UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?
ಈ ಸ್ಪೀಡ್ ಯುಗದಲ್ಲಿ, ಸೈಕಲ್ ವೇಗದಲ್ಲಿ, ಅಂದರೆ ಗಂಟೆಗೆ ಕೇವಲ 9 ರಿಂದ 12 ಕಿ.ಮೀ. ವೇಗದಲ್ಲಿ ಚಲಿಸುವ ಒಂದು ವಿಚಿತ್ರ ರೈಲು ನಮ್ಮ ದೇಶದಲ್ಲಿದೆ. ಆದರೆ, ಈ ನಿಧಾನವೇ ಇದರ ನಿಜವಾದ ಸೌಂದರ್ಯ. ಈ ರೈಲು ಹತ್ತಲು ಜನರು ತಿಂಗಳುಗಳ ಮೊದಲೇ ಟಿಕೆಟ್ ಬುಕ್ ಮಾಡಿ ಸರದಿಯಲ್ಲಿ ನಿಲ್ಲುತ್ತಾರೆ. ಅದೇ ತಮಿಳುನಾಡಿನ ನೀಲಗಿರಿ ಮೌಂಟೇನ್ ರೈಲ್ವೆ, ನಮ್ಮೆಲ್ಲರ ಪ್ರೀತಿಯ 'ಊಟಿ ಟಾಯ್ ಟ್ರೈನ್'.
25
ಶತಮಾನದ ಇತಿಹಾಸವಿದೆ
ಈ ರೈಲು ಕೇವಲ ಬೊಂಬೆ ರೈಲಲ್ಲ, ಇದರ ಹಿಂದೆ ಒಂದು ಶತಮಾನದ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ, ಅಂದರೆ 1908ರಲ್ಲಿ ನಿರ್ಮಿಸಿದ ಈ ರೈಲ್ವೆ ಮಾರ್ಗದ ಮಹತ್ವವನ್ನು ಗುರುತಿಸಿ 2005ರಲ್ಲಿ 'ಯುನೆಸ್ಕೋ' ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು. ಕೇವಲ 46 ಕಿ.ಮೀ. ದೂರವನ್ನು ಕ್ರಮಿಸಲು ಈ ರೈಲಿಗೆ ಸುಮಾರು 5 ಗಂಟೆ ಬೇಕಾಗುತ್ತದೆ.
35
250ಕ್ಕೂ ಹೆಚ್ಚು ಸೇತುವೆ
ಮೆಟ್ಟುಪಾಳಯಂನಿಂದ ಊಟಿಯವರೆಗಿನ 5 ಗಂಟೆಗಳ ಪ್ರಯಾಣದಲ್ಲಿ, ರೈಲು 208 ತಿರುವುಗಳು, 16 ಸುರಂಗಗಳು ಮತ್ತು 250ಕ್ಕೂ ಹೆಚ್ಚು ಸೇತುವೆಗಳ ಮೇಲೆ ಸಾಗುತ್ತದೆ. ಕಿಟಕಿಯಿಂದ ಹೊರಗೆ ನೋಡಿದರೆ ದಟ್ಟವಾದ ಕಣಿವೆಗಳು, ಹಸಿರು ಚಹಾ ತೋಟಗಳು ಮತ್ತು ಜಲಪಾತಗಳ ಸುಂದರ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.
ಈ ರೈಲು ಇಷ್ಟು ನಿಧಾನವಾಗಿ ಹೋಗಲು 'ರ್ಯಾಕ್ ಮತ್ತು ಪಿನಿಯನ್' ಎಂಬ ವಿಶಿಷ್ಟ ತಂತ್ರಜ್ಞಾನವೇ ಕಾರಣ. ಮೆಟ್ಟುಪಾಳಯಂನಲ್ಲಿ 326 ಮೀಟರ್ ಎತ್ತರದಲ್ಲಿ ಪ್ರಾರಂಭವಾಗುವ ಹಳಿ, ಊಟಿ ತಲುಪುವಷ್ಟರಲ್ಲಿ 2,203 ಮೀಟರ್ ಎತ್ತರಕ್ಕೆ ಏರುತ್ತದೆ. ಈ ಕಡಿದಾದ ಹಾದಿಯಲ್ಲಿ ರೈಲು ಹಿಂದಕ್ಕೆ ಜಾರದಂತೆ ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಭಾರತದಲ್ಲಿ ಈ ತಂತ್ರಜ್ಞಾನವಿರುವ ಏಕೈಕ ರೈಲು ಮಾರ್ಗ ಇದಾಗಿದೆ.
55
2-3 ತಿಂಗಳು ಮುಂಚೆ ಬುಕ್ ಮಾಡಬೇಕು!
ಈ ರೈಲು ಪ್ರತಿದಿನ ಬೆಳಗ್ಗೆ 07:10ಕ್ಕೆ ಮೆಟ್ಟುಪಾಳಯಂನಿಂದ ಹೊರಟು ಮಧ್ಯಾಹ್ನ 12:00ಕ್ಕೆ ಊಟಿ ತಲುಪುತ್ತದೆ. ಮರಳಿ ಮಧ್ಯಾಹ್ನ 02:00ಕ್ಕೆ ಊಟಿಯಿಂದ ಹೊರಟು ಸಂಜೆ 05:30ಕ್ಕೆ ಮೆಟ್ಟುಪಾಳಯಂಗೆ ಬರುತ್ತದೆ. ಕೂನೂರ್‌ವರೆಗೆ ಹಬೆಯಂತ್ರದಿಂದ, ನಂತರ ಡೀಸೆಲ್ ಇಂಜಿನ್‌ನಿಂದ ಈ ರೈಲು ಚಲಿಸುತ್ತದೆ.
ಈ ಟಾಯ್ ಟ್ರೈನ್‌ಗೆ ವಿಶ್ವಾದ್ಯಂತ ಬೇಡಿಕೆಯಿರುವುದರಿಂದ, ಕನಿಷ್ಠ 2-3 ತಿಂಗಳು ಮುಂಚಿತವಾಗಿ ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಉತ್ತಮ. ಬೆಟ್ಟದ ಮೇಲೆ ಚಳಿ ಇರುವುದರಿಂದ ಸ್ವೆಟರ್ ಅಥವಾ ಜಾಕೆಟ್ ಇಟ್ಟುಕೊಳ್ಳಿ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಮುಂಗಡ ಬುಕ್ಕಿಂಗ್ ಅತ್ಯಗತ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ