ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲು ಲಾಂಚ್ ಡೇಟ್ ಘೋಷಣೆ, ಮಾರ್ಗ ಸೇರಿ ಇಲ್ಲಿದೆ ವೇಳಾಪಟ್ಟಿ

Published : Oct 18, 2026, 04:39 PM IST

ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭ ದಿನಾಂಕ ಘೋಷಣೆಯಾಗಿದೆ. ಮಾರ್ಗ, ನಿಲುಗಡೆ ಸೇರಿದಂತೆ ವಂದೇ ಭಾರತ್ ಸ್ಲೀಪರ್ ರೈಲಿನ ವೇಳಾಪಟ್ಟಿ ನೀಡಲಾಗಿದೆ. ಪ್ರಯಾಣದ ಸಮಯವೂ ಕಡಿತಗೊಳ್ಳುತ್ತಿದೆ.

PREV
15
ಬೆಂಗಳೂರಿಗೆ ವಂದೇ ಭಾರತ್ ಸ್ಲೀಪರ್ ರೈಲು

ವಂದೇ ಭಾರತ್ ಸ್ಲೀಪರ್ ರೈಲು ಜಾಲ ವಿಸ್ತರಣೆಯಾಗುತ್ತಿದೆ. ದಸರಾ ವೇಳೆ ಆರಂಭವಾಗಬೇಕಿದ್ದ ಬೆಂಗಳೂರಿನ ವಂದೇ ಭಾರತ್ ರೈಲು ಕೊಂಚ ವಿಳಂಬವಾಗಿದೆ. ಆದರೆ ಇದೇ ತಿಂಗಳ ಅಂತ್ಯದಲ್ಲಿ ಬೆಂಗಳೂರಿಗೆ ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳಲಿದೆ ಎಂದು ರೈಲ್ವೇ ಮೂಲಗಳು ಹೇಳಿವೆ. ಈ ಮೂಲಕ ವಂದೇ ಭಾರತ್ ಸ್ಲೀಪರ್ ಇದೀಗ ಬೆಂಗಳೂರಿಗೂ ಸೇವೆ ವಿಸ್ತರಿಸುತ್ತಿದೆ.

25
ಯಾವ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್

ಬಹುನೀರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರು-ಮುಂಬೈ ಹಾಗೂ ಮುಂಬೈ-ಬೆಂಗಳೂರು ಮಾರ್ಗದಲ್ಲಿ ಸೇವೆ ನೀಡಲಿದೆ. ಶೀಘ್ರದಲ್ಲೇ ಭಾರತೀಯ ರೈಲ್ವೇ ಸೇವೆ ಆರಂಭ ದಿನಾಂಕ ಘೋಷಣೆ ಮಾಡಲಿದೆ. ಇನ್ನುಳಿದಂತೆ ಎಲ್ಲವೂ ನಿಗದಿಯಾಗಿದೆ. ಟ್ರೈನ್ ಸಮಯ, ವೇಳಾಪಟ್ಟಿ, ನಿಲುಗಡೆ ಸೇರಿದಂತೆ ಎಲ್ಲವೂ ನಿರ್ಧಾರವಾಗಿದೆ.

35
ಬೆಂಗಳೂರು ಮುಂಬೈ ವಂದೇ ಭಾರತ್ ರೈಲು ಸಮಯ

ಬೆಂಗಳೂರು,ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನ SMVT ರೈಲು ನಿಲ್ದಾಣದಿಂದ ಸಂಜೆ 7.50ಕ್ಕೆ ಹೊರಡಲಿದೆ. ಈ ರೈಲು ಮುಂಬೈ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 11.55ಕ್ಕೆ ತಲುಪಲಿದೆ. ಇನ್ನು ಮುಂಬೈ ನಿಲ್ದಾಣದಿಂದ ರಾತ್ರಿ 8.10ಕ್ಕೆ ಹೊರಡಲಿರುವ ಸ್ಲೀಪರ್ ರೈಲು ಬೆಂಗಳೂರಿಗೆ ಬೆಳಗ್ಗೆ 11.55ಕ್ಕೆ ತಲುಪಲಿದೆ.

45
6 ಗಂಟೆ ಕಡಿತ

ಸದ್ಯ ಬೆಂಗಳೂರು ಮುಂಬೈ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿಗೆ ಹೋಲಿಸಿದರೆ ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಯಾಣದಿಂದ 6 ಗಂಟೆ ಕಡಿತಗೊಳ್ಳಲಿದೆ. ವಂದೇ ಭಾರತ್ ಸ್ಲೀಪರ್ ರೈಲು 15 ಗಂಚೆ 45 ನಿಮಿಷದಲ್ಲಿ ಬೆಂಗಳೂರಿನಿಂದ ಮುಂಬೈ ತಲುಪಲಿದೆ. ಇದರಿಂದ ಪ್ರಯಾಣಿಕರು ಸಮಯ ಉಳಿತಾಯ ಮಾಡಲು ಸಾಧ್ಯವಿದೆ.

55
ಯಾವ ಮಾರ್ಗದಲ್ಲಿ ಪ್ರಯಾಣ

ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕರ್ನಾಟಕದ ಎರಡು ರೈಲು ನಿಲ್ದಾಣಗಳಾದ ರಾಯಚೂರು,ಕಲಬರುಗಿ ಮೂಲಕ ಪ್ರಯಾಣ ಮಾಡಲಿದೆ. ಇನ್ನು ಧರ್ಮಾವರಂ, ಅನಂತಪುರಂ, ಗುಂಟಕಲ್, ಸೋಲಾಪುರ, ಪುಣೆ , ಕಲ್ಯಾಣ ಮಾರ್ಗವಾಗಿ ಮುಂಬೈ ತಲುಪಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories