ಹಣ ಮಾಡೋದು ಮಾತ್ರ ಅಲ್ಲ, ಮುಚ್ಚಿಡೋದು ಗೊತ್ತಿರಬೇಕು… ಆಚಾರ್ಯ ಚಾಣಕ್ಯ ಹೀಗೆ ಹೇಳಿದ್ದೇಕೆ?

Published : Nov 11, 2026, 05:28 PM IST

Chanakya Niti: ಹಣದ ಸುರಕ್ಷತೆ ಮತ್ತು ಅದನ್ನು ಸರಿಯಾಗಿ ಬಳಸಲು ಬುದ್ಧಿವಂತಿಕೆ ಬಹಳ ಮುಖ್ಯ ಎಂಬುದು ಚಾಣಕ್ಯ ನೀತಿಯ ಪ್ರಮುಖ ಅಂಶ. ನಿಮ್ಮ ಸಂಬಳ, ಉಳಿತಾಯ, ಸಾಲ, ಹೆಚ್ಚುವರಿ ಆದಾಯ ಮತ್ತು ಹೂಡಿಕೆ ಯೋಜನೆಗಳ ಬಗ್ಗೆ ನೀವು ಯಾರೊಂದಿಗೂ ಹೇಳಬಾರದು ಎಂದಿದ್ದು ಯಾಕೆ ಆಚಾರ್ಯ ಚಾಣಕ್ಯ ತಿಳಿಯಿರಿ.

PREV
17
ನಿಮ್ಮ ಹಣದ ಮಾಹಿತಿಯನ್ನು ಮುಚ್ಚಿಡಿ

ಹಣದ ವಿಚಾರ ಬಂದಾಗ ಕೆಲವೊಮ್ಮೆ ಸಂಬಂಧಗಳ ನಡುವೆಯೂ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಒಬ್ಬರ ಉತ್ತಮ ಸಂಬಳ ತಿಳಿದರೆ ಕೆಲವರು ತಮ್ಮ ಆದಾಯದೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ನಿಮ್ಮ ಉಳಿತಾಯದ ಬಗ್ಗೆ ತಿಳಿದರೆ ಸಾಲ ಕೇಳಲು ಬರುತ್ತಾರೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ನಮ್ಮ ಆದಾಯ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಭವಿಷ್ಯದ ಹಣಕಾಸು ಯೋಜನೆಗಳನ್ನೂ ಹಂಚಿಕೊಳ್ಳುತ್ತೇವೆ. ಆಪ್ತರ ಬಳಿ ಏನು ಮುಚ್ಚಿಡುವುದು ಎಂಬ ಭಾವನೆ ನಮ್ಮಲ್ಲಿರಬಹುದು. ಆದರೆ ಪ್ರತಿಯೊಂದು ಮಾಹಿತಿಯನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವುದು ಬುದ್ಧಿವಂತಿಕೆಯಲ್ಲ.

27
ಆಚಾರ್ಯ ಚಾಣಕ್ಯ

ಆಚಾರ್ಯ ಚಾಣಕ್ಯರ ನೀತಿಗಳಲ್ಲಿಯೂ ಹಣದ ಸುರಕ್ಷತೆ ಮತ್ತು ಅದರ ಸರಿಯಾದ ಬಳಕೆಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸಲಾಗಿದೆ. ಅವರ ವಿಚಾರಗಳಿಂದ ಪ್ರೇರಣೆ ಪಡೆದು ಹಣಕಾಸಿಗೆ ಸಂಬಂಧಿಸಿದ ಯಾವ 5 ವಿಷಯಗಳನ್ನು ಖಾಸಗಿಯಾಗಿಟ್ಟುಕೊಳ್ಳಬೇಕು ಎಂಬುದನ್ನು ತಿಳಿಯೋಣ.

37
ನಿಮ್ಮ ಸಂಬಳದ ಸಂಪೂರ್ಣ ವಿವರವನ್ನು ಎಲ್ಲರಿಗೂ ಹೇಳಬೇಡಿ

ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದು ನಿಮ್ಮ ವೈಯಕ್ತಿಕ ವಿಚಾರ. ಸ್ನೇಹಿತರು, ಸಂಬಂಧಿಕರು ಅಥವಾ ನಿಮ್ಮೊಂದಿಗೆ ಕೆಲಸ ಮಾಡುವವರ ಮುಂದೆ ಪದೇಪದೆ ನಿಮ್ಮ ಸಂಬಳದ ಬಗ್ಗೆ ಹೇಳಿಕೊಳ್ಳುವುದನ್ನು ತಪ್ಪಿಸಿ. ಇದರಿಂದ ಕೆಲವರು ನಿಮ್ಮ ಆದಾಯವನ್ನು ತಮ್ಮ ಸಂಬಳದೊಂದಿಗೆ ಹೋಲಿಕೆ ಮಾಡಿಕೊಳ್ಳಬಹುದು. ಹೆಚ್ಚಿನ ಸಂಬಳವಿದೆ ಎಂದು ತಿಳಿದರೆ ಕೆಲವರು ಅಸೂಯೆಪಡಬಹುದು. ಕಡಿಮೆ ಸಂಬಳವಿದೆ ಎಂದು ತಿಳಿದರೆ ನಿಮ್ಮನ್ನು ಕೀಳಾಗಿ ಕಾಣಬಹುದು.

47
ಬ್ಯಾಂಕ್‌ನಲ್ಲಿ ಎಷ್ಟು ಹಣವಿದೆ ಎಂಬುದನ್ನು ಬಹಿರಂಗಪಡಿಸಬೇಡಿ

ನಿಮ್ಮ ಉಳಿತಾಯ ನಿಮ್ಮ ಪರಿಶ್ರಮದ ಫಲ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ಮಾಹಿತಿಯನ್ನು ಪ್ರತಿಯೊಬ್ಬರಿಗೂ ನೀಡುವುದು ಸರಿಯಲ್ಲ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ತಿಳಿದರೆ ಕೆಲವರು ನಿಮ್ಮ ಬಳಿ ಸಾಲ ಕೇಳಬಹುದು ಅಥವಾ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬಹುದು. ಹೀಗಾಗಿ ನಿಮ್ಮ ಉಳಿತಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ನಂಬಿಕಸ್ಥ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸುವುದು ಉತ್ತಮ.

57
ಸಾಲ ಮತ್ತು ಇಎಂಐ ಬಗ್ಗೆ ಸಂಪೂರ್ಣ ಲೆಕ್ಕಾಚಾರ ಹೇಳಬೇಡಿ

ಮನೆ, ಕಾರು ಅಥವಾ ಇತರ ಅಗತ್ಯಗಳಿಗಾಗಿ ಪಡೆದಿರುವ ಸಾಲ ನಿಮ್ಮ ವೈಯಕ್ತಿಕ ಹಣಕಾಸಿನ ವಿಚಾರವಾಗಿದೆ. ನೀವು ಎಷ್ಟು ಸಾಲ ಪಡೆದಿದ್ದೀರಿ, ಪ್ರತಿ ತಿಂಗಳು ಎಷ್ಟು ಇಎಂಐ ಪಾವತಿಸುತ್ತೀರಿ ಮತ್ತು ಇನ್ನೂ ಎಷ್ಟು ಸಾಲ ಬಾಕಿಯಿದೆ ಎಂಬ ಸಂಪೂರ್ಣ ವಿವರವನ್ನು ಎಲ್ಲರಿಗೂ ಹೇಳುವ ಅಗತ್ಯವಿಲ್ಲ. ಆದರೆ ಬ್ಯಾಂಕ್, ಸಾಲ ನೀಡುವ ಸಂಸ್ಥೆ ಅಥವಾ ನಂಬಿಕಸ್ಥ ಹಣಕಾಸು ಸಲಹೆಗಾರರಿಗೆ ಅಗತ್ಯವಿರುವ ಸರಿಯಾದ ಮಾಹಿತಿಯನ್ನು ನೀಡುವುದು ಮುಖ್ಯ.

67
ಅನಿರೀಕ್ಷಿತವಾಗಿ ಬಂದ ಹಣದ ಬಗ್ಗೆ ಪ್ರದರ್ಶನ ಮಾಡಬೇಡಿ

ಕಂಪನಿಯಿಂದ ಸಿಕ್ಕ ಬೋನಸ್, ಹಳೆಯ ಹೂಡಿಕೆಯಿಂದ ಬಂದ ಲಾಭ ಅಥವಾ ಬೇರೆ ಕೆಲಸದಿಂದ ಗಳಿಸಿದ ಹೆಚ್ಚುವರಿ ಆದಾಯದ ಬಗ್ಗೆ ಎಲ್ಲೆಂದರಲ್ಲಿ ಹೇಳಿಕೊಳ್ಳಬೇಡಿ. ನಿಮ್ಮ ಆದಾಯ ಹೆಚ್ಚಾಗಿದೆ ಎಂದು ತಿಳಿದರೆ ಕೆಲವರು ನಿಮ್ಮಿಂದ ಹೆಚ್ಚು ಖರ್ಚು ಮಾಡುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಇನ್ನು ಕೆಲವರು ತಮ್ಮ ಅಗತ್ಯಗಳನ್ನು ಮುಂದಿಟ್ಟುಕೊಂಡು ಸಾಲ ಕೇಳಲು ಬರಬಹುದು

77
ಭವಿಷ್ಯದ ಹಣಕಾಸು ಯೋಜನೆಗಳನ್ನು ಎಲ್ಲರಿಗೂ ಹೇಳಬೇಡಿ

ನೀವು ಮನೆ ಖರೀದಿಸಲು ಯೋಜಿಸುತ್ತಿದ್ದೀರಾ? ಹೊಸ ಉದ್ಯಮ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದೀರಾ? ಅಥವಾ ಎಲ್ಲಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ಈ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಅಗತ್ಯವಿಲ್ಲ. ವಿವಿಧ ಜನರ ಸಲಹೆಗಳನ್ನು ಕೇಳುವುದರಿಂದ ಕೆಲವೊಮ್ಮೆ ನಿಮ್ಮ ನಿರ್ಧಾರದ ಬಗ್ಗೆ ಗೊಂದಲ ಉಂಟಾಗಬಹುದು. ಸಂಪೂರ್ಣ ಮಾಹಿತಿ ಇಲ್ಲದ ಕೆಲವರು ತಪ್ಪು ಸಲಹೆಗಳನ್ನೂ ನೀಡಬಹುದು. ಆದ್ದರಿಂದ ಯಾವುದೇ ಹಣಕಾಸಿನ ಯೋಜನೆಯನ್ನು ಜಾರಿಗೆ ತರುವ ಮೊದಲು ಸರಿಯಾದ ಸಂಶೋಧನೆ ನಡೆಸಿ. ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯಿರಿ.

Read more Photos on
click me!

Recommended Stories