Davanagere: ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲ್ ಕುಸಿದು ಸಾವು

Published : Jun 17, 2026, 08:35 AM IST

ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲಕುಮಾರ್ ದಿಢೀರ್ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಇವರು ಅಂತರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಈ ಘಟನೆಯು ಅತಿಯಾದ ದೇಹ ಕಸರತ್ತಿನ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

PREV
14
ಬಾಡಿ ಬಿಲ್ಡರ್‌ ಸುಶೀಲಕುಮಾರ್ ಸಾವು

ದಾವಣಗೆರೆ: ಜಿಮ್ ಮುಗಿಸಿಕೊಂಡು ಮನೆಗೆ ಬಂದ ಬಾಡಿ ಬಿಲ್ಡರ್‌ವೊಬ್ಬರು ದಿಢೀರನೇ ಕುಸಿದುಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕೆಟಿಜೆ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕೆಟಿಜೆ ನಗರದ ವಾಸಿ ಸುಶೀಲಕುಮಾರ (26) ಮೃತ ಬಾಡಿ ಬಿಲ್ಡರ್. ಎಂದಿನಂತೆ‌ ಜಿಮ್ ಮುಗಿಸಿ ಮನೆಗೆ ಬಂದ ಸುಶೀಲಕುಮಾರ ಕೆಲ ಕ್ಷಣದಲ್ಲೇ ಕುಸಿದು ಬಿದ್ದಿದ್ದಾರೆ.

24
ಪೋಷಕರ ಕಣ್ಣೀರು

ತಕ್ಷಣವೇ ಸುಶೀಲಕುಮಾರಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಸುಶೀಲ ಕುಮಾರ ಉಸಿರು ನಿಂತಿತ್ತು ಎನ್ನಲಾಗಿದೆ. ನನ್ನ ಮಗ ಕಸರತ್ತು ಮಾಡಿಕೊಂಡಿ ಚೆನ್ನಾಗಿಯೇ ಇದ್ದ. ಈಗ ನೋಡಿದ್ರೆ ನಮ್ಮೊಂದಿಗೆ ಮಗ ಇಲ್ಲ ಅನ್ನೋದನ್ನು ನಂಬೋದಕ್ಕೆ ಆಗುತ್ತಿಲ್ಲ ಎಂದು ಸುಶೀಲ್ ತಾಯಿ ಕಣ್ಣೀರು ಹಾಕಿದ್ದಾರೆ.

34
ನಿರಂತರ ಜಿಮ್

ಇನ್ನು ನಿರಂತರ ಜಿಮ್ ಮಾಡಿದ್ದರಿಂದ ಸದೃಢವಾಗಿದ್ದ ಸುಶೀಲ್ ಕುಮಾರ್ ದೇಹದಾರ್ಢ್ಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ವಿಜೇತರಾಗಿದ್ದರು. ಹಾಗಾಗಿ ದಾವಣೆಗೆರೆಯ ಎಲ್ಲಾ ಜಿಮ್‌ಗಳಲ್ಲಿಯೂ ಸುಶೀಲ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎಂದು ಗೆಳೆಯರು ಹೇಳುತ್ತಾರೆ. ರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿದ್ದ ಸುಶೀಲ್ ಕುಮಾರ್, ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿದ್ದರು.

44
ಅತಿಯಾದ ದೇಹ ಕಸರತ್ತು

ಇತ್ತೀಚೆಗಷ್ಟೇ ಆರು ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದನು. ಇದೀಗ ಸುಶೀಲ್ ಕುಮಾರ್ ಸಾವು ಹಲವು ಚರ್ಚೆಗಳಿಗೆ ಕಾರಣವಾಗುತ್ತಿದೆ. ಅತಿಯಾದ ದೇಹ ಕಸರತ್ತು ಪ್ರಾಣಕ್ಕೆ ಕುತ್ತು ತಂದಿದೆಯಾ ಎಂಬ ಮಾತುಗಳು ಕೇಳಿ ಬಂದಿದೆ. ಈ ಹಿಂದೆ ಜಿಮ್‌ನಲ್ಲಿಯೇ ಯುವಕರು ಕೊನೆಯುಸಿರೆಳೆದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Read more Photos on
click me!

Recommended Stories