ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೇ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ನವದೆಹಲಿ: ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೇ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಸೆಕ್ಷನ್ ಕಂಟ್ರೋಲರ್ (Section Controller - CEN No.03/2026) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಪದವೀಧರ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
25
ಹುದ್ದೆಗಳ ವಿವರ
ಒಟ್ಟು 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ವಿವಿಧ ರೈಲ್ವೆ ವಲಯಗಳ (Zones) ವಿವರ ಈ ಕೆಳಗಿನಂತಿದೆ.
ಬೆಂಗಳೂರು: 08 ಹುದ್ದೆಗಳು
ಸಿಕಂದರಾಬಾದ್: 05 ಹುದ್ದೆಗಳು
ಚೆನ್ನೈ: 09 ಹುದ್ದೆಗಳು
ಅಹಮದಾಬಾದ್: 11
ಅಜ್ಮೀರ್: 01
ಭೋಪಾಲ್: 06
ಭುವನೇಶ್ವರ: 06
ಬಿಲಾಸ್ಪುರ: 04
ಚಂಡೀಗಢ: 06
ಗುವಾಹಟಿ: 01
ಜಮ್ಮು ಮತ್ತು ಶ್ರೀನಗರ: 10
ಕೋಲ್ಕತ್ತಾ: 08
ಮಾಲ್ಡಾ: 07
ಮುಂಬೈ: 06
ಮುಜಾಫರ್ಪುರ: 03
ಪಾಟ್ನಾ: 06
ಪ್ರಯಾಗ್ರಾಜ್: 04
ರಾಂಚಿ: 14
ಸಿಲಿಗುರಿ: 05
ಗೋರಖ್ಪುರ: 05
ತಿರುವನಂತಪುರಂ: 04
35
ಅರ್ಹತೆಗಳು
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ (Graduate Degree) ಪಡೆದಿರಬೇಕು.
ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 33 ವರ್ಷಗಳ ಒಳಗಿರಬೇಕು.