Toll plaza ಏಪ್ರಿಲ್ 1 ರಿಂದ ಎಲ್ಲಾ ಟೋಲ್ ಗೇಟ್‌ಗಳಲ್ಲಿ ಕ್ಯಾಶ್‌ಲೆಸ್ ಎಂಟ್ರಿಗೆ ಮಾತ್ರ ಅವಕಾಶ

Published : Jan 17, 2026, 07:30 PM IST

Toll plaza, ಏಪ್ರಿಲ್ 1 ರಿಂದ ಟೋಲ್ ಪ್ಲಾಜಾ ಹೊಸ ನಿಯಮ ಜಾರಿಯಾಗುತ್ತಿದೆ. ದೇಶದ ಎಲ್ಲಾ ಟೋಲ್ ಗೇಟ್‌ಗಳಲ್ಲಿ ಕ್ಯಾಶ್‌ಲೆಸ್ ಎಂಟ್ರಿಗೆ ಮಾತ್ರ ಅವಕಾಶ. ನಗದು ಪಾವತಿ ಮಾಡುವ ವ್ಯವಸ್ಥೆ ಇರುವುದಿಲ್ಲ. ಏನಿದು ಹೊಸ ನಿಯಮ?  

PREV
16
ಟೋಲ್ ಗೇಟ್ ಪಾವತಿಯಲ್ಲಿ ಹೊಸ ನಿಯಮ

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ಗೇಟ್ ಶುಲ್ಕ ಫಾಸ್ಟಾಗ್ ಮೂಲಕ ಪಾವತಿ ಮಾಡಲಾಗುತ್ತದೆ. ಫಾಸ್ಟಾಗ್ ನೀತಿ ಜಾರಿಗೆ ಬಂದು ಹಲವು ವರ್ಷಗಳೇ ಉರುಳಿದೆ. ಬಳಿಕ ಹಲವು ಸುಧಾರಣೆಗಳು ಕಂಡಿದೆ. ಇದೀಗ ಏಪ್ರಿಲ್ 1 ರಿಂದ ಹೊಸ ನೀತಿ ಜಾರಿಗೆ ಬರುತ್ತಿದೆ. ದೇಶದ ಎಲ್ಲಾ ಟೋಲ್ ಗೇಟ್‌ಗಳಲ್ಲಿ ಕ್ಯಾಶ್‌ಲೆಸ್ ಎಂಟ್ರಿಗೆ ಮಾತ್ರ ಅವಕಾಶ ನೀಡಲಾಗಿದೆ.

26
ಏನಿದು ಕ್ಯಾಶ್‌ಲೆಸ್ ಎಂಟ್ರಿ

ಏಪ್ರಿಲ್ 1 ರಿಂದ ಎಲ್ಲಾ ಟೋಲ್ ಗೇಟ್‌ಗಳಲ್ಲಿ ಕ್ಯಾಶ್‌ಲೆಸ್ ಎಂಟ್ರಿಗೆ ಮಾತ್ರ ಅವಕಾಶ. ಫಾಸ್ಟಾಗ್ ಕಡ್ಡಾಯ ಮಾಡಿದ್ದರೂ, ಇನ್ನು ಹಲವು ವಾಹನಗಳು ಫಾಸ್ಟಾಗ್ ಇಲ್ಲದೆ ಪ್ರಯಾಣ ಮಾಡುತ್ತಿದೆ. ಈ ವೇಳೆ ನಗದು ಮೂಲಕ ಶುಲ್ಕ ಪಾವತಿ ಮಾಡುತ್ತಾರೆ. ಇದಕ್ಕೆ ದಂಡದ ರೂಪದಲ್ಲಿ ದುಪ್ಪಟ್ಟು ಹಣ ಪಾವತಿ ಮಾಡಿ ಸಾಗುತ್ತಾರೆ. ಆದರೆ ಇನ್ನು ಮುಂದೆ ಟೋಲ್ ಪ್ಲಾಜಾಗಳಲ್ಲಿ ಯಾವುದೇ ರೀತಿಯ ನಗದು ಪಾವತಿ ಇರುವುದಿಲ್ಲ.

36
ಫಾಸ್ಟಾಗ್ ಅಥವಾ ಯುಪಿಐ ಪಾವತಿ ಮೂಲಕ ಮಾತ್ರ

ಟೋಲ್ ಪ್ಲಾಜಾಗಳಲ್ಲಿ ಫಾಸ್ಟಾಗ್ ಪಾವತಿ ಕಡ್ಡಾಯ. ಒಂದು ವೇಳೆ ಫಾಸ್ಟಾಗ್ ಇಲ್ಲದಿದ್ದರೆ, ಕಾರ್ಯನಿರ್ವಹಿಸದಿದ್ದರೆ, ಯುಪಿಐ ಮೂಲಕ ಪಾವತಿ ಮಾಡಬಹುದು. ಆದರೆ ನಗದು ಪಾವತಿ ಇರುವುದಿಲ್ಲ. ಪ್ರಮುಖವಾಗಿ ಸಂಚಾರ ದಟ್ಟಣೆ ತಗ್ಗಿಸಲು, ಸಮಯ ಉಳಿತಾಯ ಮಾಡಲು ಹಾಗೂ ಪಾರದರ್ಶಕ ನಿರ್ವಹಣೆಗೆ ಈ ನಿಯಮ ಜಾರಿಯಾಗುತ್ತಿದೆ.

46
ವಾಹನ ಮಾಲೀಕರು, ಸವಾರರು ಏನು ಮಾಡಬೇಕು

ಏಪ್ರಿಲ್ 1 ರಿಂದ ಪ್ರಯಾಣಕ್ಕೂ ಮೊದಲೇ ವಾಹನಗಳ ಫಾಸ್ಟಾಗ್ ಖಾತೆ ಪರಿಶೀಲನೆ ಮಾಡಿಕೊಳ್ಳಿ.ಪ್ರಮುಖವಾಗಿ ಫಾಸ್ಟಾಗ್ ಸಕ್ರೀಯವಾಗಿದೆಯಾ, ಕೆವೈಸಿ ಪೂರ್ಣಗೊಂಡಿದೆಯಾ ಪರಿಶೀಲಿಸಿ. ಇನ್ನು ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದರೆ ರೀಚಾರ್ಜ್ ಮಾಡಿಕೊಳ್ಳಿ. ಸುಲಭವಾಗಿ ಫೋನ್‌ಪೇ, ಗೂಗಲ್ ಮೇ ಸೇರಿದಂತೆ ಯುಪಿಐ ಆ್ಯಪ್ ಮೂಲಕವೂ ರೀಚಾರ್ಜ್ ಸಾಧ್ಯವಿದೆ. ಹೀಗಾಗಿ ರೀಚಾರ್ಜ್ ಮಾಡಿ ಇಟ್ಟುಕೊಳ್ಳಿ. ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ಸಮಸ್ಯೆ ತಪ್ಪಿಸಬಹುದು.

56
ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯಿಂದ ವಿಳಂಬ

ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ ಹಲವು ವಾಹನಗಳು ನಗದು ಪಾವತಿ ಮಾಡಿ ಸಾಗುತ್ತಿದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ಜಾಮ್ ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಇತರ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿದೆ. ಈ ಎಲ್ಲಾ ದೂರುಗಳ ಆಧರಿಸಿ ಇದೀಗ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಇದೀಗ ಕ್ಯಾಶ್‌ಲೆಸ್ ಎಂಟ್ರಿ ಮಾತ್ರ ಅವಕಾಶ ನೀಡಲು ಮುಂದಾಗಿದೆ.

66
ಡಿಜಿಟಲ್ ಪೇಮೆಂಟ್‌ಗೆ ಒತ್ತು

ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪೇಮೆಂಟ್‌ಗೆ ಒತ್ತು ನೀಡಲು ಹಲವು ಕಾರಣಗಳಿವೆ. ಒಂದು ಪಾರದರ್ಶಕತೆ ಹಾಗೂ ಅಗತ್ಯ ಬಿದ್ದಲ್ಲಿ ಪಾವತಿ ಮಾಡಿದವರ ಮಾಹಿತಿ, ಟ್ರಾಕ್ ಸಂಗ್ರಹ ಮಾಡಲು ನರೆವಾಗುತ್ತದೆ. ಹಲವು ಸಂದರ್ಭಗಳಲ್ಲಿ ಪೊಲೀಸರು ಹುಡುಕಾಡುತ್ತಿರುವ ವಾಹನಗಳು, ಫಾಸ್ಟಾಗ್ ಬದಲು ನಗದು ಪಾವತಿ ಮಾಡಿ ತಪ್ಪಿಸಿಕೊಳ್ಳುತ್ತದೆ.

ಡಿಜಿಟಲ್ ಪೇಮೆಂಟ್‌ಗೆ ಒತ್ತು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories