ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ದೋಡ್ಲಾ ಹಾಲು ಸೇರಿದಂತೆ ದೋಡ್ಲಾ ಡೈರಿ ಉತ್ಪನ್ನಗಳು ಲಭ್ಯವಿದೆ. ಆದರೆ ಇದು ಸೇವನೆಗೆ ಯೋಗ್ಯವಲ್ಲ ಎಂದು ಆಹಾರ ಸುರಕ್ಷತಾ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ. ದೋಡ್ಲಾ ಜೊತೆ ಪ್ರಿಯಾ ಬಿಸ್ಕೆಟ್ ಕೂಡ ಈ ಪಟ್ಟಿಯಲ್ಲಿ ಸೇರಿಕೊಂಡಿದೆ.
ಹಾಲು ಹಾಗೂ ಡೈರಿ ಉತ್ಪನ್ನಗಳು ಪ್ರತಿ ನಿತ್ಯ ಸೇವೆನೆ ವಸ್ತುಗಳು. ಆದರೆ ನಾವು ಸೇವಿಸುವ ಉತ್ಪನ್ನಗಳು ಎಷ್ಟು ಸುರಕ್ಷತಿ ಅನ್ನೋ ಆತಂಕ ತೀವ್ರಗೊಳ್ಳುತ್ತಿದೆ. ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI) ಅಧಿಕಾರಿಗಳ ತಪಾಸಣೆಯಲ್ಲಿ ಕೆಲ ಉತ್ಪನ್ನಗಳು ಸೇವನೆಗೆ ಯೋಗ್ಯವಲ್ಲ ಅನ್ನೋದು ಪತ್ತೆಯಾಗಿದೆ. ದೋಡ್ಲಾ ಡೈರಿ ಉತ್ಪನ್ನಗಳ ವಿರುದ್ದ FSSAI ಕ್ರಮ ಕೈಗೊಂಡಿದೆ.
25
ದೋಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕ್ಲಾಸ್ಟಿಕ್ ಸೋಡಾ ಪತ್ತೆ
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗದಲ್ಲಿ ಸುಲಭವಾಗಿ ಲಭ್ಯವಿರುವ ದೋಡ್ಲಾ ಹಾಲು ಹಾಗೂ ದೋಡ್ಲಾ ಡೈರಿ ಉತ್ಪನ್ನಗಳು ಸೇವನೆಗೆ ಯೋಗ್ಯವಲ್ಲ ಎಂದು FSSAI ಅಧಿಕಾರಿಗಳು ಹೇಳಿದ್ದಾರೆ. ಹಲವು ಆಹಾರ ಸುರಕ್ಷತಾ ಮಾನದಂಡಗಳು ಉಲ್ಲಂಘನೆಯಾಗಿದೆ. ಇಷ್ಟೇ ಅಲ್ಲ ಈ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕ್ಲಾಸ್ಟಿಕ್ ಸೋಡಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
35
ಹಲವು ಮಾನದಂಡಗಳ ಉಲ್ಲಂಘನೆ
ದೋಡ್ಲಾ ಹಾಲಿನಲ್ಲಿ ಅತ್ಯಂತ ಅಪಾಯಕಾರಿ ಡಿಟರ್ಜೆಂಟ್ ಅಥವಾ ಕ್ಲಾಸ್ಟಿಕ್ ಸೋಡಾ ಪತ್ತೆಯಾಗಿದೆ. ಹಾಲಿನಲ್ಲಿ ಕೊಬ್ಬಿನ ಅಂಶ ನಿಗಧಿತ ಪ್ರಮಾಣಕ್ಕಿಂತ ಭಾರಿ ಕಡಿಮೆ ಇದೆ. ಹಲವು ಸುತ್ತಿನ ಪರೀಕ್ಷೆಯಲ್ಲಿ ದೋಡ್ಲಾ ಹಾಲು ಸುರಕ್ಷಿತ ಆಹಾರ ಹಾಗೂ ಪಾನೀಯಗಳ ಮಾನದಂಡಕ್ಕೆ ಅನುಗುಣವಾಗಿಲ್ಲ. ಹಲವು ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅದಿಕಾರಿಗಳು ಹೇಳಿದ್ದಾರೆ.
ಪ್ರಿಯಾ ಗೋಲ್ಡ್ ಬಿಸ್ಕೆಟ್ ಕೂಡ ಆಹಾರ ಸುರಕ್ಷತಾ ಮಾನದಂಡ ಪಾಲಿಸಿಲ್ಲ. ಈ ಬಿಸ್ಕೆಟ್ ಸೇವನೆಗೆ ಯೋಗ್ಯವಲ್ಲ ಎಂದು FSSAI ಹೇಳಿದೆ. ಪ್ರಿಯಾ ಗೋಲ್ಡ್ ಬಿಸ್ಕೆಟ್ಗಳನ್ನು ಸೂರ್ಯ ಫುಡ್ ಆ್ಯಂಡ್ ಆಗ್ರೋ ಕಂಪನಿ ತಯಾರಿಸುತ್ತಿದೆ. ಆದರೆ ಈ ಬಿಸ್ಕೆಟ್ ತಯಾರಿಸುವ ಬಳಸವು ಕೆಲ ಸಾಮಾಗ್ರಿಗಳು ಪಶುಸಂಗೋಪನೆಯಲ್ಲಿ ಬಳಸುವ ಆಹಾರ ಪದಾರ್ಥಗಳನ್ನು ಬಳಸುತ್ತಿದೆ. ಕಚ್ಚಾ ಸಾಮಾಗ್ರಿಗಳ ಸಂಗ್ರಹ, ಸ್ವಚ್ಚತೆಯಲ್ಲೂ ಕಾರ್ಖಾನೆ ಎಲ್ಲಾ ನಿಯಮ ಉಲ್ಲಂಘಿಸಿದೆ ಎಂದು FSSAI ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
55
ಹಲವು ಫುಡ್ ಕಂಪನಿಗಳಿಗೆ ನೋಟಿಸ್
ಯುಯಿರ್ ಆರ್ಗಾನಿಕ್ ಫುಡ್ಸ್ ಹಲವು ರೀತಿಯ ಒಣ ಹಣ್ಣುಗಳು ಸೇರಿದಂತೆ ಇತರ ಆಹಾರ ವಸ್ತುಗಳನ್ನು ನೀಡುತ್ತಿದೆ. ಆರ್ಗಾನಿಕ್ ಹೆಸರಿನಲ್ಲಿ ನೀಡುತ್ತಿದೆ. ಆಧರೆ ಯುಯಿರ್ ಒಣ ದ್ರಾಕ್ಷಿಗಳಲ್ಲಿ ವಿಪರೀತ ಪ್ರಮಾಣದಲ್ಲಿ ರಾಸಾಯನಿಕಗಳು ಪತ್ತೆಯಾಗಿದೆ. ಇದೇ ವೇಳೆ ಸನ್ ರಿಜಿಸ್ ಹೆಲ್ತ್ ಕೇರ್, ಕಂಟಿಲಾಲ್ ಜಯಂತಿಲಾಲ್, ನಾರ್ಪಧಮ್ ಫುಡ್ ಪ್ರಾಡಕ್ಟ್ ಕಂಪನಿಗಳಿಗೂ FSSAI ನೋಟಿಸ್ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ