ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

Published : Dec 31, 2025, 05:52 PM IST

ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?, ಬೆಂಗಳೂರು ಸೇರಿದಂತೆ ಭಾರತದಲ್ಲಿ ನ್ಯೂ ಇಯರ್ ಪಾರ್ಟಿಗಳು ಈಗಾಗಲೇ ಆರಂಭಗೊಂಡಿದೆ. ಆದರೆ ಮೊದಲ ಹೊಸ ವರ್ಷವನ್ನು ಸ್ವಾಗತ ಮಾಡುವ ದೇಶ ಯಾವುದು? 

PREV
15
ಹೊಸ ವರ್ಷದ ಸಂಭ್ರಮ

ಹೊಸ ವರ್ಷದ ಸಂಭ್ರಮ ಕಳೆಗೆಟ್ಟಿದೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೊಸ ವರ್ಷದ ಸಂಭ್ರಮ, ಪಾರ್ಟಿ ಆರಂಭಗೊಂಡಿದೆ. ಭಾರತದೆಲ್ಲೆಡೆ ಭರ್ಜರಿಯಾಗಿ ಸಂಭ್ರಮಾಚರಣೆ ಆರಂಭಗೊಂಡಿದೆ. ಇನ್ನು ಅಮೆರಿಕ, ನ್ಯೂಜಿಲೆಂಡ್, ಇಂಗ್ಲೆಂಡ್ ಸೇರಿದಂತ ವಿದೇಶಗಳಲ್ಲಿ ಭರ್ಜರಿಯಾಗಿ ಹೊಸ ವರ್ಷ ಆಚರಿಸಲಾಗುತ್ತದೆ. ಆದರೆ ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು, ಅದು ನ್ಯೂಜಿಲೆಂಡ್ ಅಲ್ಲ.

25
ಮೊದಲ ಹೊಸ ವರ್ಷ ಸ್ವಾಗತಿಸುವ ದೇಶ

ಸಮಯದ ಆಧಾರದಲ್ಲಿ ಮೊದಲು ಜನವರಿ 1, 2026 ದಿನಾಂಕ ಅಂದರೆ ಹೊಸ ವರ್ಷವನ್ನು ಸ್ವಾಗತಿಸುವ ದೇಶ ಕಿರಿಬತಿ ಐಸ್‌ಲೆಂಡ್. ಪೆಸಿಫಿಕ್ ಒಶಿಯನ್‌ಲ್ಲಿರುವ ಸಣ್ಣ ದೇಶ ಮೊದಲು ಹೊಸ ವರ್ಷವನ್ನು ಸ್ವಾಗತಿಸಲಿದೆ. ಈ ಐಸ್‌ಲೆಂಡ್ UTC+14 ಟೈಮ್‌ಜೋನ್‌ನಲ್ಲಿದೆ. ಈ ಐಸ್‌ಲೆಂಡ್‌ನ್ನು ಕ್ರಿಸ್ಮಸ್ ಲ್ಯಾಂಡ್ ಎಂದು ಕರೆಯುತ್ತಾರೆ.

35
ಕಿರಿಬತಿಯ ಹೊಸ ವರ್ಷ ಯಾವಾಗ?

ವಿಶೇಷ ಅಂದರೆ ಕಿರಿಬತಿ ಈಗಾಗಲೇ ಹೊಸ ವರ್ಷ ಆಚರಿ ಆಗಿದೆ. ಕಾರಣ ಭಾರತೀಯರಿಗೆ ಡಿಸೆಂಬರ್ 31ರ ಮಧ್ಯಾಹ್ನ 3.30 ನಿಮಿಷಕ್ಕೆ ಕಿರಿಬತಿಯಲ್ಲಿ ಜನವರಿ 1 , 2026ರ ಮಧ್ಯರಾತ್ರಿ. ಆಗಾಗಲೇ ಕಿರಿಬಿತಿ ಜನ ಹೊಸ ವರ್ಷವನ್ನು ಬರಮಾಡಿಕೊಂಡು ಸಂಭ್ರಮಾಚರಿಸುತ್ತಿದ್ದಾರೆ.

45
ಭಾರತಕ್ಕೆ ಎಷ್ಟನೇ ಸ್ಥಾನ?

ಹೊಸ ವರ್ಷವನ್ನು ಸಮಯ ಆಧಾರದಲ್ಲಿ ಸ್ವಾಗತ ಮಾಡುವ ರಾಷ್ಟ್ರಗಳ ಪೈಕಿ ಭಾರತ ಸರಿಸುಮಾರು 15ನೇ ರಾಷ್ಟ್ರ. ಆಸ್ಟ್ರೇಲಿಯಾ, ಚೀನಾ, ಸಿಂಗಾಪೂರ ಸೇರಿದಂತೆ ಹಲವು ರಾಷ್ಟ್ರಗಳ ಬಳಿಕ ಭಾರತ ಹೊಸ ವರ್ಷವನ್ನು ಸ್ವಾಗತ ಮಾಡಲಿದೆ. ಭಾರತಕ್ಕಿಂತ ಅರ್ಧ ಗಂಟೆ ಮೊದಲು ಬಾಂಗ್ಲಾದೇಶ ಹೊಸ ವರ್ಷ ಸ್ವಾಗತ ಮಾಡಲಿದೆ.

ಭಾರತಕ್ಕೆ ಎಷ್ಟನೇ ಸ್ಥಾನ?

55
ಹೊಸ ವರ್ಷ ಮೊದಲು ಸ್ವಾಗತ ಮಾಡುವ ದೇಶಗಳ ಪಟ್ಟಿ (ಭಾರತೀಯ ಸಮಯದ ಪ್ರಕಾರ)
  • ಕಿರಿಬತಿ : (3.30 PM IST ) ಡಿಸೆಂಬರ್ 31
  • ನ್ಯೂಜಿಲೆಂಡ್: (4:30 PM IST)ಡಿಸೆಂಬರ್ 31
  • ಆಸ್ಟ್ರೇಲಿಯಾ : (6:30 PM IST) ಡಿಸೆಂಬರ್ 31
  • ಜಪಾನ್, ಸೌತ್ ಕೊರಿಯಾ, ನಾರ್ತ್ ಕೊರಿಯಾ: (8:30 PM IST) ಡಿಸೆಂಬರ್ 31
  • ಚೀನಾ, ಹಾಂಕಾಂಗ್ , ತೈವಾನ್ : ( 9:30 PM IST) ಡಿಸೆಂಬರ್ 31
  • ಥಾಯ್ಲೆಂಡ್ : (10:30 PM IST) ಡಿಸೆಂಬರ್ 31
  • ಭಾರತ, ಶ್ರೀಲಂಕಾ : (12:00 AM IST) ಮಧ್ಯರಾತ್ರಿ

ಹೊಸ ವರ್ಷ ಮೊದಲು ಸ್ವಾಗತ ಮಾಡುವ ದೇಶಗಳ ಪಟ್ಟಿ (ಭಾರತೀಯ ಸಮಯದ ಪ್ರಕಾರ)

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories