Air Hostess Salary: ನಮ್ಮ ದೇಶದಲ್ಲಿ ಗಗನ ಸಖಿಯರ ಸಂಬಳ ಎಷ್ಟು? ಈ ಕೆಲಸಕ್ಕೆ ಇರಬೇಕಾದ ಅರ್ಹತೆಗಳೇನು?

Published : Aug 10, 2026, 12:42 PM IST

ಏರ್ ಹೋಸ್ಟೆಸ್ ಆಗಬೇಕೆಂಬುದು ಅನೇಕ ಯುವತಿಯರ ಕನಸು. ಆದರೆ ಅವರ ಜೀವನಶೈಲಿ, ಸಂಬಳದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಈ ಉದ್ಯೋಗದಲ್ಲಿ ಸಂಬಳದ ಜೊತೆಗೆ ಹಲವು ಹೆಚ್ಚುವರಿ ಪ್ರಯೋಜನಗಳೂ ಸಿಗುತ್ತವೆ.

PREV
16
ಏರ್ ಹೋಸ್ಟೆಸ್ ಬಗ್ಗೆ ಕ್ರೇಜ್

ವಿಮಾನದಲ್ಲಿ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಿ, ಅವರ ಸುರಕ್ಷತೆಯನ್ನು ನೋಡಿಕೊಳ್ಳುವ ಕ್ಯಾಬಿನ್ ಕ್ರೂ ಹುದ್ದೆಯೇ ಏರ್ ಹೋಸ್ಟೆಸ್. ಈ ಉದ್ಯೋಗಕ್ಕೆ ಯುವತಿಯರಲ್ಲಿ ಭಾರಿ ಕ್ರೇಜ್ ಇದೆ. ಭಾರತದಲ್ಲಿ ಕ್ಯಾಬಿನ್ ಕ್ರೂ ಉದ್ಯೋಗಿಗಳಿಗೆ ಆರಂಭದಲ್ಲಿ ತಿಂಗಳಿಗೆ 25,000 ದಿಂದ 40,000 ರೂಪಾಯಿ ಸಂಬಳ ಸಿಗುತ್ತದೆ.

26
ಏರ್ ಹೋಸ್ಟೆಸ್‌ನ ಆರಂಭಿಕ ಸಂಬಳ ಎಷ್ಟು?

Skytech Aviation ಪ್ರಕಾರ, ಇಂಡಿಗೋದಲ್ಲಿ ಏರ್ ಹೋಸ್ಟೆಸ್‌ನ ಆರಂಭಿಕ ಸಂಬಳ ತಿಂಗಳಿಗೆ ಸುಮಾರು 30,000 ದಿಂದ 47,000 ರೂ. ಇರುತ್ತದೆ. ಏರ್ ಇಂಡಿಯಾದಲ್ಲಿ 40,000 ದಿಂದ 60,000 ರೂ. ಮತ್ತು ಸ್ಪೈಸ್‌ಜೆಟ್‌ನಲ್ಲಿ 31,000 ದಿಂದ 45,000 ರೂ. ಇರುತ್ತದೆ. ಅನುಭವ ಹೆಚ್ಚಾದಂತೆ ಸಂಬಳವೂ ಏರುತ್ತದೆ. ಮಧ್ಯಮ ಹಂತದಲ್ಲಿ 55,000 ದಿಂದ 75,000 ರೂ. ಹಾಗೂ ಹಿರಿಯ ಹಂತದಲ್ಲಿ 75,000 ದಿಂದ 1 ಲಕ್ಷಕ್ಕೂ ಹೆಚ್ಚು ಗಳಿಸಬಹುದು. ಸೂಪರ್‌ವೈಸರ್ ಅಥವಾ ಇನ್‌ಫ್ಲೈಟ್ ಮ್ಯಾನೇಜರ್ ಆದರೆ ತಿಂಗಳಿಗೆ 1 ಲಕ್ಷದಿಂದ 1.25 ಲಕ್ಷದವರೆಗೆ ಸಂಬಳ ಪಡೆಯಬಹುದು.

36
ಗಗನ ಸಖಿಯರಿಗೆ ಮತ್ತಷ್ಟು ಸೌಲಭ್ಯಗಳು

ಏರ್ ಹೋಸ್ಟೆಸ್‌ಗಳಿಗೆ ಸಂಬಳ ಮಾತ್ರವಲ್ಲದೆ, ಫ್ಲೈಯಿಂಗ್ ಅಲೊವೆನ್ಸ್, ಲೇಓವರ್ ಸಮಯದಲ್ಲಿ ದಿನಭತ್ಯೆ ಮುಂತಾದ ಹೆಚ್ಚುವರಿ ಸೌಲಭ್ಯಗಳೂ ಸಿಗುತ್ತವೆ. ಕೆಲವು ಏರ್‌ಲೈನ್‌ಗಳು ತಮ್ಮ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ನೀಡುತ್ತವೆ. ಆರೋಗ್ಯ ವಿಮೆ, ವೈದ್ಯಕೀಯ ಸೌಲಭ್ಯಗಳು ಮತ್ತು ಬೋನಸ್‌ಗಳೂ ಇರುತ್ತವೆ.

46
ವಿದೇಶಿ ವಿಮಾನಯಾನ ಸಂಸ್ಥೆ ಸಂಬಳ ಮತ್ತಷ್ಟು ಹೆಚ್ಚು

ಇನ್ನು ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ಸಂಬಳ ಇನ್ನೂ ಹೆಚ್ಚಿರುತ್ತದೆ. ಉದಾಹರಣೆಗೆ, ಎಮಿರೇಟ್ಸ್ ಕ್ಯಾಬಿನ್ ಕ್ರೂಗೆ ತಿಂಗಳಿಗೆ ಸುಮಾರು 2 ಲಕ್ಷದಿಂದ 2.54 ಲಕ್ಷ ರೂ. ಹಾಗೂ ಕತಾರ್ ಏರ್‌ವೇಸ್‌ನಲ್ಲಿ ಸುಮಾರು 95,000 ದಿಂದ 1.8 ಲಕ್ಷ ರೂ. ಸಂಬಳ ಸಿಗಬಹುದು. ಆದರೆ, ಈ ಉದ್ಯೋಗಗಳಿಗೆ ವೀಸಾ ಮತ್ತು ವರ್ಕ್ ಪರ್ಮಿಟ್ ಅಗತ್ಯ.

56
ಗಗನ ಸಖಿಯರ ವಿದ್ಯಾರ್ಹತೆ, ಭಾಷಾ ಭಾಷಾಜ್ಙಾನ

ಏರ್ ಹೋಸ್ಟೆಸ್ ಆಗಲು ಕನಿಷ್ಠ 12ನೇ ತರಗತಿ ಪಾಸ್ ಆಗಿರಬೇಕು. ಅರ್ಹತೆಗಳು ಏರ್‌ಲೈನ್‌ಗೆ ಅನುಗುಣವಾಗಿ ಬದಲಾಗುತ್ತವೆ. ಉದಾಹರಣೆಗೆ, ಇಂಡಿಗೋ ಸಂಸ್ಥೆಯು 18 ರಿಂದ 27 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪಷ್ಟವಾಗಿ ಮಾತನಾಡಲು ಬರಬೇಕು. ಕನಿಷ್ಠ 155 ಸೆಂ.ಮೀ ಎತ್ತರ ಇರಬೇಕು ಹಾಗೂ ದೇಹದ ತೂಕವು ಎತ್ತರಕ್ಕೆ ತಕ್ಕಂತೆ ಇರಬೇಕು.

66
ದೇಹದ ಮೇಲೆ ಕಾಣುವ ಟ್ಯಾಟೂ ಇರಬಾರದು!

ದೇಹದ ಮೇಲೆ ಕಾಣುವ ಜಾಗದಲ್ಲಿ ಟ್ಯಾಟೂ ಇರಬಾರದು. ಏರ್ ಇಂಡಿಯಾ ಕೂಡ ಇದೇ ರೀತಿಯ ಅರ್ಹತೆಗಳನ್ನು ನಿಗದಿಪಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸುಮಾರು ಮೂರು ತಿಂಗಳ ಕಾಲ ವಿಶೇಷ ತರಬೇತಿ ನೀಡಲಾಗುತ್ತದೆ. ಇದಾದ ಬಳಿಕ ಅಧಿಕೃತವಾಗಿ ಗಗನಸಖಿಯರಾಗಿ ಕಾರ್ಯನಿರ್ವಹಿಸಬಹುದು

Read more Photos on
click me!

Recommended Stories