Published : May 10, 2026, 10:18 AM ISTUpdated : May 10, 2026, 10:40 AM IST
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್, ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ವಿಜಯ್ ಜೊತೆ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಮಾರಂಭದಲ್ಲಿ ನಟಿ ತ್ರಿಷಾ ವಿಶೇಷ ಆಕರ್ಷಣೆಯಾಗಿದ್ದರು.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್‌ಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಜಯ್ ಜೊತೆಯಲ್ಲಿ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಹುಮತದ ಸಂಖ್ಯೆಯಾದ 118 ಅನ್ನು ಮೀರಿ ಅವರು 120 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಶನಿವಾರ ಸಂಜೆ ಸಲ್ಲಿಸಿದ್ದರು.
25
ಮೇ 13ರೊಳಗೆ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ
ಇದರ ಬೆನ್ನಲ್ಲೇ ರಾಜ್ಯಪಾಲರು ವಿಜಯ್ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಗಿತ್ತು. ಇಂದು ಬೆಳಗ್ಗೆ ಜವಾಹರಲಾಲ್ ನೆಹರು ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆದಿದೆ. ಮೇ 13ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ನಿಯೋಜಿತ ಸಿಎಂ ವಿಜಯ್‌ಗೆ ರಾಜ್ಯಪಾಲರು ಸೂಚಿಸಿದ್ದಾರೆ.
234 ಸದಸ್ಯಬಲದ ತಮಿಳುನಾಡಿನಲ್ಲಿ ಸರಳ ಬಹುಮತಕ್ಕೆ 118 ಸ್ಥಾನಗಳು ಅಗತ್ಯ. ಟಿವಿಕೆ 108 ಸ್ಥಾನಗಳನ್ನು ಹೊಂದಿದೆ. ಆದರೆ ವಿಜಯ್ 2 ಕ್ಷೇತ್ರದಲ್ಲಿ ಗೆದ್ದ ಕಾರಣ ಅದರ ಬಲವನ್ನು 107 ಎಂದು ಪರಿಗಣಿಸಲಾಗುತ್ತದೆ. ಬಹುಮತಕ್ಕೆ ಆರಂಭದಲ್ಲಿ 11 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿತ್ತು. ಹೀಗಾಗಿ ಮೊದಲು ಕಾಂಗ್ರೆಸ್ ಪಕ್ಷ ಅವರನ್ನು ಬೆಂಬಲಿಸಿತ್ತು. ಪರಿಣಾಮವಾಗಿ ಮೈತ್ರಿಕೂಟದ ಬಲ 112ಕ್ಕೆ ಏರಿತ್ತು. ಬಳಿಕ ಸಿಪಿಎಂನ 2 ಹಾಗೂ ಸಿಪಿಐನ 2 ಶಾಸಕರು ಬೆಂಬಲ ಘೋಷಿಸಿದ್ದರು. ಆಗ ಬಲ 116ಕ್ಕೆ ಏರಿತ್ತು. ಇದೀಗ ಸಿವಿಕೆಯ 2 ಹಾಗೂ ಮುಸ್ಲಿಂ ಲೀಗ್‌ನ 2 ಶಾಸಕರ ಬೆಂಬಲದೊಂದಿಗೆ 118ರ ಮ್ಯಾಜಿಕ್ ಸಂಖ್ಯೆ ದಾಟಿ 120ಕ್ಕೆ ಕೂಟದ ಬಲವರ್ಧನೆ ಆಗಿದೆ.
55
ಆಕರ್ಷಣೆಯ ಕೇಂದ್ರ ಬಿಂದುವಾದ್ರು ತ್ರಿಷಾ
ಸಿಎಂ ದಳಪತಿ ವಿಜಯ್ ಅವರ ಗೆಳತಿ, ಖ್ಯಾತ ನಟಿ ತ್ರಿಷಾ ಸಾಂಪ್ರದಾಯಿಕ ಉಡುಪಿನಲ್ಲಿ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ್ದರು. ಕಾರ್‌ನಿಂದ ಇಳಿಯುತ್ತಲೇ ಜನರತ್ತ ಸಂತೋಷದಿಂದ ಕೈಬೀಸಿದರು. ತ್ರಿಷಾ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಘೋಷಣೆ ಕೂಗಲು ಆರಂಭಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ