ಇನ್ನು ಮುಂದೆ ಪರ್ಮಿಷನ್ ಇಲ್ಲದೇ ಓಡಿ ಹೋಗಿ ಲವ್ ಮ್ಯಾರೇಜ್ ಆಗುವಂತಿಲ್ಲ, ಹೊಸ ಮಸೂದೆ

Published : Dec 31, 2025, 03:14 PM IST

ಓಡಿ ಹೋದರೂ, ಲವ್ ಮ್ಯಾರೇಜ್‌ಗೂ ಬೇಕು ಅನುಮತಿ, ಹೊಸ ಮದುವೆ ನೀತಿ ಮಸೂದೆ, ಪೋಷಕರ ಅನುಮತಿ ಸಿಗದಿದ್ದರೆ, ಲೆವಲ್ 2 ಆಫೀಸ್ ಪರಿಶೀಲನೆ ನಡೆಸಲಿದ್ದಾರೆ. ಆಫೀಸರ್ ಅಪ್ರೋವ್ ನೀಡಿದರೆ ಮಾತ್ರ ಮದುವೆ ಸಾಧ್ಯ. 

PREV
16
ಲವ್ ಮ್ಯಾರೇಜ್‌ಗೂ ಅನುಮತಿ ಬೇಕು

ಪೋಷಕರ ಒಪ್ಪಿಗೆ ಇಲ್ಲ ಎಂದರೆ ಮದುವೆ ಓಡಿ ಹೋಗಿ ಮದುವೆಯಾಗುವ ಪ್ಲಾನ್ ಮಾಡಿದ್ದೀರಾ? ಅಥವಾ ಎಲ್ಲರನ್ನು ಧಿಕ್ಕರಿಸಿ ಮದುವೆಯಾಗಲು ಹೊರಟಿದ್ದೀರಾ? ಇನ್ನು ಲವ್ ಮ್ಯಾರೇಜ್‌ಗೂ ಅನುಮತಿ ಬೇಕು. ಪೋಷಕರ ಅನುಮತಿ ಬೇಕು, ಪೋಷಕರು ಅನುಮತಿ ನೀಡಿದಿದ್ದರೆ, ಲೆವೆಲ್ 2 ಅಫೀಸ್ ಪರಿಶೀಲನೆ ನಡೆಸಿ ಮದುವೆಗ್ ಅನುಮತಿ ನೀಡಬಹುದು, ಅಥವಾ ನಿರಾಕರಿಸಬಹುದು.

26
ಲವ್ ಮ್ಯಾರೇಜ್ ರಿಜಿಸ್ಟ್ರೇಶನ್ ನಿಯಮ

ಗುಜರಾತ್‌ನಲ್ಲಿ ಮದುವೆ ಕಾಯ್ದೆಯಲ್ಲಿ ಮಹತ್ತರ ತಿದ್ದುಪಡಿ ತರಲು ಎಲ್ಲಾ ತಯಾರಿ ನಡೆದಿದೆ. ಲವ್ ಮ್ಯಾರೇಜ್ ಆಗಲೂ ಪೋಷಕರ ಅನುಮತಿ ಕಡ್ಡಾಯವಾಗಿದೆ. ಹಲವು ಸಮುದಾಯಗಳ ಪೋಷಕರು ಹಲವು ವರ್ಷಗಳಿಂದ ಇಟ್ಟಿದ್ದ ಬೇಡಿಕೆ ಪರಿಗಣಿಸಿ ಮ್ಯಾರೇಜ್ ಆ್ಯಕ್ಟ್‌ನಲ್ಲಿ ಲವ್ ಮ್ಯಾರೇಜ್ ಸರ್ಟಿಫೀಕೆಟ್‌ನ ಸೇರಿಕೊಳ್ಳುತ್ತಿದೆ.

36
ಪೋಷಕರಿಗೆ ನೋಟಿಸ್

ಮ್ಯಾರೇಜ್ ರಿಜಿಸ್ಟ್ರೇಶನ್ ನಿಯಮದಲ್ಲಿ ಹೊಸ ಲವ್ ಮ್ಯಾರೇಜ್ ಸೇರಿಸಲಾಗುತ್ತಿದೆ. ಈ ನಿಯಮದ ಪ್ರಕಾರ ಪ್ರೀತಿಸಿ ಮದುವೆಯಾಗುವವರು ಪೋಷಕರ ಅನುಮತಿ ಪಡೆಯಬೇಕು. ಒಂದು ವೇಳೆ ಜೋಡಿಗಳು ಪೋಷಕರ ಅನುಮತಿ ಇಲ್ಲದೆ ಮದುವೆಯಾಗುತ್ತಿದ್ದರೂ ಪೋಷಕರ ಅನುಮತಿ ಬೇಕು. ಈ ನಿಯಮದ ಪ್ರಕಾರ, ಮದುವೆ ರಿಜಿಸ್ಟ್ರೇಶನ್ ವೇಳೆ ಜೋಡಿಗಳ ಪೋಷಕರಿಗೆ ನೋಟಿಸ್ ನೀಡಲಾಗುತ್ತದೆ.

46
ಪೋಷಕರ ಅನುಮತಿ ನೀಡಿದರೆ ಮದುವೆ ರಿಜಿಸ್ಟ್ರೇಶನ್

ಪೋಷಕರು ಜೋಡಿಗಳ ಮದುವೆಗೆ ಅನುಮತಿ ನೀಡದಿದ್ದರೆ, ಲೆವೆಲ್ 2 ಆಫೀಸರ್ ಜೋಡಿಗಳ ಮದುವೆ ಕುರಿತು ತನಿಖೆ ನಡೆಸಲಿದ್ದಾರೆ. 30 ದಿನಗಳ ಅವಧಿಯಲ್ಲಿ ತನಿಖೆ ನಡೆಸಿ ವರದಿ ನೀಡಬೇಕು. ಅಧಿಕಾರಿ ಪರಿಶೀಲನೆ ನಡೆಸಿ ಅನುಮತಿ ನೀಡಿದರೆ ಮಾತ್ರ ಲವ್ ಮ್ಯಾರೇಜ್ ರಿಜಿಸ್ಟ್ರೇಶನ್ ಆಗಲಿದೆ.

56
ಹಲವು ಸಮುದಾಯಗಳ ಬೇಡಿಕೆ

ಪಾಟೀದಾರ್, ಠಾಕೂರ್ ಕ್ಷತ್ರಿಯ ಸೇರಿದಂತೆ ಕೆಲ ಸಮುದಾಯಗಳು ಹೆಚ್ಚುತ್ತಿರುವ ಲವ್ ಮ್ಯಾರೇಜ್ ಕುರಿತು ಆತಂಕ ವ್ಯಕ್ತಪಡಿಸಿತ್ತು. ಪ್ರಮಖವಾಗಿ ಪೋಷಕರ ಅನುಮತಿ ಇಲ್ಲದೆ ನಡೆಯುತ್ತಿರುವ ಲವ್ ಮ್ಯಾರೇಜ್ ಕುರಿತು ಆತಂಕ ವ್ಯಕ್ತಪಡಿಸಿದ್ದರು. 2023ರಲ್ಲಿ ಈ ಕುರಿತು ವಿಧಾನಸಭೆಯಲ್ಲೂ ಭಾರಿ ಚರ್ಚೆಯಾಗಿತ್ತು. ಸೂಕ್ತ ನಿಯಮಕ್ಕಾಗಿ ಆಡಳಿತ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಆಗ್ರಹಿಸಿತ್ತು.

ಹಲವು ಸಮುದಾಯಗಳ ಬೇಡಿಕೆ

66
ಹೊಸ ಮಸೂದೆ ಮಂಡನೆಗೆ ತಯಾರಿ

ಹೊಸ ಮಸೂದೆ ಮಂಡನೆಗೆ ಗುಜರಾತ್ ಸರ್ಕಾರ ತಯಾರಿ ನಡೆಸುತ್ತಿದೆ. ಈ ಮೂಲಕ ಗುಜರಾತ್‌ನಲ್ಲಿ ಪ್ರೀತಿಸಿ ಮದುವೆಯಾಗುವುದು ಸುಲಭವಲ್ಲ. ಪೋಷಕರ ಒಪ್ಪಿಸಿ ಮದುವೆಯಾದರೆ ಸೇಫ್, ಇಲ್ಲಾ ಆಂದರೆ ಮದುವೆ ಸುಲಭವಲ್ಲ. ಈ ಕುರಿತ ಮಸೂದೆ ಮಂಡನೆಯಾಗಲಿದೆ.

ಹೊಸ ಮಸೂದೆ ಮಂಡನೆಗೆ ತಯಾರಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories