Makhanlal Sarkar: 98 ವರ್ಷದ ಮುಖರ್ಜಿ ಆಪ್ತನ ಪಾದ ಮುಟ್ಟಿ ಮೋದಿ ಗೌರವ!

Kannadaprabha News   | Kannada Prabha
Published : May 10, 2026, 06:54 AM IST

ಪಶ್ಚಿಮ ಬಂಗಾಳದಲ್ಲಿ ಪಕ್ಷದ ಮೊದಲ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 98 ವರ್ಷದ ಬಿಜೆಪಿಯ ಹಿರಿಯ ನಾಯಕ ಮಖನ್‌ಲಾಲ್‌ ಸರ್ಕಾರ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು.

PREV
15
ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಸರ್ಕಾರ

ಪಶ್ಚಿಮ ಬಂಗಾಳದಲ್ಲಿ ಪಕ್ಷದ ಮೊದಲ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 98 ವರ್ಷದ ಬಿಜೆಪಿಯ ಹಿರಿಯ ನಾಯಕ ಮಖನ್‌ಲಾಲ್‌ ಸರ್ಕಾರ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು.

25
ಶ್ಯಾಮ ಪ್ರಸಾದ್ ಮುಖರ್ಜಿ ಆಪ್ತ ಸರ್ಕಾರ್

1952ರಲ್ಲಿ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸುವ ಚಳವಳಿಯ ವೇಳೆ ಸರ್ಕಾರ್ ಅವರನ್ನು ಕಾಶ್ಮೀರದಲ್ಲಿ ಬಂಧಿಸಲಾಗಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಷ್ಟ್ರೀಯವಾದಿ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಗಳಲ್ಲಿ ಸರ್ಕಾರ್ ಕೂಡ ಒಬ್ಬರಾಗಿದ್ದರು.

35
ಮುಖರ್ಜಿ ಆಪ್ತ ಸರ್ಕಾರ್ ಆಶೀರ್ವಾದ ಪಡೆದ ಮೋದಿ

ವೇದಿಕೆಯಲ್ಲಿ ಸರ್ಕಾರ್ ಅವರನ್ನು ಸನ್ಮಾನಿಸಿದ ಪ್ರಧಾನಿ, ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು ಮತ್ತು ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೊದಲು ಹಿರಿಯ ನಾಯಕನನ್ನು ಅಪ್ಪಿಕೊಂಡರು.

45
- 80ರ ದಶಕದಲ್ಲೇ ಬಂಗಾಳದಲ್ಲಿ ಬಿಜೆಪಿ ಕಟ್ಟಿದ್ದ ಸರ್ಕಾರ್‌

1980 ರಲ್ಲಿ ಬಿಜೆಪಿ ರಚನೆಯಾದ ನಂತರ, ಸರ್ಕಾರ್ ಅವರು ಎಡರಂಗ ಆಳ್ವಿಕೆ ನಡೆಸುತ್ತಿದ್ದ ಪ.ಬಂಗಾಳದ ಆಗಿನ ಪಶ್ಚಿಮ ದಿನಾಜ್‌ಪುರ, ಜಲ್‌ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳಿಗೆ ಸಂಘಟನಾ ಸಂಯೋಜಕರಾಗಿದ್ದರು.

55
ಮುಖರ್ಜಿ ಆಪ್ತ ಸರ್ಕಾರ್

1981ರಿಂದ ಅವರು ನಿರಂತರವಾಗಿ 7 ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories