ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ರೂ ಗೆದ್ದು ಸಂಭ್ರಮಿಸಿದ್ದ ತಹಶಿಲ್ದಾರ್ ಅರೆಸ್ಟ್ ಆಗಿದ್ದಾರೆ. ಭಾರಿ ಜನಪ್ರಿಯತೆ ಹೊಂದಿದ್ದ ಸರ್ಕಾರಿ ಅಧಿಕಾರಿ ಇದೀಗ 2.5 ಕೋಟಿ ರೂಪಾಯಿ ಗೋಲ್ಮಾಲ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
ಅಮಿತಾಬ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ' ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ 50 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದ ಮಹಿಳಾ ತಹಶೀಲ್ದಾರ್ ಅರೆಸ್ಟ್ ಆಗಿದ್ದಾರೆ. ಶಿಯೋಪುರ್ ಜಿಲ್ಲೆಯಲ್ಲಿ ನಡೆದಿದ್ದ ಪ್ರವಾಹ ಪರಿಹಾರದ 2.5 ಕೋಟಿ ಪೂಪಾಯಿ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
25
ಜಿಲ್ಲಾಧಿಕಾರಿ ಅಮಿತಾ ಸಿಂಗ್ ತೋಮರ್ ಅರೆಸ್ಟ್
ಶಿಯೋಪುರ್ ಜಿಲ್ಲೆಯ ಬರೋಡಾ ತಹಶೀಲ್‌ನಲ್ಲಿ ನಡೆದ ಪ್ರವಾಹ ಪರಿಹಾರ ವಿತರಣೆಯಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪದ ಮೇಲೆ ಜಿಲ್ಲಾಧಿಕಾರಿ ಅಮಿತಾ ಸಿಂಗ್ ತೋಮರ್ ಅರೆಸ್ಟ್ ಆಗಿದ್ದಾರೆ. ಬಂಧನದ ನಂತರ ಮಹಿಳಾ ಅಧಿಕಾರಿಯನ್ನು ಶಿಯೋಪುರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ, ನ್ಯಾಯಾಲಯದ ಆದೇಶದಂತೆ ಪಕ್ಕದ ಶಿವಪುರಿ ಜಿಲ್ಲೆಯ ಜೈಲಿಗೆ ಕಳುಹಿಸಲಾಗಿದೆ.
35
ಆರೋಪಗಳಿಗೆ ಬಲವಾದ ಸಾಕ್ಷ್ಯ
ಶಿಯೋಪುರ್ ಪೊಲೀಸ್ ವರಿಷ್ಠಾಧಿಕಾರಿ (SP) ಸುಧೀರ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ಹಿಂದೆ ನಡೆದಿದ್ದ ಪ್ರವಾಹ ಪರಿಹಾರ ನಿಧಿ ವಿತರಣೆಯಲ್ಲಿ ಅವ್ಯವಹಾರ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಬರೋಡಾ ಎಸ್‌ಡಿಒಪಿ ಈ ಬಗ್ಗೆ ತನಿಖೆ ನಡೆಸುತ್ತಿದ್ದರು. ಆಗಿನ ತಹಶೀಲ್ದಾರ್ ಆಗಿದ್ದ ಅಮಿತಾ ಸಿಂಗ್ ತೋಮರ್ ಅವರನ್ನೂ ಈ ಕೇಸ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿತ್ತು. ತನಿಖೆ ವೇಳೆ ಅವರ ವಿರುದ್ಧದ ಆರೋಪಗಳಿಗೆ ಬಲವಾದ ಸಾಕ್ಷ್ಯಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವರನ್ನು ಬಂಧಿಸಲು ತೀರ್ಮಾನಿಸಲಾಯಿತು," ಎಂದು ಎಸ್‌ಪಿ ತಿಳಿಸಿದರು.
ಗಂಭೀರ ಆರೋಪ ಕೇಳಿಬಂದ ಬಳಿಕ ತೋಮರ್ ಅವರು ಕರ್ತವ್ಯಕ್ಕೆ ಗೈರಾಗಿದ್ದರು. ನಮ್ಮ ತಂಡ ಅವರ ಬಗ್ಗೆ ಮಾಹಿತಿ ಕಲೆಹಾಕಿ, ಗ್ವಾಲಿಯರ್ ಜಿಲ್ಲೆಯಲ್ಲಿ ಅವರನ್ನು ಬಂಧಿಸಿದೆ. ನಂತರ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆದೇಶದಂತೆ ಶಿವಪುರಿಯ ಮಹಿಳಾ ಜೈಲಿಗೆ ಕಳುಹಿಸಲಾಗಿದೆ," ಎಂದು ಎಸ್‌ಪಿ ಅಗರ್ವಾಲ್ ವಿವರಿಸಿದರು.
55
ಏನಿದು ಪ್ರವಾಹ ಪರಿಹಾರ ಹಗರಣ?
ಲಭ್ಯವಿರುವ ಮಾಹಿತಿ ಪ್ರಕಾರ, ಬಂಧನದಿಂದ ತಪ್ಪಿಸಿಕೊಳ್ಳಲು ತೋಮರ್ ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದ್ದವು. ಈ ಹಗರಣದ ಒಟ್ಟು ಮೊತ್ತ ಸುಮಾರು 2.5 ಕೋಟಿ ರೂಪಾಯಿ. ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಮೂಲಕ ಈ ವಂಚನೆ ಮಾಡಲಾಗಿದೆ. ಆಡಿಟ್ ವೇಳೆ ಈ ಅವ್ಯವಹಾರ ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ತನಿಖೆ ನಡೆಸಿ, ಒಬ್ಬ ತಹಶೀಲ್ದಾರ್ ಮತ್ತು 25 ಪಟ್ವಾರಿಗಳು ಸೇರಿದಂತೆ ಒಟ್ಟು 110 ಜನರನ್ನು ಆರೋಪಿಗಳೆಂದು ಗುರುತಿಸಿದ್ದಾರೆ.
ಏನಿದು ಪ್ರವಾಹ ಪರಿಹಾರ ಹಗರಣ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ