ ತಿಳಿಸಿದೆ.

Read more Photos on
click me!

Recommended Stories